ನಿಮ್ಮ ಪಾರ್ಟನರ್‌ ಅನ್‌ರೊಮ್ಯಾಂಟಿಕ್ ವ್ಯಕ್ತಿಯೇ? ಹೀಗೆ ಹ್ಯಾಂಡಲ್ ಮಾಡಿ ನೋಡಿ

ಸಾಕಷ್ಟು ದಾಂಪತ್ಯದಲ್ಲಿರುವ ದೊಡ್ಡ ಸಮಸ್ಯೆಯೆಂದರೆ ದಂಪತಿಯಲ್ಲಿ ಒಬ್ಬರು ಅನ್‌ರೊಮ್ಯಾಂಟಿಕ್‌, ಅವರ ಈ ಸ್ವಭಾವವೇ ಸಂಗಾತಿಯ ಅಸಮಧಾನಕ್ಕೆ ಕಾರಣವಾಗಿರುತ್ತದೆ. ಇಬ್ಬರಲ್ಲಿ ಒಬ್ಬರು ರೊಮ್ಯಾಂಟಿಕ್ ಆಗಿರಲು ಬಯಸುವವರು, ಇನ್ನೊಬ್ಬರಿಗೆ ತನ್ನ ಭಾವನೆಗಳನ್ನು ಹೇಳಿಕೊಳ್ಳಲೇ ಬರುವುದಿಲ್ಲ ಎಂದಾದರೆ ಅಲ್ಲಿಗೆ ಆ ದಾಂಪತ್ಯ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ ಎಂಬುವುದರಲ್ಲಿ ನೋ ಡೌಟ್. ಈ ಕಾರಣದಿಂದ ಸಂಗಾತಿ ಬೇರೆ ಕಡೆ ಆಕರ್ಷಿತರಾಗುವ ಅಪಾಯ ಕೂಡ ಇದೆ.

unromantic life partner

ಕೆಲವರು ಸ್ವಭಾವವೇ ಹಾಗೆ ಏನು ಹೇಳಿಕೊಳ್ಳಲು ನಾಚಿಕೆ, ಎಲ್ಲದಕ್ಕೂ ಹಿಂದೇಟು ಹಾಕುತ್ತಾರೆ, ತಮ್ಮ ಸಂಗಾತಿ ಜೊತೆ ಒಂದೆರಡು ರೊಮ್ಯಾಂಟಿಕ್ ಮಾತನಾಡಲು ಅದೇನೋ ಸಂಕೋಚ, ಈ ಕಾರಣಕ್ಕೆ ಅವರಿಗೆ ಯಾವುದೇ ಫೀಲಿಂಗ್‌ ಇಲ್ಲ ಎಂದು ಅರ್ಥವಲ್ಲ, ಅವುಗಳನ್ನು ವ್ಯಕ್ತಪಡಿಸುವ ರೀತಿ ಗೊತ್ತಿರುವುದಿಲ್ಲ, ಇಂಥ ಅನ್‌ರೊಮ್ಯಾಂಟಿಕ್ ಪಾರ್ಟನರ್ ಸಿಕ್ಕರೆ ಹೇಗೆ ಹ್ಯಾಂಡಲ್‌ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಹೋಲಿಕೆ ಮಾಡಬೇಡಿ: ಹೌದು ನಿಮ್ಮ ದಾಂಪತ್ಯ ಜೀವನವನ್ನು ಮತ್ತೊಬ್ಬರ ಜೊತೆಗೆ ಹೋಲಿಕೆ ಮಾಡಬೇಡಿ, ಏಕೆಂದರೆ ಮತ್ತೊಬ್ಬರ ಜೀವನ ತುಂಬಾ ರೊಮ್ಯಾಮಟಿಕ್ ಆಗಿ ಮೇಲ್ನೋಟಕ್ಕೆ ನಮಗೆ ಕಾಣಿಸಬಹುದು. ಅವರ ಸಂಗಾತಿ ಸರ್ಪ್ರೈಸ್‌ ಗಿಫ್ಟ್ಸ್‌ ನೀಡಬಹುದು, ಬರ್ತ್‌ಡೇ, ವೆಡ್ಡಿಂಗ್ ಆ್ಯನಿವರ್ಸರಿಗಳನ್ನು ತುಂಬಾ ಚೆನ್ನಾಗಿ ಆಚರಿಸಬಹುದು, ಆದರೆ ನನ್ನ ಜೀವನದಲ್ಲಿ ಹಾಗೇನೂ ಇಲ್ವಲ್ಲ ಅಂತ ಕೊರಗಬೇಡಿ. ಸೊ ರೊಮ್ಯಾಂಟಿಕ್ ಕಪಲ್, ಕ್ಯೂಟ್‌ ಕಪಲ್ ಅಂತ ಕರೆಸಿಕೊಂಡವರು ಸ್ವಲ್ಪ ವರ್ಷದಲ್ಲಿ ವಿಚ್ಛೇದನ ಪಡೆದಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ ಅಲ್ವಾ? ಆದ್ದರಿಂದ ಬೇರೆಯವರ ಜೀವನದ ಜೊತೆಗೆ ಹೋಲಿಕೆ ಮಾಡಲೇಬೇಡಿ, ನಿಮ್ಮ ಸಂಗಾತಿ ನೀವು ಬಯಸಿದಷ್ಟು ರೊಮ್ಯಾಂಟಿಕ್‌ ಅಲ್ಲದಿದ್ದರೆ ಅವರನ್ನು ಅವರಂತೆಯೇ ಸ್ವೀಕರಿಸಿ, ಈ ರೀತಿ ಮಾಡಿದರೆ ನಿಮ್ಮ ಅರ್ಧ ಸಮಸ್ಯೆ ಕಡಿಮೆಯಾಗುವುದು.

