Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಷುಲ್ಲಕ ವಿಷಯಗಳಿಗೆ ಮುರಿಯದಿರಲಿ ಮಧುರ ಸಂಬಂಧ!
ಹೌದು, ನಿಮ್ಮ ದಾಂಪತ್ಯ ಕೆಲವೊಮ್ಮೆ ಸಮಸ್ಯೆಗೆ ಸಿಕ್ಕಿಕೊಂಡಾಗ ಕೆಲವೊಂದು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ. ಏಕೆಂದರೆ ಇದು ನಾವು ಸಮಸ್ಯೆಯನ್ನು ಪರಿಪೂರ್ಣವಾಗಿ ನೋಡಬೇಕಾದ ಸಮಯವಾಗಿರುತ್ತದೆ. ದಾಂಪತ್ಯ ಎನ್ನುವುದು ಒಂದು ಭಾವನಾತ್ಮಕ ಬಂಡವಾಳವಾಗಿರುತ್ತದೆ. ಆದರೆ ಯಾವಾಗ ಇದು ಬಂಡವಾಳವನ್ನು ತಿರುಗಿ ನೀಡಲಿಲ್ಲವಾದರೆ, ಆಗ ಯಾರನ್ನು ನಿಂದಿಸಿ ಪ್ರಯೋಜನವಿಲ್ಲ.
ಅದರ ಜೊತೆಗೆ ಯಾವ ಸಂಬಂಧವು ಸಹ ಏರು-ಪೇರುಗಳಿಂದ ಮುಕ್ತವಾಗಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಒಂದು ಉತ್ತಮ ಸಂಬಂಧವು ಸಹ ಇದಕ್ಕೆ ಹೊರತಲ್ಲ. ನಿಮ್ಮ ಸಂಬಂಧ ಪರಿಪೂರ್ಣವಾಗಿರಬೇಕು ಎಂದು ಕೋರಿಕೊಳ್ಳುವುದು ಈ ನಿಟ್ಟಿನಲ್ಲಿ ಅತಿಯಾಸೆಯಾಗುತ್ತದೆ! ಆದರೆ ನಿಮ್ಮ ಸಂಬಂಧವನ್ನು ಕಾಲಕ್ರಮೇಣ ಒಳ್ಳೆಯ ದಾರಿಯಲ್ಲಿ ಸಾಗುವಂತೆ ಮಾಡಲು ನೀವು ಪ್ರಯತ್ನಿಸಬಹುದು. ಹಾಗಾದರೆ ನಿಮ್ಮ ದಾಂಪತ್ಯ ಸಮಸ್ಯೆಯಲ್ಲಿ ಸಿಕ್ಕಿಕೊಂಡಾಗ ನೀವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ? ಕಪಿ ಚೇಷ್ಟೆ ಮೂಲಕ ಮನದ ಕನ್ಯೆಗೆ ಭಯ ಹುಟ್ಟಿಸಬೇಡಿ!

ಹೌದು ನಿಮ್ಮ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲವೆಂದಾದರೆ, ಆಗ ನೀವು ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಬೇಕು ಮತ್ತು ಅಲ್ಲಿರುವ ಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಿ ನಿಮ್ಮ ಸಂಬಂಧ ಶಿಥಿಲವಾಗಿದೆಯೋ, ಆ ಭಾಗವನ್ನು ಸರಿಪಡಿಸಲು ನೀವು ತುರ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಆಗ ನಿಮ್ಮ ಮದುವೆ ದೀರ್ಘಾಯಸ್ಸನ್ನು ಹೊಂದುತ್ತದೆ. ಒಂದು ವಿಚಾರ ನೆನಪಿಡಿ ಪ್ರಪಂಚದಲ್ಲಿ ಪ್ರಯತ್ನ ಪಡದೆ ಯಾವುದೇ ಅಂಶಗಳು ಸರಿಹೋಗುವುದಿಲ್ಲ. ಅದಕ್ಕೆ ದಾಂಪತ್ಯವು ಸಹ ಹೊರತಲ್ಲ.
ನಿಮ್ಮ ದಾಂಪತ್ಯ ಸಮಸ್ಯೆಯಲ್ಲಿದ್ದಾಗ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಯಾವುವು?
