ಥಟ್ಟನೇ ಕೋಪ ಮಾಡಿಕೊಳ್ಳುವ ಹುಡುಗಿಯರ ಕಥೆಯಿದು!

By Manu

ನಿಸರ್ಗ ಪ್ರತಿ ಜೀವಿಗೂ ತನ್ನ ಆತ್ಮರಕ್ಷಣೆಗಾಗಿ ಏನಾದರೊಂದು ಆಯುಧವನ್ನು ನೀಡಿದೆ. ಇರುವೆಗೆ ಹಲ್ಲು, ಬೆಕ್ಕಿಗೆ ಉಗುರು, ಇತ್ಯಾದಿ. ನಿರಾಪಾಯಕಾರಿ ಎಂದೆನಿಸುವ ಬಾವಿಯ ಆಮೆಗೆ ಏನು ಕೊಟ್ಟಿದೆ ಗೊತ್ತೇ? ದುರ್ವಾಸನೆ! ಅಂತೆಯೇ ಜಗತ್ತಿನಲ್ಲಿರುವ ವ್ಯಕ್ತಿಗಳೂ ತಮ್ಮ ರಕ್ಷಣೆಗಾಗಿ ಯಾರನ್ನಾದರೂ ಅಥವಾ ಇತರರಲ್ಲಿರದ ಯಾವುದೋ ಗುಣವನ್ನು ತಮ್ಮ ಆಯುಧವನ್ನಾಗಿ ಬಳಸುತ್ತಾರೆ. ಜನರ ನಡವಳಿಕೆ ಮತ್ತು ಇವರ ಪ್ರತಿಕ್ರಿಯೆಯನ್ನು ಅನುಸರಿಸಿ ನಾವು ಅವರು ಒಳ್ಳೆಯವರೋ ಕೆಟ್ಟವರೋ ಎಂಬ ಹಣೆಪಟ್ಟಿಯನ್ನು ಕೊಟ್ಟು ಬಿಡುತ್ತೇವೆ. ಯಾರ ಪ್ರತಿಕ್ರಿಯೆ ಅಥವಾ ವರ್ತನೆ ನಮಗೆ ಇಷ್ಟವಾಗುವುದಿಲ್ಲವೋ ಅವರನ್ನು ದೂರವಾಗಿಸುತ್ತೇವೆ.

ಆದರೆ ವಾಸ್ತವವಾಗಿ ಆ ಕ್ಷಣದ ವರ್ತನೆ ಅವರ ಒಂದು ಆತ್ಮರಕ್ಷಣೆಯ ವಿಧಾನವೇ ಆಗಿರಬಹುದು ಅದನ್ನೇ ಅವರ ಸ್ವಭಾವವೆಂದು ತೀರ್ಮಾನಿಸಿಬಿಡುವುದು ತಪ್ಪಾಗುತ್ತದೆ. ವ್ಯಕ್ತಿಯೊಬ್ಬ ಕೋಪದ ಸ್ವಭಾವದವ ಎಂಬ ಒಂದೇ ಕಾರಣಕ್ಕೆ ಆತನನ್ನು ದೂರ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಮನಃಶಾಸ್ತ್ರಜ್ಞರ ಪ್ರಕಾರ ಇವರು ತಮ್ಮ ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೇ ತಮ್ಮ ಕೋಪವನ್ನು ಥಟ್ಟನೇ ತೋರ್ಪಡಿಸಿ ಕೊಂಚಹೊತ್ತಿನ ಬಳಿಕ ನಿರಾಳರಾಗುತ್ತಾರೆ. ಕೋಪ ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕಿ ಇದನ್ನು ಸರಿಪಡಿಸಿ ಇದಕ್ಕೆ ಕಾರಣರಾದವರನ್ನು ತಿದ್ದುತ್ತಾರೆ. ಸೈತಾನನ ಸ್ವಭಾವದ ಕೋಪ, ನಮಗ್ಯಾಕೆ ಬೇಕು ಅಲ್ಲವೇ?

