ಮದುವೆಗೆ ಮುಂಚೆ ಹುಡುಗರ ಆಲೋಚನೆ ಹೇಗಿರುತ್ತೆ ನೋಡಿ!

By Super

ಇಂದು ಯುವಜನಾಂಗದಲ್ಲಿ ಜೀವನಸಂಗಾತಿಯನ್ನು ಆರಿಸುವ ಪ್ರಕ್ರಿಯೆ ಪ್ರೀತಿಗಿಂತಲೂ ಹೆಚ್ಚಾಗಿ ಸಮಯ ಕಳೆಯುವ ಒಂದು ಸಾಧನವಾಗಿಯೇ ಬಳಸಲ್ಪಡುತ್ತದೆ. ನಿತ್ಯ ಬಟ್ಟೆ ಬದಲಿಸಿದಂತೆ ಇವರು ತಮ್ಮ ಗೆಳೆಯ ಗೆಳತಿಯರನ್ನು ಬದಲಿಸುತ್ತಾ ಇರುತ್ತಾರೆ. ಆದರೆ ಒಂದು ಘಟ್ಟದಲ್ಲಿ ಓರ್ವ ವ್ಯಕ್ತಿಯನ್ನು ಮನಸಾರೆ ಮೆಚ್ಚಿ ಜೀವನಸಂಗಾತಿಯಾಗಿಸಲು ಬಯಸುತ್ತಾರೆ.

ಅದರಲ್ಲೂ ಯುವಕರು ತಾವು ಮೆಚ್ಚಿದ ಗೆಳತಿಯನ್ನು ಸಂತೋಷದಲ್ಲಿರಿಸಲು ಜೀವನವನ್ನೇ ಮುಡಿಪಾಗಿಡುವಂತಹ ಮಾತುಗಳನ್ನಾಡುತ್ತಾರೆ. ಒಂದು ವೇಳೆ ನೀವು ಯುವಕರಾಗಿದ್ದು ಈಗಾಗಲೇ ಓರ್ವ ಗೆಳತಿಯನ್ನು ಜೀವನಸಂಗಾತಿಯಾಗಿ ಸಹಬಾಳ್ವೆಗೆ ಆರಿಸಿಕೊಂಡಿದ್ದರೆ ಆಕೆಯೂ ನಿಮಗೆ ಸೂಕ್ತ ಸಂಗಾತಿಯಾಗಬಲ್ಲಳೇ ಎಂದು ಹೇಗೆ ಗುರುತಿಸುತ್ತೀರಿ? ಈ ದ್ವಂದ್ವವನ್ನು ಕೆಳಗೆ ನೀಡಿರುವ ಮಾಹಿತಿ ನಿವಾರಿಸಲಿದೆ. ನಿಮಗೆ ಉತ್ತಮ ಜೀವನಸಂಗಾತಿಯಾಗಬಲ್ಲ ಗುಣಗಳನ್ನು ಆಕೆ ಹೊಂದಿದ್ದಾಳೆಯೇ ಎಂಬುದನ್ನು ಐದು ಸೂಚನೆಗಳನ್ನು ಗಮನಿಸಿದರೆ ಸಾಕು. ನಿಮ್ಮ ನಿರ್ಧಾರವನ್ನು ಗಟ್ಟಿಗೊಳಿಸಲು ಇದು ನೆರವಾಗುತ್ತದೆ. ಅಪನಂಬಿಕೆಗೆ ಟೂ ಬಿಡಿ, ಸುಖ ಸಂಸಾರಕ್ಕೆ ಜೈ ಅನ್ನಿ!

