Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ!
ಯೌವನದಲ್ಲಿ ಸೂಕ್ತ ಸಂಗಾತಿಯನ್ನು ತಾವೇ ಹುಡುಕಿಕೊಳ್ಳುವುದು ಇಂದಿನ ದಿನಗಳಲ್ಲಿ ಅತಿ ಸಾಮಾನ್ಯವಾಗಿಬಿಟ್ಟಿದೆ. ಇದಕ್ಕನುಗುಣವಾಗಿ ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಒಲುಗೆಳೆತನ ಅಥವಾ ಡೇಟಿಂಗ್ ಸಹಾ ಸಾಮಾನ್ಯವಾಗಿದೆ. ಇನ್ನೂ ಹಲವೆಡೆ ಅತಿರೇಕಕ್ಕೇರಿ ಮದುವೆಯಾಗದೇ ಒಟ್ಟಿಗೇ ಇರುವ, ಭಾರತೀಯ ಸಂಸ್ಕೃತಿಗೆ ಅತ್ಯಂತ ವಿರುದ್ಧವಾದ 'ಲಿವಿನ್' ಸಂಬಂಧಗಳತ್ತಲೂ ತಿರುಗಿವೆ.
ಆದರೆ ಡೇಟಿಂಗ್ ಅಥವಾ ಒಲುಗೆಳೆತನ ಒಂದು ಹಂತದಲ್ಲಿ ಉತ್ತಮ ಪರಿಹಾರ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು, ಮುಂದಿನ ಜೀವನವನ್ನು ಒಟ್ಟಿಗೆ ಸಾಗಿಸಲು ಇಬ್ಬರ ಇಷ್ಟ, ದ್ವೇಶಗಳ ಬಗ್ಗೆ ಅರಿತುಕೊಳ್ಳುವುದರಿಂದ ಮದುವೆಯಾದ ಬಳಿಕ ಎದುರಾಗುವ ಎಷ್ಟೋ ತೊಂದರೆಗಳನ್ನು ನಿವಾರಿಸಿದಂತಾಗುತ್ತದೆ. ಅಷ್ಟಿದ್ದರೂ ಇಂದು ವಿಫಲವಾಗುತ್ತಿರುವ ಮದುವೆಗಳಲ್ಲಿ ಪ್ರೇಮವಿವಾಹಗಳೇ ಹೆಚ್ಚಿರುವುದು ಮಾತ್ರ ವ್ಯಂಗ್ಯವಾಗಿದೆ. ಕೇಳಿ ಇಲ್ಲಿ, ಗರ್ಲ್ ಫ್ರೆಂಡ್‌ನ ಎಲ್ಲಾ ಮಾತು ನಂಬಬೇಡಿ!
ಆದರೆ ಈ ಡೇಟಿಂಗ್‌ನಲ್ಲಿ ನೀವು ಆಯ್ಕೆ ಮಾಡಿಕೊಂಡಿರುವ ಮಹಿಳೆ ಅತಿ ಮಹತ್ವಾಕಾಂಕ್ಷಿಯಾಗಿದ್ದರೆ ಮಾತ್ರ ಪರಿಸ್ಥಿತಿಯನ್ನು ನಿಭಾಯಿಸುವುದು ನಿಮ್ಮಿಂದ ಕಷ್ಟಕರವಾಗಲಿದೆ. ನೀವೂ ಅವರಿಗಿಂತ ಮಿಗಿಲಾದ ಮಹತ್ವಾಕಾಂಕ್ಷಿಯಾಗಿದ್ದು ಆಕೆಯ ಇಷ್ಟಗಳನ್ನು ಅರ್ಥೈಸಿಕೊಳ್ಳಬಲ್ಲಿರಾದರೆ ಮಾತ್ರ ಈ ಸಂಬಂಧ ಮುಂದುವರೆಯುತ್ತದೆ. ಇಲ್ಲದಿದ್ದ ಪಕ್ಷ ಮುಂದುವರೆದರೂ ಜೀವನಪರ್ಯಂತ ನಿಮ್ಮ ಬಾಳು ನರಕವಾಗಲಿದೆ! ಆಕರ್ಷಣೆಗೆ ಮರುಳಾಗಿ, ಕೊನೆಗೆ ಮೋಸ ಹೋಗಬೇಡಿ!
ಮಹಿಳೆಯರು ಸಂಬಂಧಗಳನ್ನು ತೊರೆಯುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆಂದೇಕೆ ಗೊತ್ತೇ? ಇದಕ್ಕೆ ಪ್ರಮುಖ ಕಾರಣ ತಪ್ಪು ತಿಳಿವಳಿಕೆ. ಸಾಮಾನ್ಯವಾಗಿ ಪುರುಷರ ನಡವಳಿಕೆಯನ್ನು ದೂರದಿಂದ ಅಳೆಯುವುದಕ್ಕೂ ಜೊತೆಗಿದ್ದು ಅಳೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಆಕೆ ಎಷ್ಟು ಬೇಗ ಗಮನಿಸುತ್ತಾಳೋ ಅಷ್ಟು ಬೇಗನೇ ಸಂಬಂಧ ಮುರಿದುಬೀಳುತ್ತದೆ. ಅದರಲ್ಲೂ ಆಕೆ ಮಹತ್ವಾಕಾಂಕ್ಷಿಯಾಗಿದ್ದರೆ ನಿಮ್ಮನ್ನು ತೊರೆಯುವ ಸಂಭವ ಹೆಚ್ಚು. ಆದ್ದರಿಂದ ನಿಮ್ಮ ಒಲುಗೆಳೆತನದ ಗೆಳತಿ ಮಹತ್ವಾಕಾಂಕ್ಷಿಯಾಗಿದ್ದರೆ ಯಾವ ಎಚ್ಚರಿಕೆಗಳನ್ನು ವಹಿಸಬೇಕು ಎಂಬುದನ್ನು ಕೆಳಗಿನ ಸ್ಲೈಡ್ ಶೋ ನಿಮಗೆ ವಿವರಿಸಲಿದೆ..

