Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೀಲ್ ಜೀವನಕ್ಕೂ ರಿಯಲ್ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ!
ಪ್ರೀತಿ, ಪ್ರೇಮ ಎನ್ನುವುದು ಜೀವನದ ಅಂಗವಾಗಬೇಕೇ ಹೊರತು ಅದೇ ಉಸಿರು ಎಂದು ಹೇಳುತ್ತಾ ಹೊರಟರೆ ನಮ್ಮ ಜೀವನ ಯಾವ ಕಡೆಗೆ ಸಾಗುತ್ತದೋ ಗೊತ್ತಾಗಲ್ಲ. ಸಿನಿಮಾಗಳಲ್ಲಿ ನೋಡಿದಂತೆ ನಾವು ಕೂಡ ಪ್ರೀತಿಸಬೇಕು ಎಂದರೆ ಖಂಡಿತವಾಗಿಯೂ ಅದು ಸಾಧ್ಯವಿಲ್ಲ. ರೀಲ್ ಜೀವನಕ್ಕೂ ರಿಯಲ್ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ. ಅದರಲ್ಲೂ ಪ್ರೀತಿ ಪ್ರೇಮದ ಸಂಬಂಧದಲ್ಲಿ ಏಳುಬೀಳುಗಳು ಇದ್ದೇ ಇರುತ್ತದೆ. ಕೈ ಹಿಡಿಯುವ 'ನಲ್ಲನ' ಬಗ್ಗೆ ಆಕೆಯಲ್ಲಿರುವ ತಳಮಳ...
ಕೇವಲ ಸಂತೋಷ ಮಾತ್ರ ಇರುತ್ತದೆ ಎನ್ನುವುದು ಮೂರ್ಖತನವಾಗಬಹುದು. ಕೇವಲ ಒಬ್ಬನಿಂದಾಗಿ ಒಂದು ಸಂಬಂಧವನ್ನು ನಾವು ಅಳೆಯಲು ಸಾಧ್ಯವಿಲ್ಲ. ಸಂಬಂಧದಲ್ಲಿ ಇಬ್ಬರು ಸಮಾನವಾಗಿ ಭಾಗಿಯಾಗಿರಬೇಕು ಮತ್ತು ಅವರು ಪರಸ್ಪರರನ್ನು ಗೌರವಿಸಬೇಕು. ಆಕೆ ನಗೆ ಬೀರಿದರೆ, ಅದನ್ನೇ ಪ್ರೀತಿ ಅಂದುಕೊಳ್ಳುವುದೇ?
ಮಹಿಳೆಯರು ದೀರ್ಘ ಕಾಲದ ಸಂಬಂಧದ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ. ಪ್ರತಿಯೊಬ್ಬ ಮಹಿಳೆಯಲ್ಲೂ ಆಲೋಚನೆ ಇದ್ದೇ ಇರುತ್ತದೆ. ಸಂಪೂರ್ಣವಾಗಿ ಪ್ರೀತಿಯಲ್ಲಿ ಬೀಳುವ ಮೊದಲು ಪ್ರತೀ ಮಹಿಳೆಯ ತಲೆಯಲ್ಲೂ ಇಂತಹ ಆಲೋಚನೆಗಳು ಇರುತ್ತದೆ ಎನ್ನುವುದು ಖಚಿತ. ಇದರ ಬಗ್ಗೆ ಮುಂದೆ ಓದಿಕೊಳ್ಳಿ.

ಬಲೆಗೆ ಸಿಲುಕು
ಬದ್ಧತೆಯಿಂದ ಇರುವುದು ಅಥವಾ ದೀರ್ಘ ಕಾಲದ ಸಂಬಂಧದ ಬಗ್ಗೆ ಪುರುಷರು ಮಾತ್ರ ಹೀಗೆ ಯೋಚಿಸುವುದಿಲ್ಲ. ಮಹಿಳೆಯರು ಇದನ್ನೇ ಯೋಚಿಸುತ್ತಾರೆ. ಅವರು ಬಲೆಗೆ ಬಿದ್ದಿದ್ದಾರೆಂದು ಯೋಚಿಸುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಒಂಟಿಯಾಗಿರಬೇಕಿತ್ತೆಂದು ಅವರು ಭಾವಿಸುತ್ತಾರೆ.

