Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಇವರು ಹಣ, ಐಶ್ವರ್ಯದ ಹಿಂದೆ ಹೋಗುವ ಹುಡುಗಿಯರಲ್ಲ!
ವಿವಾಹಕ್ಕೂ ಮೊದಲು ಯುವತಿಯರು ತಮ್ಮ ಕೈ ಹಿಡಿಯುವವರು ಆರ್ಥಿಕವಾಗಿ ಎಷ್ಟು ಸಬಲರು ಎಂಬ ವಿಷಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಒಂದರ್ಥದಲ್ಲಿ ಇದು ನಿಜವಾದರೂ ವಾಸ್ತವ ಹಾಗಿಲ್ಲ. ಒಂದು ವೇಳೆ ಕೇವಲ ಹಣವಂತರು ಮಾತ್ರ ವಿವಾಹಭಾಗ್ಯವನ್ನು ಹೊಂದುವಂತಾಗಿದ್ದರೆ ಇಡಿಯ ಜಗತ್ತಿನ ಬಡವರೆಲ್ಲಾ ಅವಿವಾಹಿತರಾಗಿಯೇ ಇರಬೇಕಿತ್ತು. ಆದರೆ ಇಂದು ಹಾಗಿಲ್ಲ.
ಏಕೆಂದರೆ ಯುವತಿಯರು ತಾವು ಮದುವೆಯಾಗುವ ವ್ಯಕ್ತಿಯ ಆರ್ಥಿಕ ಸ್ಥಿತಿಯ ಹೊರತಾಗಿಯೂ ಆತನ ನೈತಿಕ ಮತ್ತು ಭಾವನಾತ್ಮಕ ಮನೋಭಾವವನ್ನೂ ಪರಿಗಣಿಸುತ್ತಾರೆ. ವ್ಯಕ್ತಿ ಪ್ರಾಮಾಣಿಕನಾಗಿದ್ದು ಬಡವನಾಗಿದ್ದರೂ ಒಪ್ಪುವ ಯುವತಿಯರು ಶ್ರೀಮಂತನಾಗಿದ್ದೂ ಕಳ್ಳನಾಗಿದ್ದರೆ ಒಲ್ಲೆ ಎನ್ನುವುದು ಖಂಡಿತ. ಹಸಿರು ನೋಟುಗಳನ್ನು ತೋರಿಸಿ ಯಾವುದೇ ಯುವತಿಯನ್ನಾದರೂ ಬುಟ್ಟಿಗೆ ಹಾಕಿಕೊಳ್ಳುವೆವು ಎಂದು ಹಣವಂತರು ಅಂದುಕೊಂಡಿದ್ದರೆ, ಕ್ಷಮಿಸಿ, ನಾವು, ಯುವತಿಯರು ಈ ಬುಟ್ಟಿಗೆ ಬೀಳುವವರಲ್ಲ! ಎನ್ನುವ ಛಲ ಅವರಲ್ಲಿರುತ್ತದೆ. ಇವರು ಅಂತಿಂಥ ಹುಡುಗಿಯರಲ್ಲ, ನೇರವಾಗಿ ಹೇಳಿಬಿಡುತ್ತಾರೆ!
ಸಾಮಾನ್ಯವಾಗಿ ಯುವತಿಯರು, ಹಣಕ್ಕಿಂತಲೂ ಹೆಚ್ಚಾಗಿ ತಮ್ಮನ್ನು ಪ್ರೀತಿಸುವವರಿಂದ ಗೌರವವನ್ನೂ, ಆತ್ಮೀಯ ಅಪ್ಪುಗೆಯನ್ನೂ, ಅವರ ಗಮನವನ್ನೂ, ಅದರಲ್ಲೂ ಪೂರ್ಣಗಮನವನ್ನೂ ಬಯಸುತ್ತಾರೆ. ವಾಸ್ತವ ಜೀವನಕ್ಕೆ ಹಣ ಅಗತ್ಯ ಹೌದು, ಆದರೆ ಈ ಹಣ ತಮಗೆ ಸಮಯದ ಅಗತ್ಯಕ್ಕೆ ತಕ್ಕಂತೆ ಎಷ್ಟು ಅಗತ್ಯವೋ ಅಷ್ಟು ಸಾಕು. ಅಷ್ಟಕ್ಕೂ ನಮ್ಮನ್ನು ಪ್ರೀತಿಸುವವರಲ್ಲಿ ಅಷ್ಟೊಂದು ಹಣ ಇಲ್ಲದಿದ್ದರೆ ಅವರಲ್ಲಿರುವ ಹಣಕ್ಕೆ ಸಮನಾಗಿ ಸಿಗುವ ವಸ್ತುಗಳಲ್ಲಿಯೇ ನಾವು ತೃಪ್ತಿ ಕಂಡುಕೊಳ್ಳುತ್ತೇವೆ, ಎನ್ನುವ ಅಭಿಮತವನ್ನು ಹೊಂದಿರುತ್ತಾರೆ

ನಮ್ಮ ಪ್ರೀತಿಪಾತ್ರರು ತಮ್ಮ ಬೆವರಿನ ಹಣವನ್ನು, ಅದು ಎಷ್ಟೇ ಕಡಿಮೆ ಇರಲಿ, ನಮ್ಮ ಮೇಲೆ ಖರ್ಚು ಮಾಡಿದರೆ ಅದು ನಮ್ಮ ಪಾಲಿಗೆ ಹಣವಂತರು ಲಕ್ಷ ರೂಪಾಯಿ ಖರ್ಚು ಮಾಡಿದುದಕ್ಕಿಂತಲೂ ಹೆಚ್ಚಿನ ಪಾಲಿನ ಸಂತೋಷ ನೀಡುತ್ತದೆ. ಒಂದು ವೇಳೆ ಹಣವನ್ನು ಮಾತ್ರ ಯುವತಿಯರು ಪರಿಗಣಿಸುವುದಿಲ್ಲ ಎಂದಿದ್ದರೆ ಇನ್ನೇನನ್ನು ಪರಿಗಣಿಸುತ್ತಾರೆ ಎಂಬ ಕುತೂಹಲ ಮೂಡಿದೆಯೇ? ಬನ್ನಿ ಮುಂದೆ ನೀಡಲಾಗಿರುವ ಮಾಹಿತಿಯನ್ನು ಓದಿ...
