Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರಾರಂಭದಲ್ಲಿಯೇ ಈ ಸಮಸ್ಯೆ ಇದ್ರೆ ಆ ಸಂಬಂಧ ತುಂಬಾ ಸಮಯ ಉಳಿಯುವುದಿಲ್ಲ ನೆನಪಿರಲಿ!
ಒಂದು ಸಂಬಂಧವನ್ನು ಉಳಿಸಿಕೊಳ್ಳುವುದು, ಜೀವನ ಪರ್ಯಂತ ಆ ಸಂಬಂಧದ ಜೊತೆಗೆ ಬದುಕುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಎಲ್ಲದಕ್ಕಿಂತ ಹೆಚ್ಚಾಗಿ ನಂಬಿಕೆ ಎನ್ನುವುದು ಬಹಳ ಮುಖ್ಯ. ದಂಪತಿಗಳಲ್ಲಿ ಗಂಡನ ಮೇಲೆ ಹೆಂಡತಿಗೆ ಹೆಂಡತಿಯ ಮೇಲೆ ಗಂಡನಿಗೆ ಪ್ರೀತಿಯ ಜೊತೆಗೆ ನಂಬಿಕೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಒಂದು ವೇಳೆ ನಂಬಿಕೆ ಕಳೆದುಕೊಂಡಾಗ ಆ ಸಂಬಂಧಕ್ಕೆ ಯಾವುದೇ ಅರ್ಥ ಇರುವುದಿಲ್ಲ.

ಕೆಲವೊಮ್ಮೆ ಈ ಸಂಬಂಧ ಇಂದು ಸರಿ ಹೋಗಬಹುದು, ನಾಳೆ ಸರಿಯಾಗಬಹುದು ಅಂತ ಕಾಯುತ್ತಲೇ ಇರುತ್ತೇವೆ ಆ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳು ಇದ್ದರೂ ಅದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಗಾಳಿ ಗೋಪುರದಂತಹ ಸಂಬಂಧ ಎಷ್ಟು ದಿನ ಉಳಿದುಕೊಳ್ಳಲು ಸಾಧ್ಯ ಅಥವಾ ಇಂತಹ ಸಂಬಂಧದಲ್ಲಿ ನೀವು ಎಷ್ಟು ದಿನ ನೆಮ್ಮದಿಯಾಗಿ ಇರಲು ಸಾಧ್ಯ!? ಹಾಗಾಗಿ ನೀವು ಒಬ್ಬರನ್ನ ಇಷ್ಟಪಟ್ಟಿದ್ದೀರಿ ಎಂದಾದರೆ ಅವರ ಜೊತೆಗೆ ಇಡೀ ಜೀವನ ಕಳೆಯಲು ಸಾಧ್ಯವಿದೆಯೇ ಇಲ್ಲವೇ ಎಂಬುದನ್ನ ಮೊದಲೇ ತಿಳಿದುಕೊಳ್ಳಬೇಕು ಒಬ್ಬ ವ್ಯಕ್ತಿಯ ನಡವಳಿಕೆ ಆತ ಸಂಬಂಧವನ್ನು ಮುನ್ನಡೆಸಿಕೊಂಡು ಹೋಗಲು ಶಕ್ಯನೋ ಅಲ್ಲವೋ ಎಂಬುದು ತಿಳಿಸುತ್ತದೆ.
ಸಂಬಂಧದ ಆರಂಭದಲ್ಲಿಯೇ ಈ ಸಂಬಂಧ ಮುಂದುವರೆಯಲು ಸಾಧ್ಯವಿಲ್ಲ ಎಂದು ತಿಳಿಸುವ ಲಕ್ಷಣಗಳು ಇವು!
ವ್ಯಕ್ತಿ ನಿಮ್ಮನ್ನು ಗೌರವಿಸದೆ ಇದ್ದರೆ;
ಹೆಣ್ಣಾಗಿರಲಿ ಗಂಡಾಗಿರಲಿ ಪರಸ್ಪರ ಗೌರವಿಸುವುದು ಬಹಳ ಮುಖ್ಯ, ನಾನು ಹೆಚ್ಚು, ನೀನು ಕಡಿಮೆ ಎನ್ನುವ ಅಹಂಕಾರ ಬೆಳೆಸಿಕೊಳ್ಳಬಾರದು ಒಂದು ವೇಳೆ ಈ ರೀತಿ ಮನಸ್ಥಿತಿ ಇದ್ದು ನಿಮ್ಮನ್ನ ನಿಮ್ಮ ಸಂಗಾತಿ ಆಗಲು ಬಯಸುವ ವ್ಯಕ್ತಿ ಗೌರವದಿಂದ ನೋಡಿಕೊಳ್ಳದೆ ಇದ್ದರೆ ಆಗಾಗ ಸಣ್ಣ ಪುಟ್ಟ ಕಾರಣಕ್ಕೆ ಅವಮಾನ ಮಾಡುತ್ತಿದ್ದರೆ ಅದು ಅವರ ಸ್ವಭಾವ ಎಂದು ಭಾವಿಸಿ. ಈ, ಸಂಬಂಧವನ್ನು ಮುಂದುವರಿಸಿಕೊಂಡು ಹೋದರು ಕೂಡ ನಿಮ್ಮ ಅನುಮಾನ ಎನ್ನುವ ಅವ ಸ್ವಭಾವವು ಜೊತೆಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಿ ಅಂತಹ ಪರಿಸ್ಥಿತಿಯಲ್ಲಿ ನೀವು ಜೀವಿಸಲು ಇಷ್ಟಪಡದೆ ಇದ್ದರೆ ಈಗಲೇ ಅಂತಹ ಸಂಬಂಧವನ್ನು ಕಳೆದುಕೊಳ್ಳುವುದು ಒಳ್ಳೆಯದು.
