Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರೀತಿ ವ್ಯಕ್ತಪಡಿಸುವುದು ಒಂದು ಕಲೆ, ಅದು ಹೇಗೆ ಅಂತಿರಾ?
ನೀವು ಆಕೆಯನ್ನು ಪ್ರೀತಿಸುತ್ತಿದ್ದಲ್ಲಿ ಆಕೆಗೆ ಅದನ್ನು ವ್ಯಕ್ತಪಡಿಸಿ ಎಂದು ಆಂಗ್ಲ ಸುಭಾಷಿತವೊಂದು ಹೇಳುತ್ತದೆ. ಆದರೆ ವ್ಯಕ್ತಪಡಿಸುವುದರಲ್ಲಿಯೇ ಇರುವುದು ತೊಂದರೆ. ಹೆಚ್ಚಿನವರು ಮನಸ್ಸಿನಲ್ಲಿಯೇ ಒಬ್ಬರನ್ನು ಪ್ರೀತಿಸುತ್ತಾ ಅದರ ಬಗ್ಗೆ ಏನೂ ಹೇಳದೇ ಕಡೆಗೆ ಕಾರ್ಯ ಮಿಂಚಿದ ಬಳಿಕ ಕೈ ಕೈ ಹಿಸುಕಿಕೊಳ್ಳುವುದುಂಟು. ಈ ವಿಷಯವನ್ನೇ ಬಳಸಿ ಕನ್ನಡದಲ್ಲಂತೂ ನೂರಾರು ಚಲನಚಿತ್ರಗಳು ಬಂದಿವೆ.
ಆದ್ದರಿಂದ ಒಂದು ವೇಳೆ ನಿಮ್ಮ ಪ್ರೀತಿ ನಿಜವಾದದ್ದೇ ಆದರೆ ಯಾವುದೇ ಅಳುಕಿಲ್ಲದೇ ನೇರವಾಗಿ ಕೇಳಿ ಸ್ಪಷ್ಟಪಡಿಸಿಕೊಳ್ಳುವುದು ಉತ್ತಮ. ಇದರಿಂದ ಒಂದೇ ಹೌದು ಅಥವಾ ಇಲ್ಲ ಎಂಬ ಸ್ಪಷ್ಟ ಉತ್ತರ ತಕ್ಷಣಕ್ಕೆ ದೊರಕುವುದು ಕಷ್ಟವಾದರೂ ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಪ್ರಾರಂಭವಾಗಿದೆ ಎಂದು ತಿಳಿದುಕೊಂಡು ಸಮಾಧಾನ ಪಟ್ಟುಕೊಳ್ಳಬಹುದು. ಒಂದು ವೇಳೆ ಪ್ರೀತಿ ಇಬ್ಬರಲ್ಲಿಯೂ ಸರಿಸಮಾನವಾಗಿದ್ದರೆ ಈ ಪ್ರಯತ್ನ ಖಂಡಿತಾ ಫಲಕೊಡುತ್ತದೆ.
ಒಂದು ವೇಳೆ ಮನದಲ್ಲಿಯೇ ಮಂಡಿಗೆ ತಿನ್ನುತ್ತಾ ಪ್ರೀತಿಸಿದ ವ್ಯಕ್ತಿಯ ಸ್ನೇಹ ಅಥವಾ ಅನುಕಂಪವನ್ನೇ ತಪ್ಪಾಗಿ ಅರ್ಥೈಸಿಕೊಂಡು ಕಡೆಗೆ ನಿರಾಶೆಗೊಳ್ಳುವ ಅಪಾಯವಿದೆ. ವ್ಯತಿರಿಕ್ತವಾಗಿ ಇಬ್ಬರ ಪ್ರೀತಿಯೂ ಅಪ್ಪಟವಾಗಿದ್ದರೆ ಮತ್ತು ಈ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುವುದು ಎಂಬ ದ್ವಂದ್ವದಲ್ಲಿ ನೀವಿದ್ದರೆ ಕೆಳಗಿನ ಸ್ಲೈಡ್ ಶೋ ನಲ್ಲಿ ನೀಡಿರುವ ವಿಧಾನಗಳು ನಿಮ್ಮ ನೆರವಿಗೆ ಬರಲಿವೆ. ವಿವಾಹದ ಬಳಿಕವೂ ದಂಪತಿಗಳು ಪರಸ್ಪರರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಅಗತ್ಯ. ಇವುಗಳಲ್ಲಿ ಹಲವು ಚಲನಚಿತ್ರಗಳು ಮತ್ತು ಜಾನಪದ ಕಥೆಗಳಿಂದ ಪ್ರೇರಿತವಾಗಿವೆ. ಮದುವೆಯೆಂದರೆ ನೀವು ಅಂದುಕೊಂಡಷ್ಟು ಸುಲಭವಲ್ಲ!

