Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಸಾರದಲ್ಲಿ ಈ ರೀತಿ ಮೋಸ ಮಾಡುವುದು ಸರಿಯೇ?
ಮದುವೆಯ ಬಂಧ ಎಂಬುದು ಏಳೇಳು ಜನ್ಮಗಳ ಸಂಬಂಧ ಎಂದು ಹೇಳಲಾಗುತ್ತದೆ. ಇಪ್ಪತ್ತರ ಹರೆಯದಲ್ಲಿ ಮದುವೆಯಾಗಿ, ನೂರು ವರ್ಷಗಳವರೆಗೆ ಅನ್ಯೋನ್ಯವಾಗಿ ಬದುಕುವವರು ಒಂದು ಕಡೆಯಾದರೆ, ಮದುವೆಯಾಗಿ ಬೆರಳೆಣಿಕೆಯಷ್ಟು ವರ್ಷಗಳು ಸಹ ನೆಮ್ಮದಿಯಾಗಿ ಜೀವನ ನಡೆಸದ ದಂಪತಿಗಳು ಸಹ ನಮ್ಮ ನಡುವೆ ಇದ್ದಾರೆ. ಮದುವೆಯು ಎಷ್ಟು ಸುಂದರ ಸಂಬಂಧ, ಎಲ್ಲೋ ಹುಟ್ಟಿದ ಗಂಡು-ಹೆಣ್ಣು
ಒಬ್ಬರಿಗೊಬ್ಬರು ಒಂದು ಉದ್ದೇಶವಿಟ್ಟುಕೊಂಡು ಬದುಕುವ, ಬದುಕು ಕಟ್ಟುವ ಶ್ರಮವನ್ನು ನೋಡುವುದೇ ಚಂದ. ಆದರೆ ಈ ಸಂಬಂಧದಲ್ಲಿ ಬೆನ್ನಿಗೆ ಚೂರಿಯಾಕುವಂತಹ ಘಟನೆಗಳು ನಡೆದು ಬಿಡುತ್ತವೆ. ಅದರಲ್ಲಿ ಮೋಸ ಮಾಡುವುದೇ ಅತ್ಯಂತ ಘಾತುಕ ಕೆಲಸವಾಗಿರುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಜನರು ಮದುವೆಯಲ್ಲಿರುವ ಬದ್ಧತೆಯನ್ನು ಮತ್ತು ಪ್ರಮಾಣಗಳನ್ನು ಮುರಿಯಲು ಇಚ್ಚಿಸುವುದಿಲ್ಲ.
ಆದರೆ ಕೆಲವೊಂದು ಸಂಗತಿಗಳು ಅವರನ್ನು ಮೋಸ ಮಾಡಲು ಪ್ರೇರೇಪಿಸಿ ಬಿಡುತ್ತವೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು, ಉದಾಹರಣೆಗೆ ಗಂಡ ಹೆಂಡತಿಯರ ನಡುವೆ ಹೊಂದಾಣಿಕೆಯ ಸಮಸ್ಯೆ, ಅಥವಾ ಸಂಸಾರದಲ್ಲಿ ಮಧ್ಯೆ ತಲೆದೋರುವ ಹಣಕಾಸಿನ ತೊಂದರೆ, ಇದನ್ನೇ ಬಂಡವಾಳ ಮಾಡಿಕೊಂಡು ಸಂಗಾತಿಗೆ ದ್ರೋಹ ಬಗೆಯುವುದು ಸರಿಯೇ..?