ಹೀಯಾಳಿಸಬೇಡಿ
ನೀವು ಬಯಸಿದಂತೆ ಅವರಿಲ್ಲ ಎಂಬ ಕಾರಣಕ್ಕೆ ಅವರನ್ನು ಹೀಯಾಳಿಸಬೇಡಿ, ಈ ರೀತಿ ಮಾಡಿದರೆ ನಿಮ್ಮ ಸಂಬಂಧದಲ್ಲಿ ಬಿರುಕು ಹೆಚ್ಚಾಗುವುದು. ಮೊದಲೇ ಅವರ ಸ್ವಲ್ಪ ಸಂಕೋಚ ಸ್ವಭಾವದವರು, ಹೀಯಾಳಿಸುವುದು, ಕಾಲೆಳೆಯುವುದು ಮಾಡಿದರೆ ಅವರು ನಿಮ್ಮಿಂದ ಮತ್ತಷ್ಟು ದೂರಸರಿಯಬಹುದು, ಇದರಿಂದ ಮನೆಯ ಪರಿಸರ ಮತ್ತಷ್ಟು ಉಸಿರುಗಟ್ಟುವುದು.

ನಿಯತ್ತಿನಿಂದ ಇರಿ
ಅವರು ರೊಮ್ಯಾಂಟಿಕ್ ಅಲ್ಲ ಎಂದ ಮಾತ್ರಕ್ಕೆ ಅವರಿಗೆ ನಿಮ್ಮ ಮೇಲೆ ಫೀಲಿಂಗ್ ಇಲ್ಲ, ನಿಮ್ಮನ್ನು ಪ್ರೀತಿಸುತ್ತಿಲ್ಲ ಎಂದೆಲ್ಲಾ ಬಯಸುವುದು ತಪ್ಪು, ಅವರಿಗೆ ನಿಮ್ಮ ಮೇಲೆ ಇಷ್ಟ ಇರುತ್ತದೆ ಅದನ್ನು ತೋರ್ಪಡಿಸುವ ವಿಧಾನ ಗೊತ್ತಿರುವುದಿಲ್ಲ, ಕೆಲವರು ನನ್ನ ಸಂಗಾತಿ ರೊಮ್ಯಾಂಟಿಕ್ ಅಲ್ಲ ಎಂಬ ಕಾರಣಕ್ಕೆ ಆ ಪ್ರೀತಿಯನ್ನು ಬೇರೆಲ್ಲೋ ಹುಡುಕುವ ಪ್ರಯತ್ನ ಮಾಡುತ್ತಾರೆ, ಆ ರೀತಿ ತಪ್ಪು ಮಾಡಬಾರದು.

ನೀವು ಅವರನ್ನು ಬದಲಾಯಿಸಲು ಪ್ರಯತ್ನಿಸಿ
ಅವರು ರೊಮ್ಯಾಂಟಿಕ್ ಆಗಿರದಿದ್ದರೆ ಬೇಡ, ನೀವು Initiate ತೆಗೆದುಕೊಳ್ಳಿ. ಅವರಿಗೆ ನೀವೇ ಸರ್‌ಫ್ರೈಸ್ ಗಿಫ್ಟ್ ನೀಡಿ, ವಿಶೇಷ ದಿನಗಳಂದು ನೀವೇ ವಿಶೇಷವಾಗಿ ಪ್ಲ್ಯಾನ್ ಮಾಡಿ, ನಿಧಾನಕ್ಕೆ ಅವರನ್ನು ಬದಲಾಯಿಸಲು ಪ್ರಯತ್ನಿಸಿ, ಅವರು ಕೂಡ ಬದಲಾಗುತ್ತಾರೆ. ಅವರು ಬದಲಾಗದಿದ್ದರೆ ಬೇಸರ ಬೇಡ, ಅವರ ಸ್ವಭಾವ ಹಾಗೆಯೇ ಎಂದು ಭಾವಿಸಿ ನೀವು ಮಾತ್ರ ಅವರೊಂದಿಗೆ ಖುಷಿ-ಖುಷಿಯಿಂದ ಇರಿ, ಹೀಗೆ ಮಾಡಿದರೆ ಅವರು ಹೇಳಿಕೊಳ್ಳದಿದ್ದರೂ ನಿಮ್ಮನ್ನು ತುಂಬಾ ಇಷ್ಟಪಡಲು ಆರಂಭಿಸುತ್ತಾರೆ, ಅದನ್ನು ನೀವು ಅವರ ವರ್ತನೆಯಲ್ಲಿ ಕಾಣಬಹುದು.
ಒಳ್ಳೆಯದನ್ನೇ ನಿರೀಕ್ಷಿಸಿ, ಖಂಡಿತ ಒಳಿತಾಗುತ್ತದೆ....

English summary

How To Handle Unromantic Life Partner In Kannada

Your partner is unromantic, here is tips how to handle it, read on...
Story first published: Tuesday, August 22, 2023, 21:53 [IST]
X
Desktop Bottom Promotion