ನಾನು ದಾಂಪತ್ಯಕ್ಕಾಗಿ ಅಗತ್ಯ ಸಮಯವನ್ನು ನೀಡುತ್ತಿದ್ದೀನಾ? ಇದು ಮದುವೆ ಆದ ಪ್ರತಿಯೊಬ್ಬರು ಕೇಳಿಕೊಳ್ಳಬೇಕಾದ ಒಂದು ಪ್ರಶ್ನೆಯಾಗಿರುತ್ತದೆ. ಹೌದು, ದಾಂಪತ್ಯದಲ್ಲಿ ಸಮಯಕ್ಕೆ ತುಂಬಾ ಮಹತ್ವವಿದೆ. ನೀವು ನಿಮ್ಮ ಸಂಗಾತಿಯ ಜೊತೆಗೆ ಅಗತ್ಯ ಸಮಯವನ್ನು ಕಳೆಯುತ್ತಿಲ್ಲ ಎಂದಾದಲ್ಲಿ, ನಿಮ್ಮ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚು ತಲೆದೋರುತ್ತವೆ. ಆಗ ನಿಮ್ಮ ನಡುವೆ ಅಂತರ ಹೆಚ್ಚಾಗುತ್ತ ಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಮಾತು ಬೆಳ್ಳಿ ಮೌನ ಬಂಗಾರ, ಇದು ಸುಖಿ ಸಂಸಾರಕ್ಕೆ ರಹದಾರಿ!
ನಾನು ಗಮನಹರಿಸುತ್ತಿದ್ದೇನೆಯೇ ಮತ್ತು ಆಸಕ್ತಿ ತೋರುತ್ತಿದ್ದೀನಾ?
ನೀವು ಅತ್ಯಂತ ಪ್ರಮುಖವಾದ ಘಟನೆಗಳನ್ನು ಮತ್ತು ದಿನಗಳನ್ನು ನೆನಪಿನಲ್ಲಿಟ್ಟುಕೊಂಡಿರುವಿರಾ? ವಿಶೇಷ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಗಾಗಿ ನೀವು ಕೆಲವೊಂದು ಉಡುಗೊರೆಗಳನ್ನು ತಂದು ಕೊಟ್ಟಿರುವಿರಾ? ನಿಮ್ಮ ಸಂಗಾತಿಯ ಬಯಕೆಗಳ ಕುರಿತಾಗಿ ನೀವು ಆಸಕ್ತಿಯನ್ನು ತೋರಿಸುತ್ತಿರುವಿರಾ? ನಿಮ್ಮ ಸಂಗಾತಿಯ ಸಾಧನೆಗಗಳನ್ನು ನೀವು ಅಭಿನಂದಿಸುತ್ತಿದ್ದೀರಾ? ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಇಲ್ಲಾ ಎಂದಾದಲ್ಲಿ, ನಿಮ್ಮ ದಾಂಪತ್ಯವನ್ನು ನೀವೇ ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದೀರಾ ಎಂದು ಅರ್ಥ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಅಂತರವನ್ನು ಹೆಚ್ಚಿಸುತ್ತದೆ ಎಚ್ಚರ. ವಿಚ್ಛೇದನದ ವಿಷಯ ಬಂದಾಗ ದಂಪತಿಗಳು ಅದೇಕೆ ಹಿಂಜರಿಯುತ್ತಾರೆ?
ನೀವು ನಿಮ್ಮ ಸಂಗಾತಿಯನ್ನು ಇತರರ ಜೊತೆ ಹೋಲಿಕೆ ಮಾಡುತ್ತಿದ್ದೀರಾ?
ಇದು ಸಹ ದಾಂಪತ್ಯದಲ್ಲಿರುವವರು ಕೇಳಿಕೊಳ್ಳಬೇಕಾದ ಪ್ರಶ್ನೆಗಳಲ್ಲಿ ಒಂದಾಗಿದೆ. ನೀವು ಅವರನ್ನು ಇತರರೊಂದಿಗೆ ಅಥವಾ ನಿಮ್ಮ ಮಾಜಿ... ಜೊತೆಗೆ ಹೋಲಿಕೆ ಮಾಡುತ್ತಿದ್ದಲ್ಲಿ ಖಂಡಿತ ಇದರಿಂದ ನಿಮ್ಮ ಸಂಗಾತಿ ನೊಂದು ಕೊಳ್ಳುತ್ತಾರೆ. ಅದು ಖಂಡಿತ ಅವರನ್ನು ಘಾಸಿಗೊಳಿಸುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಅನನ್ಯ. ಅವರ ರೀತಿ ಇನ್ನೊಬ್ಬರಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಪ್ರತಿಯೊಬ್ಬರು ತಮ್ಮನ್ನು ಯಾರಾದರು ಹೊಗಳಲಿ ಎಂದು ಭಾವಿಸುತ್ತಾರೆ, ಟೀಕೆ ಮಾಡಲಿ ಎಂದು ಬಯಸುವುದಿಲ್ಲ. ಆದ್ದರಿಂದ ನೀವು ನಿಮ್ಮ ಸಂಗಾತಿಯನ್ನು ನೋಯಿಸಿದ್ದೀರಾ ಎಂದು ಒಮ್ಮೆ ನಿಮ್ಮನ್ನು ನೀವೇ ಕೇಳಿಕೊಳ್ಳಿ.



Click it and Unblock the Notifications