ಹೌದು, ನಂಬಿಕೆ ದ್ರೋಹ ಎನ್ನುವುದು ಪ್ರತಿದಿನ ಬೆಳೆಯುವ ಒಂದು ಬಿರುಗಾಳಿಯಂತದ್ದು. ಯಾರೇ ಆಗಲಿ ತಮ್ಮ ಸಂಗಾತಿಯನ್ನು ಮೋಸ ಮಾಡುವ ಮಟ್ಟಕ್ಕೆ ಹೋಗಬಾರದು. ಆದರೆ ಸಣ್ಣ ಪುಟ್ಟ ಅಂಶಗಳು ಗೊಂದಲವನ್ನುಂಟು ಮಾಡುತ್ತಿರುತ್ತವೆ. ನೀವು ಎಚ್ಚೆತ್ತುಕೊಳ್ಳುವ ಮೊದಲೇ, ಪರಿಸ್ಥಿತಿಯು ವಿಕೋಪಕ್ಕೆ ಹೋಗುತ್ತದೆ. ಈ ಅಂಕಣದಲ್ಲಿ ನಾವು ಮನ ನೋಯಿಸುವಂತಹ ಮೋಸಕ್ಕೆ ಮುನ್ನುಡಿ ಬರೆಯುವ ಅಂಶಗಳು ಯಾವುವು ಎಂದು ತಿಳಿಸುತ್ತಿದ್ದೇವೆ ಮುಂದೆ ಓದಿ. ಯುವ ಜನತೆಗೆ ಮಾದರಿಯಾಗಿ ನಿಲ್ಲುವ ಸಿನಿತಾರೆಯರು
ರಹಸ್ಯ ಸಂಬಂಧಗಳು
ಬಹುತೇಕ ಮಂದಿ ಸಂಬಂಧದಿಂದ ಹೊರಗೆ ಒಂದು ರಹಸ್ಯ ಸಂಬಂಧವನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ನಿಮ್ಮ ಹಳೆಯ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗೆ ಸ್ನೇಹದಲ್ಲಿ ಮುಂದುವರೆಯುವುದು, ನಿಮ್ಮ ಸಹೋದ್ಯೋಗಿಯ ಜೊತೆಗೆ ಮಾತನಾಡುವುದು ಅಥವಾ ಆಪ್ತ ಮಿತ್ರರ ಜೊತೆಗೆ ಸ್ವಚ್ಛಂದವಾಗಿ ಹರಟುವುದು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತವೆ. ಇದನ್ನು ನಾವು ಸಹ ಮಾಡುತ್ತೇವೆ, ಮತ್ತು ಈ ಸಂಬಂಧದ ವ್ಯಾಪ್ತಿಯ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳುತ್ತೇವೆ. ಆದರೆ ಯಾವಾಗ ಇವರಿಂದ ನೀವು ಭಾವನಾತ್ಮಕ ಬೆಂಬಲವನ್ನು ಕೋರುತ್ತೀರೋ, ಆಗ ಸಮಸ್ಯೆ ಆರಂಭವಾಗುತ್ತದೆ. ಇದನ್ನು ಮೋಸ ಮಾಡುವುದು ಎನ್ನಲಾಗುವುದು. ಇದರ ಕುರಿತು ನೀವು ಎಚ್ಚೆತ್ತುಕೊಂಡು ನಿಲ್ಲಿಸುವ ಮೊದಲೇ, ಇದು ವಿಕೋಪಕ್ಕೆ ಹೋಗುತ್ತದೆ.
ನೀವು ಹಣವನ್ನು ಮುಚ್ಚಿಡಲು ಆರಂಭಿಸುತ್ತೀರಿ
ಯಾವಾಗ ನೀವು ನಿಮ್ಮ ಸ್ವಂತ ಖರ್ಚಿನ ಹಣವನ್ನು ಮುಚ್ಚಿಡಲು ಆರಂಭಿಸುತ್ತೀರೋ ಮತ್ತು ಹಣವನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಳ್ಳಲು ಆರಂಭಿಸುತ್ತೀರೋ, ಆಗ ಆ ಅಂಶವು ಜಗಳಕ್ಕೆ ನಾಂದಿಯಾಗುತ್ತದೆ. ನಿಮ್ಮ ಸಂಗಾತಿಯಿಂದ ಹಣಕಾಸು ಮಾಹಿತಿಯನ್ನು ಮುಚ್ಚಿಡಲು ಹೋಗಬೇಡಿ. ಇಂತಹ ಮುಚ್ಚಿಡುವ ಪ್ರಸಂಗಗಳು ನಿಮ್ಮನ್ನು ಮೋಸ ಮಾಡುವ ಕ್ರಿಯೆಯತ್ತ ಮುನ್ನಡೆಸುತ್ತವೆ. ಮದುವೆಯೆಂದರೆ ನೀವು ಅಂದುಕೊಂಡಷ್ಟು ಸುಲಭವಲ್ಲ!
ಸಂಗಾತಿಯ ಕುರಿತಾಗಿ ಇತರರಿಗೆ ದೂರು ನೀಡುವುದು
ಸಂಗಾತಿಯ ಕುರಿತಾಗಿ ಇತರರಿಗೆ ದೂರು ನೀಡುವುದು ನಿಲ್ಲಿಸುವವರೆಗೆ ನಿಮ್ಮ ಸಂಬಂಧ ಸರಿಹೋಗುವುದಿಲ್ಲ. ಈ ಪ್ರಕ್ರಿಯೆಯಿಂದ ನಿಮ್ಮ ಸಂಬಂಧ ಮತ್ತಷ್ಟು ಹಾಳಾಗುತ್ತದೆ. ಇದರಿಂದ ಮೂರನೇ ವ್ಯಕ್ತಿಯು ಸಹ ನಿಮ್ಮ ಸಂಬಂಧದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಗ್ರಹಿಸಬಹುದು. ಇದರಿಂದ ಅವರು ಸಹ ನಿಮ್ಮ ಪರಿಸ್ಥಿತಿಯ ಲಾಭ ತೆಗೆದುಕೊಂಡು ನಿಮ್ಮನ್ನು ಮೋಸಗಾರನ ಸ್ಥಾನದಲ್ಲಿ ನಿಲ್ಲಿಸಬಹುದು.