ಆಕೆ ನಿಮಗಿಂತಲೂ ಉತ್ತಮ ವ್ಯಕ್ತಿಯ ನಿರೀಕ್ಷೆಯಲ್ಲಿರುತ್ತಾಳೆ
ಮಹತ್ವಾಕಾಂಕ್ಷಿ ಮಹಿಳೆಯರು ಸದಾ ತಮ್ಮ ಜೀವನದ ಉದ್ದೇಶಗಳ ಸುತ್ತಲೇ ಸುತ್ತುತ್ತಿದ್ದು ಇದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನೇ ಭೇಟಿಯಾಗಲು ಇಷ್ಟಪಡುತ್ತಾರೆ. ಇದಕ್ಕೆ ಪೂರಕವಾದ ಮಾರ್ಗಗಳನ್ನೂ ವ್ಯಕ್ತಿಗಳನ್ನೂ ಅವರು ಸತತವಾಗಿ ಅನ್ವೇಶಿಸುತ್ತಲೇ ಇರುತ್ತಾರೆ. ಒಂದು ವೇಳೆ ನೀವು ಈ ನಿಟ್ಟಿನಲ್ಲಿ ಸಹಕಾರಿಯಾಗಿದ್ದರೆ ಮಾತ್ರ ನಿಮ್ಮ ಸಾಂಗತ್ಯ ಸಾಂಗವಾಗಲಿದೆ. ಇಲ್ಲದಿದ್ದರೆ ಗೋತಾ!