ಇದೇ ಕಾರಣಕ್ಕೆ ನಮ್ಮ ನಡುವ ಹಲವಾರು ಜನರು ಥಟ್ಟನೇ ಕೋಪ ವ್ಯಕ್ತಪಡಿಸಿದರೆ ಇದನ್ನು ಸಕಾರಾತ್ಮಕವಾಗಿ ಪರಿಗಣಿಸಿದಷ್ಟೂ ಉತ್ತಮ. ಆದರೆ ಮನಃಶಾಸ್ತ್ರಜ್ಞರ ಪ್ರಕಾರ ಕೋಪ ಬರುವಂತಹ ಪ್ರಸಂಗದಲ್ಲಿ ಏನೂ ಆಗದಂತೆ ವರ್ತಿಸುವವರು ಅತ್ಯಂತ ಅಪಾಯಕಾರಿ ಜನರು. ಏಕೆಂದರೆ ಇವರ ಮನದಲ್ಲಿ ಈ ಪರಿಸ್ಥಿತಿ ಎದುರಾದವರ ಬಗ್ಗೆ ದ್ವೇಶ ಮೂಡಿ ಸೇಡು ತೀರಿಸಿಕೊಳ್ಳಲು ಸೂಕ್ತಸಮಯಕ್ಕಾಗಿ ಕಾಯುತ್ತಿರುತ್ತದೆ. ಇದರ ಪರಿಣಾಮ ಎಷ್ಟು ಭೀಕರವಾಗಿರಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಚಿಕ್ಕವನಿದ್ದಾಗ ಒಂದು ಕ್ಯಾಂಡಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ವೀರಪ್ಪನ್ ತನ್ನ ಸಿಟ್ಟನ್ನು ಹೇಗೆ ಬೆಳೆಸಿದ, ಹೇಗೆ ಭಯೋತ್ಪಾದಕನಾದ ಎಂದು ಎಲ್ಲರಿಗೂ ಗೊತ್ತೇ ಇದೆ. ಕೋಪದಿಂದಾಗಿ ದೇಹದಲ್ಲಿ ಆಗುವ ಬದಲಾವಣೆಗಳಿವು!

ಆದ್ದರಿಂದ ಥಟ್ಟನೇ ತಮ್ಮ ಕೋಪವನ್ನು ವ್ಯಕ್ತಪಡಿಸುವ, ಬೈಗುಳದ ಮೂಲಕ ತೀರಿಸಿಕೊಳ್ಳುವವರನ್ನು ಕೆಟ್ಟವರೆಂದು ಸರ್ವಥಾ ತೀರ್ಮಾನಿಸಲಾಗದು. ಆ ಸಮಯದ ಪರಿಸ್ಥಿತಿ, ಅಸಹಾಯಕತೆ, ಚಿಕ್ಕಂದಿನಿಂದ ನಡೆದುಬಂದ ಪರಿ, ಸುತ್ತ ಮುತ್ತಲಿರುವ ಜನರು ನಡೆಸಿಕೊಳ್ಳುವ ರೀತಿ ಮೊದಲಾದವು ಅವರನ್ನು ಆ ರೀತಿ ನಡೆಸಿಕೊಳ್ಳಲು ಪ್ರೇರೇಪಿಸಿರಬಹುದು. ಆದರೆ ಅವರನ್ನು ಅರ್ಥಮಾಡಿಕೊಳ್ಳುವ ಮೂಲಕ ಪ್ರತಿಬಾರಿ ಅವರ ಕೋಪಕ್ಕೆ ತುತ್ತಾಗಬೇಕು ಎಂದು ಸರ್ವಥಾ ಅರ್ಥವಲ್ಲ. ಕೆಲವು ಮಹಿಳೆಯರು ಇತರರಿಗಿಂತ ಹೆಚ್ಚು ಗಯ್ಯಾಳಿಗಳು ಅಥವಾ ನಿಂದಕರಾಗಿರುತ್ತಾರೆ. ಎಲ್ಲರೂ ಇವರಿಂದ ದೂರ ಇರಲು ಇಚ್ಛಿಸುತ್ತಾರೆ. ಹೆಣ್ಣಿನ ಮನಸ್ಸನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ!