ಸಂಗಾತಿಯನ್ನು ಹಿಯಾಳಿಸುವುದು
ನಿಮ್ಮ ಸಂಗಾತಿಯನ್ನು ಅಡ್ಡ ಹೆಸರಿನಿಂದ ಕರೆಯುವುದು ಮತ್ತು ಅವರ ಕುರಿತು ವಿನೋದ ಮಾಡುವುದು, ಅವರನ್ನು ಭಾವನಾತ್ಮಕವಾಗಿ ಘಾಸಿ ಮಾಡುತ್ತದೆ. ಇದರಿಂದ ನಿಮ್ಮ ಸಂಗಾತಿಗೆ ನಿಮ್ಮ ಮದುವೆಯಲ್ಲಿ ಪರಸ್ಪರ ಗೌರವ ಆದರ ಇಲ್ಲ, ಇಲ್ಲಿ ಇರುವುದು ಕೇವಲ ವಿನೋದ, ಅಪಹಾಸ್ಯ ಮತ್ತು ಅಣಕ ಎಂಬ ಅಭಿಪ್ರಾಯ ಬರುವಂತೆ ಮಾಡುತ್ತದೆ. ಇಂತಹ ಪರಿಸ್ಥಿತಿಗಳು ನಿಮ್ಮ ಸಂಗಾತಿಯ ಮನಸ್ಸನ್ನು ನೋಯಿಸಿ, ಅವರು ನಿಮಗೆ ಮೋಸ ಮಾಡಲು ದಾರಿ ಮಾಡಿಕೊಡುತ್ತದೆ.
ಭಾವನಾತ್ಮಕವಾಗಿ ಅಪ್ರಾಮಣಿಕನಾಗಿರುವುದು
ಯಾವಾಗ ನೀವು ಏನೆಲ್ಲಾ ನಡೆಯುತ್ತಿದೆಯೋ, ಅದರಲ್ಲಿ ನಿಮಗೆ ಹಿಡಿಸದ ವಿಚಾರಗಳ ಕುರಿತಾಗಿ ನಿಮ್ಮ ಸಂಗಾತಿಗೆ ಹೇಳದೆ ಇದ್ದಲ್ಲಿ, ಅದರಿಂದ ಮುಂದೆ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ. ಭಾವನಾತ್ಮಕವಾಗಿ ಅಪ್ರಾಮಾಣಿಕನಾಗಿರುವುದು ಸಂಬಂಧದಲ್ಲಿ ನಾವು ಮಾಡುವ ಅತ್ಯಂತ ಅಪಾಯಕಾರಿ ಕೆಲಸವಾಗಿರುತ್ತದೆ. ನಿಮ್ಮನ್ನು ಅರ್ಥ ಮಾಡಿಕೊಳ್ಳದ ಸಂಗಾತಿಯ ಕುರಿತಾಗಿ ನೀವು ದೂರಲು ಆರಂಭಿಸುತ್ತೀರಿ.
ಇದರಿಂದ ನಿಮ್ಮ ನಡುವೆ ಜಗಳಗಳು ಆರಂಭವಾಗುತ್ತವೆ. ಇದರ ಬದಲಿಗೆ ನಿಮ್ಮ ಸಂಗಾತಿಯ ಜೊತೆಗೆ ನೀವು ಕುಳಿತು ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ನಡುವಿನ ಭಾವನೆಗಳನ್ನು ಮತ್ತೆ ಹಳಿಗೆ ತರಬಹುದು. ಈ ಮೇಲೆ ತಿಳಿಸಿದ ಮನಸ್ಸಿಗೆ ನೋವುಂಟು ಮಾಡುವ ಅಂಶಗಳನ್ನು ಮಾಡಬೇಡಿ. ಆಗ ನೀವು ಮೋಸ ಮಾಡುವ ಪರಿಸ್ಥಿತಿಯೇ ಬರುವುದಿಲ್ಲ. ಒಂದು ವೇಳೆ ನಿಮ್ಮಲ್ಲಿ ಯಾವುದಾದರು ಸಲಹೆಗಳು ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.



Click it and Unblock the Notifications