ಡೇಟಿಂಗ್ ಇಲ್ಲ
ಸಂಬಂಧದಲ್ಲಿ ಇರುವ ಮಹಿಳೆ ಬೇರೆ ಯಾರ ಜತೆಯೂ ಡೇಟಿಂಗ್ ಮಾಡಲು ಬಯಸದೆ ಇದ್ದರೆ ಇದರಿಂದ ಆಕೆಗೆ ಯಾವುದೇ ಪರಿಣಾಮವಾಗುವುದಿಲ್ಲವೆಂದರ್ಥ. ಸಂಬಂಧದ ಬಗ್ಗೆ ಮಹಿಳೆ ಗಂಭೀರವಾಗಿಲ್ಲವೆಂದಾದರೆ ಮತ್ತು ಇತರ ಆಯ್ಕೆಯನ್ನು ಹುಡುಕುತ್ತಿದ್ದರೆ ಆಗ ದೀರ್ಘವಾದ ಸಂಬಂಧದಲ್ಲಿ ಉಳಿಯಲು ಮಹಿಳೆಗೆ ಕಷ್ಟವಾಗಬಹುದು.

ಅನಿಶ್ಚಿತ
ಮಹಿಳೆಗೆ ತನ್ನ ಭವಿಷ್ಯದ ಬಗ್ಗೆ ತುಂಬಾ ಭೀತಿಯಿರುತ್ತದೆ ಮತ್ತು ಸಂಬಂಧವು ಎಷ್ಟು ದೀರ್ಘ ಕಾಲ ಮುಂದುವರಿಯಬಹುದು ಎನ್ನುವ ಬಗ್ಗೆ ನಿಶ್ಚಿತವಾಗಿ ಏನೂ ತಿಳಿದಿರುವುದಿಲ್ಲ. ಸಂಬಂಧ ಮುರಿದರೆ ಇದನ್ನು ಸಹಿಸಿಕೊಳ್ಳುವುದು ಆಕೆಗೆ ಕಷ್ಟವಾಗಬಹುದು. ಇದರಿಂದಾಗಿ ಆಕೆ ದೀರ್ಘ ಕಾಲದ ಸಂಬಂಧದಿಂದ ದೂರ ಉಳಿಯಬಹುದು.

ಹುಡುಗನ ಬಗ್ಗೆ ಸಂಶಯ
ಮಹಿಳೆಗೆ ತನ್ನ ಸಂಗಾತಿ ಮೋಸ ಮಾಡುತ್ತಿದ್ದಾನೆ ಅಥವಾ ತನ್ನೊಂದಿಗೆ ಇರಲು ಆತ ಬೇರೆ ಯಾವುದೋ ಕಾರಣಗಳನ್ನು ಹುಡುಕುತ್ತಿದ್ದಾನೆ ಎಂದು ಅನಿಸಿದರೆ ಇಂತಹ ಪುರುಷನೊಂದಿಗೆ ದೀರ್ಘ ಕಾಲದ ಸಂಬಂಧ ಬೆಸೆಯಲು ಮಹಿಳೆ ತುಂಬಾ ಹೆದರುತ್ತಾಳೆ. ದೀರ್ಘ ಕಾಲದ ಸಂಬಂಧದಲ್ಲಿ ಉಳಿದುಕೊಳ್ಳಲು ಮಹಿಳೆಗೆ ಇದು ದೊಡ್ಡ ಭೀತಿಯಾಗಿದೆ.



Click it and Unblock the Notifications