ಸಾಮಾನ್ಯವಾಗಿ ಇವರಿಗೆ ತಮ್ಮ ನಿಂದನೀಯ ಮಾತಿನಿಂದ, ಇವರ ಕೋಪದ ಮಾತಿನಿಂದ ರೋಸಿ ಜನರು ತಮ್ಮಿಂದ ದೂರ ಹೋಗುತ್ತಿರುವುದರ ಬಗ್ಗೆ ಅರಿವಿದ್ದರೂ ಇದರಿಂದ ತಮಗಾಗುವ ನಷ್ಟದ ಬಗ್ಗೆ ಅರಿವೇ ಇರುವುದಿಲ್ಲ. ಆದರೆ ಸಾವಧಾನವಾಗಿ ಉತ್ತಮ ಮಾತುಗಳಿಂದ ಇವರ ಸಿಟ್ಟನ್ನು ದೂರಗೊಳಿಸಲು ಯತ್ನಿಸುವುದು ಉತ್ತಮ. ಈ ಪ್ರಯತ್ನಕ್ಕೆ ಇವರ ನಿಂದನೀಯ ಮಾತು ಅಥವಾ ಸಿಟ್ಟಿಗೆ ಕಾರಣವೇನಿರಬಹುದು ಎಂದು ಗೊತ್ತಾದರೆ ಕೆಲಸ ಸುಲಭವಗುತ್ತದೆ. ಒಂದು ವೇಳೆ ನಿಮ್ಮ ಆಪ್ತರು ಗಯ್ಯಾಳಿಯಾಗಿದ್ದು ಅವರನ್ನು ಸರಿಪಡಿಸಲು ನೀವು ಯತ್ನಿಸುವುದಾದರೆ ಕೆಳಗಿನ ಮಾಹಿತಿ ನಿಮ್ಮ ನೆರವಿಗೆ ಬರಲಿದೆ...

ಇವರ ಪಾಲಕರು ಅತಿ ನಿಯಂತ್ರಣದಲ್ಲಿರಿಸಿದ್ದಿರಬಹುದು

ಇವರ ಪಾಲಕರು ಅತಿ ನಿಯಂತ್ರಣದಲ್ಲಿರಿಸಿದ್ದಿರಬಹುದು

ಕೆಲವು ಮಕ್ಕಳ ಪಾಲಕರು ತಮ್ಮ ಮಕ್ಕಳ ಪ್ರತಿ ಅತಿ ಹೆಚ್ಚು ಕಟ್ಟುನಿಟ್ಟಿನ, ಶಿಸ್ತಿನ ಕ್ರಮಗಳನ್ನು ಅನುಸರಿಸುವುದನ್ನು ಕಾಣಬಹುದು. ಮಕ್ಕಳನ್ನು ಹೆದರಿಸಿಟ್ಟರೆ ತಾವು ಹೇಳಿದ ಹಾಗೆ ಕೇಳುತ್ತಾರೆ ಎಂಬ ಭಾವನೆ, ಇಂದು ಪೆಟ್ಟು ನೀಡಿದರೇ ಮುಂದೆಯೂ ತಮ್ಮ ಮಾತು ಕೇಳುತ್ತಾರೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಮೊದಲಾದ ನಂಬಿಕೆಗಳಿಂದ ಕೆಲವು ಪಾಲಕರು ತಮ್ಮ ಮಕ್ಕಳನ್ನು ಅತ್ಯಂತ ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆಸುತ್ತಾರೆ. ಇದೇ ವಾತಾವರಣದಲ್ಲಿ ಬೆಳೆದ ಮಕ್ಕಳು ದೊಡ್ಡವರಾದ ಬಳಿಕ ಸ್ವಾಭಾವಿಕವಾಗಿ ಗಯ್ಯಾಳಿಗಳಾಗುತ್ತಾರೆ.

