Latest Updates
-
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಇನ್ನು ಪ್ರೀತಿ, ಪ್ರೇಮದ ಗುಂಗಿನಲ್ಲಿ, ಮೋಸ ಹೋಗಬೇಡಿ
'ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹೂಂ ಅಂತೀಯ ಊಹೂಂ ಅಂತೀಯ' - ಈ ಹಾಡು ಯಾರಿಗೆ ತಾನೇ ಗೊತ್ತಿಲ್ಲ. ಈ ಹಾಡು ಈಗಿನ ಹದಿಹರೆಯದವರಿಗಂಗೂ ನಿತ್ಯಹರಿದ್ವರ್ಣವೇ ಸರಿ. ಹೌದು, ಪ್ರೀತಿಯ ಮುಂದೆ ವಯಸ್ಸು, ಅಂತಸ್ತು, ಐಶ್ವರ್ಯ ಇವೆಲ್ಲಾ ಶೂನ್ಯ. ಪ್ರೀತಿಗೆ ಎರಡು ಒಳ್ಳೆಯ ಮನಸ್ಸುಳ್ಳ ಸಹಜೀವಿಗಳು ಇದ್ದರೆ ಸಾಕು. ಪ್ರೀತಿಯ ಮುಂದೆ ಎಲ್ಲವೂ ಸೊನ್ನೆ. ಅಂದ ಮಾತ್ರಕ್ಕೆ ಎಲ್ಲಕ್ಕೂ ಪ್ರೀತಿಯೊಂದೇ ಮಾನದಂಡವಲ್ಲ. ನಿಮ್ಮ ಜೀವನ ಸುಖವಾಗಿರಲು ಪ್ರೀತಿಯಲ್ಲಿ ನಂಬಿಕೆ ಅತೀ ಮುಖ್ಯ. ಅದಕ್ಕೆ ಧಕ್ಕೆಯಾದರೆ ಅದಕ್ಕಿಂತ ನೋವು ಇನ್ನೊಂದಿಲ್ಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ಹೀಗಿರುವಾಗ ನಿಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ, ನಿಮ್ಮ ಬದುಕು ಸುಖಮಯವಾಗಿರಲು ಹಾಗೂ ನಿಮ್ಮ ಇಡೀ ಬದುಕು ಸಾರ್ಥಕವಾಗಲು ನಿಮ್ಮ ಹೆಜ್ಜೆಗೆ ಹೆಜ್ಜೆಯಾಗಲು ಒಳ್ಳೆಯ ಸಂಗಾತಿಯನ್ನು ನೀವು ಆರಿಸಿಕೊಳ್ಳಲೇಬೇಕು. ಈ ಬಾಳ್ವೆಯಲ್ಲಿ ಮನಸ್ಸುಗಳ ಸಮ್ಮಿಲನವಿರಬೇಕು. ಸಂತಸದ ಸಹಬಾಳ್ವೆಗೆ ಶಾರೀರಿಕ ಸಮ್ಮಿಲನಕ್ಕಿಂತ ಹೆಚ್ಚಾಗಿ ನಿಮ್ಮಿಬ್ಬರ ಮನಸ್ಸುಗಳ ಸಮ್ಮಿಲನ ಅತ್ಯಗತ್ಯ. ಪ್ರೀತಿಗೆ ನಂಬಿಕೆಯೇ ಭದ್ರ ಅಡಿಪಾಯ. ಶಾರೀರಿಕ ಕೂಡುವಿಕೆಗಿಂದ ಮನಸ್ಸುಗಳ ಕೂಡುವಿಕೆ ನಿಜವಾದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಮಹಿಳೆಯರು ತಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳುವಲ್ಲಿ ಎಡವುತ್ತಿದ್ದು, ಪುರುಷನ ಗುಣ ಮತ್ತು ನಡವಳಿಕೆಯನ್ನು ಗಮನಿಸದೆ ಪ್ರೀತಿಗೆ ಬಿದ್ದು, ನಂತರ ಅದರಿಂದ ಹೊರಬರಲಾಗದೇ ಪರಿತಪಿಸುತ್ತಿದ್ದಾರೆ. ಪ್ರೀತಿ, ಪ್ರೇಮದ ಜೊತೆಗೆ ಸಂಬಂಧಕ್ಕೂ ಬೆಲೆ ನೀಡಿ