Traits Of An Awesome Girlfriend

ಆಕೆ ಸ್ವತಂತ್ರವಾಗಿರಬಲ್ಲಳು
ಯಾವುದೇ ಸಂಬಂಧದಲ್ಲಿ ಸ್ವಂತ ವ್ಯಕ್ತಿತ್ವಕ್ಕೆ ಹೆಚ್ಚಿನ ಬೆಲೆ ಇದೆ. ಪರಸ್ಪರ ಗೌರವಿಸುವ ಮುನ್ನ ಸ್ವಾಭಿಮಾನ ಇರುವುದು ಅತ್ಯಗತ್ಯವಾಗಿದೆ. ನೀವಿಬ್ಬರೂ ಮುಂದಿನ ಜೀವನವನ್ನು ಜೊತೆಯಾಗಿ ಕಳೆದರೂ ನಿಮ್ಮಿಬ್ಬರಿಗೂ ಪ್ರತ್ಯೇಕವಾದ ವ್ಯಕ್ತಿತ್ವವಿದ್ದು ಇಬ್ಬರೂ ಜೀವನದಲ್ಲಿ ಮುಂದುವರೆಯಲು ಪರಸ್ಪರ ಸಹಕಾರ ಮತ್ತು ಪ್ರೀತಿ ಅಗತ್ಯವಿದೆ. ಇದು ಆಕೆಯಲ್ಲಿದೆಯೇ ಮೊದಲು ಗಮನಿಸಿ. ನಿಮ್ಮ ಸಹಾಯವಿಲ್ಲದೆಯೂ ಸಮಾಜದಲ್ಲಿ ಬಾಳಲು ಸಮರ್ಥಳೇ ಗಮನಿಸಿ. ಇಬ್ಬರೂ ಒಬ್ಬರಿಗೊಬ್ಬರ ಮೇಲೆ ತಮ್ಮ ಆದ್ಯತೆಗಳನ್ನು ಹೇರದೇ ಸ್ವಂತ ಅಭಿಪ್ರಾಯ ವ್ಯಕ್ತಪಡಿಸಲು ಸಮರ್ಥರೇ ಗಮನಿಸಿ. ಹೌದು ಎಂದಾದರೆ ನಿಮ್ಮ ನಿರ್ಧಾರ ಸರಿ.

ಬುದ್ಧಿವಂತಳಾಗಿರಬೇಕು
ಗಂಡನ್ನು ಆಡಿಸಲು ಹೆಣ್ಣಿನ ಒಂದು ಕುಡಿನೋಟವೇ ಸಾಕಂತೆ. ರಾಜಮಹಾರಾಜರೇ ಈ ಕುಡಿನೋಟಕ್ಕೆ ಮರುಳಾಗಿದ್ದಾರೆ. ಇಂದಿನ ದಿನದಲ್ಲಿ ದಡ್ಡರಾಗಿರುವುದಕ್ಕಿಂತ ಇನ್ನೊಂದು ಕೊರತೆಯಿಲ್ಲ. ನಿಮ್ಮ ಗೆಳತಿ ಸಮಾಜದಲ್ಲಿ ನಿತ್ಯದ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥಳೇ, ಇಲ್ಲದಿದ್ದರೆ ಪ್ರತಿ ಕೆಲಸಕ್ಕೂ ನಿಮ್ಮ ಮೇಲೆಯೇ ಭಾರವಾಗಿರುತ್ತಾರೆಯೇ ಗಮನಿಸಿ. ಹೆಣ್ಣಿನ ಮನಸ್ಸೇ ಚಂಚಲ, ಅರ್ಥೈಸಿಕೊಳ್ಳುವುದೇ ಕಷ್ಟ!

ಆಕರ್ಷಕ ವ್ಯಕ್ತಿಯಾಗಿರಬೇಕು
ಪುರುಷರನ್ನು ಪ್ರಮುಖವಾಗಿ ಆಕರ್ಷಿಸುವುದು ಹೆಣ್ಣಿನ ಮೈಮಾಟವೇ ಹೊರತು ಬುದ್ದಿವಂತಿಕೆಯಲ್ಲ. ಆದರೆ ಇದು ಕೇವಲ ಪ್ರಥಮ ಭೇಟಿಗೆ ಮಾತ್ರ ಸೀಮಿತವಾಗಿದ್ದು ಹೆಣ್ಣಿನ ನಿಜವಾದ ಅಂತರ್ಯವೇ ಪ್ರಮುಖ ಸ್ಥಾನ ಪಡೆಯುತ್ತದೆ. ನಿಮ್ಮ ಗೆಳತಿಯ ವ್ಯಕ್ತಿತ್ವ ಸೌಂದರ್ಯಕ್ಕಿಂತಲೂ ಹೆಚ್ಚು ಆಕರ್ಷಕವಾಗಿದೆಯೇ ಗಮನಿಸಿ. ಅಂತೆಯೇ ನಿಮ್ಮಲ್ಲಿರುವ ಗುಣವನ್ನೇ ಆಕೆ ನೋಡುತ್ತಾಳೆ. ಅದಕ್ಕೇ ಅಲ್ಲವೇ ಹಿರಿಯರು ಹೇಳಿದ್ದು 'ಗುಣ ನೋಡಿ ಹೆಣ್ಣು ಕೊಡು'!