ತಾಳ್ಮೆ:
ಯುವತಿಯರು ತಮ್ಮ ಜೀವನಸಂಗಾತಿಯಲ್ಲಿ ಬಯಸುವ ಒಂದು ಪ್ರಮುಖ ಗುಣವೆಂದರೆ ತಾಳ್ಮೆ. ತಾಳ್ಮೆಯಿಂದಿರುವವರೊಂದಿಗೆ ಭಗವಂತನಿರುತ್ತಾನೆ ಎಂದು ಮೂರೂ ಧರ್ಮಗ್ರಂಥಗಳು ತಿಳಿಸುತ್ತವೆ. ಯಾವುದೇ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಳ್ಳದೇ ವಿವೇಕದಿಂದ ವರ್ತಿಸುವ ವ್ಯಕ್ತಿಗಳನ್ನು ಯುವತಿಯರು ಪ್ರಮುಖವಾಗಿ ಅಪೇಕ್ಷಿಸುತ್ತಾರೆ.
ಗೌರವ:
ತನಗೆ ಓರ್ವ ವ್ಯಕ್ತಿಯ ಗೌರವವನ್ನು ನೀಡುವ ವ್ಯಕ್ತಿಯನ್ನು ಪ್ರತಿ ಯುವತಿಯೂ ಅಪೇಕ್ಷಿಸುತ್ತಾಳೆ. ಒಂದು ವೇಳೆ ಯುವತಿಯ ಹೃದಯವನ್ನು ಗೆಲ್ಲಬೇಕಿದ್ದರೆ ಆಕೆಯನ್ನು ನಿಮಗೆ ಸರಿಸಮಾನವಾದ ಗೌರವವನ್ನು ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿ.
ಪ್ರೀತಿ
ಅಚ್ಚ, ನಿಚ್ಚಳ ಮತ್ತು ವ್ಯಾಪಾರ ಮನೋಭಾವವಿಲ್ಲದ ಪ್ರೀತಿಯನ್ನು ಪ್ರತಿ ಯುವತಿಯೂ ಬಯಸುತ್ತಾಳೆ. ಹಣ, ಸಂಪತ್ತು ಮತ್ತು ಐಹಿಕ ಐಶ್ವರ್ಯಗಳೆಲ್ಲವೂ ಅಪ್ಪಟ ಪ್ರೀತಿಯ ಎದುರು ಆಕೆಗೆ ಗೌಣವಾಗಿದೆ.
ಸ್ಥೈರ್ಯ
ಯಾವುದೇ ಮಹಿಳೆಗೆ ತನ್ನ ಪುರುಷನ ಶಕ್ತಿ ಅಥವಾ ಸ್ಥೈರ್ಯದ ಅವಶ್ಯಕತೆಯಿದೆ. ಒಂದು ವೇಳೆ ನೀವು ಆಕೆಯ ಶಕ್ತಿ ಎಂದು ಸ್ಪಷ್ಟಪಡಿಸಿದರೆ ನಿಮ್ಮನ್ನು ಆಕೆ ಜೀವನಕ್ಕಿಂತ ಅತಿ ಹೆಚ್ಚಾಗಿ ಗೌರವಿಸುತ್ತಾಳೆ.
ಸಮಯ
ನೀವು ಎಷ್ಟೇ ವ್ಯಸ್ತರಿರಿ, ಆದರೆ ಆಕೆಗಾಗಿ ನೀವು ನೀಡುವ ಸಮಯ ಆಕೆಯ ಪಾಲಿಗೆ ಅತ್ಯಮೂಲ್ಯವಾಗಿವೆ. ನೀವು ಜೊತೆಯಲ್ಲಿ ಕಳೆಯುವ ಕ್ಷಣಗಳು ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಹೋಗುತ್ತದೆ.
ಕುಟುಂಬ
ನೀವು ಆಕೆಯ ಕುಟುಂಬದ ಸದಸ್ಯರಿಗೂ ನಿಮ್ಮ ಕುಟುಂಬದ ಸದಸ್ಯರಿಗೆ, ಅದರಲ್ಲೂ ವಿಶೇಷವಾಗಿ ಹಿರಿಯರಿಗೆ ನೀಡುವ ಗೌರವ ಆಕೆಯಲ್ಲಿ ನಿಮ್ಮ ಸ್ಥಾನವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತದೆ. ಎಂದಿಗೂ ಆಕೆಯ ತವರಿನವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಿಮ್ಮ ಮತ್ತು ಆಕೆಯ ಕುಟುಂಬದ ಎಲ್ಲಾ ಸದಸ್ಯರ ಉತ್ತಮ ಗುಣಗಳ ಬಗ್ಗೆಯೇ ಹೆಚ್ಚು ಪ್ರಸ್ತಾಪಿಸುವುದು ಆಕೆಯ ಹೃದಯ ಗೆಲ್ಲಲು ನೆರವಾಗುತ್ತದೆ.



Click it and Unblock the Notifications