ತಜ್ಞರು ಹೇಳುವ ಪ್ರಕಾರ ನಿಮಗೆ ನಿಮ್ಮ ಸಂಗಡಿಗನಲ್ಲಿ ಏನಾದರೂ ತಪ್ಪಾದ ನಡವಳಿಕೆ ಅಥವಾ ಗುಣಲಕ್ಷಣದ ಚಿಹ್ನೆಗಳು ಕಂಡುಬಂದಲ್ಲಿ ಕೂಡಲೇ ಆತನನ್ನು ತೊರೆದು, ಉತ್ತಮ ವ್ಯಕ್ತಿಯನ್ನು ಆರಿಸಿಕೊಳ್ಳುವತ್ತ ಗಮನಹರಿಸಿ. ಹೌದು, ಆತನು ನಿಮ್ಮ ಭಾವನೆಗಳನ್ನು ಗೌರವಿಸಿ ನಿಮ್ಮ ನಡವಳಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ಒಳ್ಳೆಯದು. ಇಲ್ಲವಾದಲ್ಲಿ ದಿನದ ಕೊನೆಯಲ್ಲಿ ನಿಮಗೆ ಹತಾಶೆ ಮತ್ತು ಮಾನಸಿಕ ನೋವು ಕಾಡದೆ ಬಿಡದು. ಈ ಸಾಂಪ್ರದಾಯಿಕ ಅನುವಂಶೀಯ ಜಗತ್ತಿನಲ್ಲಿ ಪುರುಷರು ಮಹಿಳೆಯರ ಮೇಲೆ ಹೆಚ್ಚು ಅಹಂ ಮನೋಭಾವ ತೋರುತ್ತಿದ್ದು, ಅದನ್ನು ಮಹಿಳೆಯರು ಬದಲಾಯಿಸುವ ಪ್ರವೃತ್ತಿಯಿಂದ ಕೆಲವು ಗೊಂದಲಗಳು ಉಂಟಾಗಬಹುದು.
ಮನಸ್ಸುಗಳ ಸಮ್ಮೇಳದನದ ಕೊರತೆ
ಮನಸ್ಸುಗಳ ಸವಿಯಾದ ಸಮ್ಮಿಲನವೇ ಬಾಳಿನ ಉತ್ತಮ ಸಮ್ಮೇಳನ. ಇಲ್ಲಿ ಅಪಾರ್ಥಗಳಿಗೆ ಜಾಗವಿಲ್ಲ. ಒಂದು ವೇಳೆ ಅಂತಹ ಸನ್ನಿವೇಶ ಎದುರಾದಲ್ಲಿ, ಈ ಸಹಬಾಳ್ವೆಯಲ್ಲಿ ಮುಂದುವರೆಯುವುದು ಅರ್ಥವಿಲ್ಲ. ಪ್ರತಿ ಜೋಡಿಯಲ್ಲೂ ತಮ್ಮದೇ ಆದ ಅರ್ಥೈಸುವಿಕೆಯ ಲಕ್ಷಣವಿರುತ್ತದೆ. ಸಂಗಾತಿಯನ್ನು ಹೆಚ್ಚು ಅರ್ಥೈಸಿಕೊಂಡಷ್ಟು ಇಡೀ ಬದುಕಿನಲ್ಲಿ ಬಾಂಧವ್ಯ ಹಾಗೆಯೇ ಇರುತ್ತದೆ.
ನಿಮ್ಮ ಸಮಯಕ್ಕೆ ಬೆಲೆ ಕೊಡದಿರುವುದು
ಪುರುಷನು ನಿಮ್ಮ ಅಮೂಲ್ಯವಾದ ಸಮಯಕ್ಕೆ ಬೆಲೆ ಕೊಡದೇ ಇದ್ದಲ್ಲಿ, ಕೂಡಲೇ ಈ ಸಂಬಂಧದಿಂದ ಹೊರನಡೆಯಿರಿ. ಪ್ರತೀ ಪುರುಷನೂ ತನ್ನ ಸಂಗಾತಿಯನ್ನು ಮನ:ಪೂರ್ವಕವಾಗಿ ಪ್ರೀತಿಸುತ್ತಿದ್ದರೆ ಮಾತ್ರ ಆಕೆಯ ಅಮೂಲ್ಯವಾದ ಸಮಯಕ್ಕೆ ಖಂಡಿತಾ ಬೆಲೆ ನೀಡುತ್ತಾನೆ. ಈ ಗುಣವು ಇಡೀ ಬದುಕಿನ ಅನನ್ಯವಾದ ಸಂಬಂಧಕ್ಕೆ ಹೆಜ್ಜೆಗುರುತಿದ್ದಂತೆ.