ನಿಮ್ಮನ್ನು ಗೌರವಿಸುವವಳಾಗಿರಬೇಕು
ಯಾವುದೇ ಸಂಬಂಧದಲ್ಲಿ ಪರಸ್ಪರ ಗೌರವ ಮತ್ತು ವಿಶ್ವಾಸವೇ ಜೀವಾಳವಾಗಿದೆ. ಇಬ್ಬರಲ್ಲಿಯೂ ಕೆಲವು ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದರೂ ಚರ್ಚೆಯ ಬಳಿಕ ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸುವವರಾಗಿದ್ದೀರೋ ಗಮನಿಸಿ. ಒಂದು ವೇಳೆ ಆಕೆ ನಿಮ್ಮ ಅಭಿಪ್ರಾಯಗಳನ್ನು ಗೌರವಿಸದಿದ್ದಲ್ಲಿ, ತನ್ನ ಮಾತಿಗೇ ಬೆಲೆ ಬರಬೇಕೆಂದು ಹಠ ಹಿಡಿದಿದ್ದರೆ ನಿಮ್ಮ ಆಯ್ಕೆಯ ಬಗ್ಗೆ ಯೋಚಿಸುವ ಅಗತ್ಯವಿದೆ. ಅದರಲ್ಲೂ ನಾಲ್ಕು ಜನರ ನಡುವೆ ಇದ್ದಾಗ ಈ ಹಠ ಮುಂದುವರೆದರೆ ಮಾತ್ರ ನಿಮ್ಮ ತೀರ್ಮಾನ ಸಡಿಲಿಸುವುದು ಉತ್ತಮ. ಪ್ರೇಯಸಿ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಾಳೆಯೇ?

ನಿಮ್ಮ ಏಳ್ಗೆಯನ್ನು ಬಯಸುವವಳಾಗಬೇಕು
ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದೆ ಓರ್‍ವ ಹೆಣ್ಣು ಇರುತ್ತಾಳೆ ಎಂಬ ಸುಭಾಷಿತದಂತೆ ನಿಮ್ಮ ಗೆಳತಿಯೂ ನಿಮ್ಮ ಜೀವನದ ಮಹತ್ವಕಾಂಕ್ಷೆಯನ್ನು ಪೂರ್ಣಗೊಳಿಸಲು ತನ್ನ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹ ಪ್ರಕಟಿಸುತ್ತಾಳೋ ಎಂದು ಗಮನಿಸಿ. ಹೌದು ಎಂದಾದರೆ ನಿಮ್ಮ ಆಯ್ಕೆಯನ್ನು ಸರ್ವಥಾ ಬದಲಿಸಬೇಡಿ. ಈ ಬಗ್ಗೆ ನಿಮ್ಮಲ್ಲಿ ಬೇರೆ ಉತ್ತಮ ಸಲಹೆಗಳಿದ್ದರೆ ಖಂಡಿತಾ ನಮ್ಮೊಂದಿಗೆ ಹಂಚಿಕೊಳ್ಳಿ. ಇದು ಇತರರಿಗೂ ಉಪಯುಕ್ತವಾಗಬಲ್ಲುದು.

Story first published: Wednesday, October 7, 2015, 23:18 [IST]
X
Desktop Bottom Promotion