ಅವರಿಗೆ ಸಮಾಜದಲ್ಲಿ ಪ್ರತಿಷ್ಠೆ ಪ್ರಮುಖವಾಗಿರುತ್ತದೆ
ಮಹತ್ವಾಕಾಂಕ್ಷಿ ಮಹಿಳೆಯರು ಸಮಾಜದಲ್ಲಿ ಅತಿ ಮುಖ್ಯರಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕೆ ಪೂರಕವಾದ ಉಡುಗೆ ತೊಡುಗೆ ವಾಹನಗಳನ್ನೇ ಅವರು ಬಯಸುತ್ತಾರೆ. ಯಾವುದಾದರೂ ಸಮಾರಂಭಕ್ಕೆ ಅವರು ಖಂಡಿತಾ ರಿಕ್ಷಾದಲ್ಲಿ ಬರಲು ಒಪ್ಪದೇ ಬಾಡಿಗೆಯದ್ದಾದರೂ ಚಿಂತಿಲ್ಲ, ಕಾರು ಬೇಕೇ ಬೇಕು ಎಂದು ಹಠ ಹಿಡಿದಾಗ ನೀವು ಅದಕ್ಕೊಪ್ಪಿ ಕಾರು ತಂದರೆ ಮಾತ್ರ ನಿಮ್ಮ ಮುಂದಿನ ಜೀವನ ಸುಗಮವಾಗಲಿದೆ. ರಿಕ್ಷಾ ತಂದರೇ....!!

ಅವರು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಿಗೇ ಗೌರವ ನೀಡುತ್ತಾರೆ
ಮಹತ್ವಾಕಾಂಕ್ಷಿ ಮಹಿಳೆಯರು ಸಮಾಜದಲ್ಲಿ ಈಗಾಗಲೇ ಪ್ರತಿಷ್ಠೆ ಪಡೆದಿರುವ ವ್ಯಕ್ತಿಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಒಂದು ವೇಳೆ ನಿಮ್ಮ ಬಳಗದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಇಲ್ಲದಿದ್ದರೆ ನಿಮ್ಮ ಗೆಳೆತನ ಬಹುದಿನ ಬಾಳದು.

ಆಕೆಗೆ ಹಣ ಮತ್ತು ಪ್ರತಿಷ್ಠೆಯೇ ಸರ್ವಸ್ವವಾಗಿದೆ
ಮಹತ್ವಾಕಾಂಕ್ಷಿ ಮಹಿಳೆಯರು ಶ್ರೀಮಂತರನ್ನು ಮತ್ತು ಧನದ ಶ್ರೀಮಂತಿಕೆಯನ್ನು ಇಷ್ಟಪಡುತ್ತಾರೆ. ಒಂದು ವೇಳೆ ನಿಮ್ಮ ಬಳಿ ಅವರು ಬಯಸಿದಷ್ಟು ಹಣ ಇಲ್ಲದಿದ್ದರೆ ನೀವಾಗಿ ದೂರವಾದಷ್ಟೂ ನಿಮಗೇ ಉತ್ತಮ.

ಇವರು ದಿನದ ಹೆಚ್ಚು ಹೊತ್ತು ಚಟುವಟಿಕೆಯಿಂದಿರುತ್ತಾರೆ
ಇವರಿಗೆ ದಿನದ ಸಮಯವನ್ನು ಸರ್ವಥಾ ಕಳೆಯುವುದರಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ. ಅವರ ಸಮಯ ಎಂದಿಗೂ ಯಾವುದಾದರೂ ಚಟುವಟಿಕೆ, ಅದರಲ್ಲೂ ಹಣ ಅಥವಾ ಪ್ರತಿಷ್ಠೆಯಾಧಾರಿತ ಅಥವಾ ಪೂರಕವಾದುದೇ ಇರುತ್ತದೆ. ಇವರಿಗೆ ಶಾಂತರೀತಿಯಿಂದ ಕಾಲ ಕಳೆಯುವುದು ಕಷ್ಟಕರವಾಗುತ್ತದೆ. ರಸ್ತೆಯ ಟ್ರಾಫಿಕ್ ಜಾಮ್ ಅಸಹನೆ ಮೂಡಿಸುತ್ತದೆ. ನಿಮಗೂ ಇದೇ ರೀತಿಯ ಭಾವನೆಗಳು ಇರದ ಹೊರತು ಇವರೊಂದಿಗೆ ಬಾಳುವೆ ಮುಂದು ಕಷ್ಟಕರವಾಗಿದೆ.



Click it and Unblock the Notifications