ಇವರ ಅತೀವ ಅಭದ್ರತೆ ಕಾಡುತ್ತದೆ

ಇವರ ಅತೀವ ಅಭದ್ರತೆ ಕಾಡುತ್ತದೆ

ತಾವು ಅಭದ್ರರು ಎಂಬ ಭಾವನೆಯುಳ್ಳ ಜನರು ತಮ್ಮ ಮಾತಿನ ಮೂಲಕ ಇತರರನ್ನು ತಮ್ಮ ನಿಯಂತ್ರಣದಲ್ಲಿರಿಸಲು ಯತ್ನಿಸುತ್ತಾರೆ. ಇವರಿಗೆ ಅವ್ಯಕ್ತ ಭಯ ಮತ್ತು ಅಸುರಕ್ಷತೆ ಕಾಡುತ್ತಿದ್ದು ಈ ಭಯದಿಂದ ಮತ್ತು ಇದರಿಂದ ಮನಸ್ಸಿನಾಳದಲ್ಲಿ ಮೂಡಿದ ತಳಮಳದಿಂದ ಪಾರಾಗಳು ಬೈಗಳುಗಳ ಆಸರೆ ಪಡೆಯುತ್ತಾರೆ. ಎಲ್ಲಿಯವರೆಗೆ ಬೈಗಳುಗಳ ಮೂಲಕ ಎದುರಿನವರು ತೆಪ್ಪಗಿರುತ್ತಾರೆಯೋ ಅಲ್ಲಿಯವರೆಗೆ ಇವರು ಮಾನಸಿಕವಾಗಿ ದೃಢತೆಯನ್ನು ಅನುಭವಿಸುತ್ತಾರೆ.

ಇವರಿಗೆ ಆತಂಕದ ತೊಂದರೆ ಇರಬಹುದು

ಇವರಿಗೆ ಆತಂಕದ ತೊಂದರೆ ಇರಬಹುದು

ಕೆಲವು ವ್ಯಕ್ತಿಗಳಿಗೆ ವಿನಾಕಾರಣ ಆತಂಕ, ತಲ್ಲಣಗೊಳ್ಳುವ, ಚಿಕ್ಕಪುಟ್ಟ ತೊಂದರೆಗಳಿಗೂ ಹೌಹಾರುವ ಸ್ವಭಾವವಿರುತ್ತದೆ. ಇವರು ಸಾಮಾನ್ಯವಾಗಿ ಚಿಕ್ಕಪುಟ್ಟ ತೊಂದರೆಗೆ ಅತೀವವಾದ ಪರಿಣಾಮಗಳನ್ನು ಕಲ್ಪಿಸಿಕೊಂಡು ಆತಂದಲ್ಲಿಯೇ ಇರುತ್ತಾರೆ. ಇವರಿಗೆ ಎದುರಿನಲ್ಲಿದ್ದವರೆಲ್ಲಾ ಆ ಅತೀವ ಪರಿಣಾಮಗಳಿಗೆ ಒಂದಲ್ಲಾ ಒಂದು ರೀತಿ ಕಾರಣರು ಎಂಬಂತೆ ವರ್ತಿಸಿ ಹೀಗಾಗಲು ನೀವೇ ಕಾರಣ ಎಂಬಂತೆ ಬೈಗಳುಗಳಿಂದ ತಮ್ಮ ಮನ ತಣಿಸಿಕೊಳ್ಳಲು ನೋಡುತ್ತಾರೆ.

ಇವರಿಗೆ ಹೆಣ್ಣಾಗಿರುವುದೇ ಒಂದು ಕೀಳರಿಮೆ

ಇವರಿಗೆ ಹೆಣ್ಣಾಗಿರುವುದೇ ಒಂದು ಕೀಳರಿಮೆ

ಕೇಳಿದರೆ ಅಚ್ಚರಿಯಾದರೂ ಕೆಲವು ಮಹಿಳೆಯರಿಗೆ ತಾವು ಹೆಣ್ಣಾಗಿರುವುದೇ ಒಂದು ಶಾಪವೆಂಬಂತೆ ವರ್ತಿಸುತ್ತಾರೆ. ಇದಕ್ಕೆ ಕಾರಣವೂ ಸಮರ್ಥನೀಯವಾಗಿದೆ. ಶತಮಾನಗಳಿಂದ ಹೆಣ್ಣನ್ನು ಗಂಡಿಯ ಅಡಿಯಾಳು, ಗುಲಾಮಳು ಎಂಬಂತೆ ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇವರಿಗೆ ಹೆಣ್ಣಾಗಿರುವುದೇ ಒಂದು ಕೀಳರಿಮೆ