ಭಾವನೆಗಳನ್ನು ಹಂಚಿಕೊಳ್ಳದಿದ್ದಾಗ
ಪ್ರತೀ ಜೋಡಿಯಲ್ಲೂ ಪರಸ್ಪರ ಪ್ರೀತಿ ಮತ್ತು ಭಾವನೆಗಳು ಹಂಚಿಕೊಳ್ಳುವುದು ಸಹಜವಾದ ಪ್ರಕ್ರಿಯೆ. ಆದರೆ ನೀವು ಆತನೊಂದಿಗೆ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಕೆಯಿದ್ದರೆ ಅಥವಾ ಹಾಗೆ ಅನಿಸಿದರೆ ಕೂಡಲೇ ಈ ಸಂಬಂಧದಿಂದ ಹೊರಬರುವುದು ಉತ್ತಮ. ಏಕೆಂದರೆ ಉತ್ತಮ ಸಹಬಾಳ್ವೆಗೆ ಬಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅಥವಾ ಚರ್ಚಿಸುವ ಗುಣವಿರಬೇಕು ಇಲ್ಲದಿದ್ದರೆ ಈ ಸಂಬಂಧಕ್ಕೆ ಬೆಲೆಯೇ ಇರುವುದಿಲ್ಲ. ಸಿಹಿ ವಿಚಾರವಿರಲಿ ಅಥವಾ ಕಹಿ ವಿಚಾರವಿರಲಿ ಅಥವಾ ನೋವಿನ ವಿಚಾರವಿರಲಿ ಅದನ್ನು ಕೂಡಲೇ ತನ್ನ ಸಂಗಡಿಗನೊಂದಿಗೆ ಹಂಚಿಕೊಂಡಲ್ಲಿ ಮನಸ್ಸಿಗೆ ಖಂಡಿತವಾಗಿಯೂ ಒಂದು ಹಿತವಾದ ಅನುಭವವಾಗುತ್ತದೆ. ಈ ಅಂಶಗಳು ನಿಮ್ಮ ಗಮನದಲ್ಲಿರಲಿ.
ಅಗತ್ಯಕ್ಕೆ ಬಾರದಿರುವುದು
ನಿಮಗಾಗಿ ನಿಮ್ಮ ಪ್ರೀತಿಪಾತ್ರನು ದಿನದ ೨೪ ಘಂಟೆಗಳೂ ಸಿಗುವಂತಿರಬೇಕು. ಶಾರೀರಿಕವಲ್ಲದಿದ್ದರೂ ಮಾನಸಿಕವಾಗಿ ನಿಮ್ಮೊಂದಿಗೆ ಸದಾ ಇರುವಂತೆ ಆತನ ಮನಸ್ಸು ಮಿಡಿಯುತ್ತಿರಬೇಕು. ನಿಮಗೆ ಇದಕ್ಕಿಂತ ಹೆಚ್ಚಿನ ಸ್ಥೈರ್ಯ ಇನ್ನೊಂದಿಲ್ಲ. ಆದರೆ ಆತನಿಗೆ ನಿಮ್ಮೊಂದಿಗೆ ಸಮಯ ಕಳೆಯುವುದು ಸಾಧ್ಯವಾಗದಿದ್ದರೆ ಅಥವಾ ಆತನು ನಿಮಗೆ ಸಮಯ ನೀಡದಿದ್ದರೆ, ತಕ್ಷಣವೇ ತಿಳಿಯಿರಿ ನೀವು ತಪ್ಪಾದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುತ್ತೀರೆಂದು. ಈ ಸಂಬಂಧ ಬಹಳ ಕಾಲ ಉಳಿಯುವುದಿಲ್ಲ.
ನಿಮ್ಮೊಂದಿಗೆ ಪ್ರೀತಿಸುವ ಸಂಕೇತಗಳು ಗೋಚರಿಸದಿರುವುದು
ನಿಮ್ಮೊಂದಿಗೆ ಮನ:ಪೂರ್ವಕವಾಗಿ ಪ್ರೀತಿಸುವ ಸಂಕೇತಗಳು ಆತನಿಂದ ಗೋಚರಿಸದಿದ್ದರೆ, ಏಕೆ ಕಾಯುವಿರಿ? ಕೂಡಲೇ ಆತನ ಸಂಬಂಧದಿಂದ ಹೊರಬನ್ನಿ. ಸಮುದ್ರದಲ್ಲಿ ಸಾಕಷ್ಟು ಮೀನುಗಳು ಇರುವಂತೆ ಪ್ರಪಂಚದಲ್ಲಿ ಚೆಂದದ ಮನಸ್ಸುಳ್ಳ ವ್ಯಕ್ತಿಯು ನಿಮಗೆ ಸಿಕ್ಕೇ ಸಿಗುತ್ತಾನೆ. ಚಿಂತಿಸದಿರಿ!



Click it and Unblock the Notifications