ಹಿತವಾದ ಅಪ್ಪುಗೆ
ಪ್ರತಿ ಪತ್ನಿಯೂ ತನ್ನ ಪತಿಯಿಂದ ಹಿತವಾದ ಅಪ್ಪುಗೆಯನ್ನು ಬಯಸುತ್ತಾಳೆ. ಈ ಅಪ್ಪುಗೆಯಲ್ಲಿ ಕಾಮವಾಸನೆಗಿಂತ ಹೆಚ್ಚಾಗಿ ಆಕೆ ಸುರಕ್ಷಾ ಭಾವನೆಯನ್ನು ಅನುಭವಿಸುತ್ತಾಳೆ. ಗಾಳಿಗೆ ಓಲಾಡುತ್ತಿದ್ದ ಬಳ್ಳಿಗೆ ಮರದ ಆಸರೆ ಸಿಕ್ಕಂತೆ ಪ್ರಫುಲ್ಲಿತಳಾಗುತ್ತಾಳೆ. ಜೀವನಪೂರ್ತಿ ನಿನ್ನ ರಕ್ಷಣೆ ಮಾಡುವೆ, ನಿನಗೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳುವೆ, ನಿನ್ನ ಜವಾಬ್ದಾರಿ ಇನ್ನು ಮುಂದೆ ನನ್ನದು ಎಂದು ಪತಿ ತನ್ನ ಪತ್ನಿಗೆ ಯಾವುದೇ ಪದಗಳ ಅಗತ್ಯವಿಲ್ಲದೇ ಹೇಳುವ ಈ ಅಪ್ಪುಗೆ ಅತ್ಯಂತ ಫಲಕಾರಿ ವಿಧಾನವಾಗಿದೆ.
ಮುಗುಳ್ನಗೆ
ಸಾಮಾನ್ಯವಾಗಿ ಯುವತಿಯರು ತಮ್ಮ ಮುಗುಳ್ನಗೆಯಿಂದಲೇ ಪಡ್ಡೆ ಹುಡುಗರಿಂದ ತಮ್ಮ ಎಲ್ಲಾ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ಕಿರುನಗೆಯ ಬಾಣಕ್ಕೆ ಸಂಪೂರ್ಣವಾಗಿ ಬಲಿಯಾದ ಹುಡುಗರು ಆಕೆಯ ಕೆಲಸ ಮಾಡಿಕೊಡುವುದು ತಮ್ಮ ಆದ್ಯತೆಯ ಕರ್ತವ್ಯವೆಂದು ಭಾವಿಸುತ್ತಾರೆ. ಆದರೆ ಇದು ಕೇವಲ ತಮ್ಮ ಕೆಲಸ ಮಾಡಿಸಿಕೊಳ್ಳುವ ಒಂದು ತಂತ್ರವಾಗಿದ್ದೇ ಹೊರತು ಆ ಕೆಲಸದ ಬಳಿಕ ಕಿರುನಗೆ ಮಾಯವಾಗುತ್ತದೆ.
ಆದರೆ ನಿಮ್ಮ ಪ್ರೇಮಿ ಅಥವಾ ಪತಿ/ಪತ್ನಿಯ ಎದುರು ನಿಮ್ಮ ನಿಜವಾದ ಮುಗುಳ್ನಗೆ ಸ್ವಾರ್ಥರಹಿತವಾಗಿದ್ದು ಆತನ/ಆಕೆಯ ಸಾಮೀಪ್ಯ ತಮಗೆ ಇಷ್ಟವಾಗಿದೆ, ಇನ್ನಷ್ಟು ಸಾಮೀಪ್ಯ ಬಯಸುತ್ತೇವೆ ಎಂದು ಸೂಚ್ಯವಾಗಿ ಹೇಳುವ ವಿಧಾನವಾಗಿದೆ.
ಕಣ್ಣಿನಲ್ಲಿ ಕಣ್ಣನಿಟ್ಟು ಮಾತನಾಡುವುದು
ಪ್ರೇಮಿಗಳು ಮತ್ತು ದಂಪತಿಗಳು ಪರಸ್ಪರ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದು ಪರಸ್ಪರರಲ್ಲಿ ಭರವಸೆ ಮತ್ತು ವಿಶ್ವಾಸವನ್ನು ತೋರ್ಪಡಿಸುವ ವಿಧಾನವಾಗಿದೆ. ಒಂದು ವೇಳೆ ಮಾತನಾಡುವಾಗ ಎತ್ತಲೋ ನೋಡುತ್ತಿದ್ದರೆ ಇದು ಆತ/ಆಕೆ ತಮ್ಮಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ಯತ್ನದಂತೆ ಇನ್ನೊಬ್ಬರಿಗೆ ಅನ್ನಿಸುತ್ತದೆ. ಆದ್ದರಿಂದ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಆಡುವ ಮಾತುಗಳು ನೇರವಾಗಿ ಹೃದಯಕ್ಕೆ ಇಳಿದು ಜೀವನವನ್ನೇ ಸುಂದರವಾಗಿಸುತ್ತವೆ. ಪ್ರೀತಿ ವಿಶ್ವಾಸವೇ ಸುಖ ಸಂಸಾರದ ಕಣ್ಣು..!
ಅರಿವಿಲ್ಲದೇ ನೀಡುವ ಚುಂಬನ
ನಿಮ್ಮ ಪ್ರೇಮಿ ಅಥವಾ ಪತಿ/ಪತ್ನಿಗೆ ಆಕೆಯು ನಿರೀಕ್ಷಿಸದೇ ಇರುವಂತೆ ನೀಡುವ ಚುಂಬನ ಚೇತೋಹಾರಿಯಾಗಿದೆ. ಆದರೆ ಇದಕ್ಕೆ ಸಮಯ ಮತ್ತು ಸಂದರ್ಭ ಅತಿ ಅಗತ್ಯ. ಈ ಬಗೆಯ ಚುಂಬನವನ್ನು ಪತಿ ಮತ್ತು ಪತ್ನಿ ಇಬ್ಬರೂ ಬಯಸುತ್ತಾರೆ. ಒಂದರ್ಥದಲ್ಲಿ ನಿಮ್ಮ ನಿಜವಾದ ಪ್ರೀತಿಯನ್ನು ವ್ಯಕ್ತಪಡಿಸಲು ವಿಶ್ವದ ಅತ್ಯಂತ ಉತ್ತಮ ವಿಧಾನವಾಗಿದೆ.



Click it and Unblock the Notifications