ಇವರಿಗೆ ಹೆಣ್ಣಾಗಿರುವುದೇ ಒಂದು ಕೀಳರಿಮೆ

ದೈಹಿಕವಾಗಿ ಪುರುಷನಿಗಿಂತ ಕೊಂಚ ದುರ್ಬಲಳಾಗಿರುವ ಕಾರಣ ಈ ಮೂಲಕ ಗೆಲ್ಲಲಾರದೇ ಹೋದರೂ ತಮ್ಮ ನಾಲಿಗೆಯ ಬಲದ ಆಧಾರದ ಮೇಲೆ ಪುರುಷರ ಮೇಲೆ ವಿಜಯ ಸಾಧಿಸುವುದು ಇವರ ಗುರಿಯಾಗಿದ್ದು ಈ ಅಸ್ತ್ರವನ್ನು ಅವರು ಇಡಿಯ ಜೀವಮಾನ ಹರಿತ ಮಾಡುತ್ತಾ ಬಂದಿದ್ದು ಸೂಕ್ತ ಸಂದರ್ಭ ಬಂದ ಕೂಡಲೇ ತಮ್ಮ ಅಪಾರವಾದ ಶಬ್ಧಾಪಾಂಡಿತ್ಯದಿಂದ ಪುರುಷರನ್ನು ನೀರಾಗಿಸುತ್ತಾರೆ. ಇದೇ ಕಾರಣಕ್ಕೆ ಗಯ್ಯಾಳಿಗಳನ್ನು 'ಆಕೆಯ ಬಾಯಿ ಬಾಯಿಯಲ್ಲ, ಬೊಂಬಾಯಿ' ಎಂದು ಇತರರು ಹೀಯಾಳಿಸುತ್ತಾರೆ.

ಒಟ್ಟಾರೆ ಗೆಲ್ಲುವುದೇ ಮುಖ್ಯ

ಒಟ್ಟಾರೆ ಗೆಲ್ಲುವುದೇ ಮುಖ್ಯ

ಈ ಜಗತ್ತಿನಲ್ಲಿ ಎಲ್ಲರೂ ನೋಡುವುದು ಯಶಸ್ಸನ್ನೇ ಹೊರತು ಎರಡನೆಯ ಸ್ಥಾನ ಪಡೆದ ಅಥವಾ ಪ್ರಾಮಾಣಿಕ ಪ್ರಯತ್ನ ನಡೆಸಿದವರನ್ನು ಅಲ್ಲ. ಇದು ಗಯ್ಯಾಳಿಗಳಿಗೆ ಇತರರಿಗಿಂತ ಚೆನ್ನಾಗಿ ಗೊತ್ತು. ಅವರಿಗೆ ಒಟ್ಟು ಹೇಗಾದರೂ ಗೆಲ್ಲಬೇಕು. ಗೆಲ್ಲಲು ಅವರು ಬಳಸಿಕೊಳ್ಳುವ ಅಸ್ತ್ರವೆಂದರೆ ಕಾಲುಕೆದರಿ ಜಗಳಕ್ಕೆ ಬರುವುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಟ್ಟಾರೆ ಗೆಲ್ಲುವುದೇ ಮುಖ್ಯ

ಒಟ್ಟಾರೆ ಗೆಲ್ಲುವುದೇ ಮುಖ್ಯ

ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದನ್ನು ಇವರು ತಮ್ಮ ಜಗಳದ ಅವಧಿಯಲ್ಲಿ ಅನುಸರಿಸಿ ತೋರಿಸುತ್ತಾರೆ. ಇವರ ಬಾಯಿಮಾತಿಗೆ ಹೆದರಿ ಉಳಿದವರು ಜಾಗ ಖಾಲಿ ಮಾಡಿದಾಗ ಇವರು ವಿಜಯೋತ್ಸವ ಆಚರಿಸಿ ಸಂಭ್ರಮಿಸುತ್ತಾರೆ.

English summary

Why Abusive Women Are Abusive?

Generally, we tend to label people as good or bad. Its easy to label and categorise people and stay away from them. But it is difficult to understand why someone is what they are. Yes, there are reasons for everything that happens in this world and the same applies to human personalities too. A good person is good because his situations, genetics, environment and the people around him have played a role in making him good.
Story first published: Thursday, April 7, 2016, 17:02 [IST]
X
Desktop Bottom Promotion