ಹೋಲಿಕೆ ಮಾಡುವುದು:
ನಾವು ಹೇಗಿದ್ದೇವೋ ಹಾಗೆ ಇರಬೇಕು ನಾವು ಹೇಗಿದ್ದೇವೆಯೋ ನಮ್ಮನ್ನು ಮದುವೆ ಆಗುವ ವ್ಯಕ್ತಿ ಹಾಗೆಯೇ ಇಷ್ಟ ಪಡಬೇಕು ಆದರೆ ಅವರನ್ನು ನೋಡು ಹೇಗಿದ್ದಾರೆ ನೀನು ನೋಡು ಹೇಗಿದ್ದೀಯಾ ಎಂದು ಯಾವಾಗ ಹೋಲಿಕೆ ಮಾಡಲು ಆರಂಭಿಸುತ್ತಾರೋ ಆ ಸಂಬಂಧ ಚೆನ್ನಾಗಿರುವುದಿಲ್ಲ. ನಿಮ್ಮ ಸಂಗಾತಿಯಾಗಲು ಬಯಸುವ ವ್ಯಕ್ತಿಗೆ ಈ ಅಭ್ಯಾಸ ಇದ್ದರೆ ಖಂಡಿತವಾಗಿಯೂ ಆ ಸಂಬಂಧವನ್ನು ಮುಂದುವರಿಸುವುದರಲ್ಲಿ ಅರ್ಥವೇ ಇಲ್ಲ.
ನಂಬಿಕೆ ಉಳಿಸಿಕೊಳ್ಳುವುದು:
ಇದು ಸಂಬಂಧಗಳ ಅಡಿಪಾಯ ಎಂದೇ ಹೇಳಬಹುದು ಪರಸ್ಪರ ನಂಬಿಕೆ ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಒಮ್ಮೆ ನಂಬಿಕೆಯನ್ನು ಕಳೆದುಕೊಂಡರೆ ಅದು ಮತ್ತೆ ಬರಲು ಸಾಧ್ಯವೇ ಇಲ್ಲ. ಎಷ್ಟೋ ಬಾರಿ ಸಂಬಂಧಗಳಲ್ಲಿ ಸುಳ್ಳು ಹೇಳುವ ಪರಿಸ್ಥಿತಿ ಎದುರಾಗಬಹುದು ಆದರೆ ಅದು ಒಳ್ಳೆಯ ಕಾರಣಕ್ಕಾಗಿದ್ದರೆ ಸರಿ ಹೊರತು ಇದನ್ನೇ ಅಭ್ಯಾಸ ಮಾಡಿಕೊಂಡು ಸಂಗಾತಿಯ ನಂಬಿಕೆ ಕಳೆದುಕೊಳ್ಳುವಂತಹ ಕೆಲಸ ಮಾಡಿದರೆ ಆ ಸಂಬಂಧದಲ್ಲಿ ಯಾವುದೇ ಹುರುಳಿಲ್ಲ ಎಂದು ನೀವು ಭಾವಿಸಿ.
ಸರಿಯಾಗಿ ಪ್ರೀತಿ ಕೊಡದೆ ಇರುವುದು!
ಕೆಲವೊಮ್ಮೆ ಜೀವನದಲ್ಲಿ ಬೇರೆ ಏನೂ ಬೇಡ ನಾನು ಪ್ರೀತಿಸುವ ವ್ಯಕ್ತಿ ನನ್ನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಂಡರೆ ಸಾಕು ಎಂದು ಅನಿಸುತ್ತೆ. ಆದರೆ ಅದೆಷ್ಟೋ ಜನರಿಗೆ ಇರುವ ಕೇವಲ ಕನಸು ಅಷ್ಟೇ ಸುಮ್ಮನೆ ಬಾಯಿ ಮಾತಿನಲ್ಲಿ ಪ್ರೀತಿಸುತ್ತೇನೆ ಎಂದು ಹೇಳಿ ಆ ಪ್ರೀತಿಗೆ ಅನ್ಯಾಯ ಮಾಡುವವರು ಸಾಕಷ್ಟು ಜನ ಇದ್ದಾರೆ. ತೋರಿಕೆ ಪ್ರೀತಿ ತೋರಿಸುವರ ಬಗ್ಗೆ ಗಮನವಿರಲಿ ಇವರ ಪ್ರೀತಿ ಹೃದಯಾಳದಿಂದ ಬರುತ್ತಿಲ್ಲ ಕೇವಲ ಮೇಲ್ನೋಟಕ್ಕೆ ಮಾತ್ರ ಎಂದು ನಿಮ್ಮ ಗಮನಕ್ಕೆ ಬಂದರೆ ಆ ಸಂಬಂಧವನ್ನು ಎಂದಿಗೂ ಮುಂದುವರಿಸಲು ಹೋಗಬೇಡಿ. ಹಾಗೆ ಮುಂದುವರೆಸಿದರು ಕೂಡ ಜೀವನದಲ್ಲಿ ನೀವು ಚೆನ್ನಾಗಿ ಅವರೊಂದಿಗೆ ಬದುಕಲು ಸಾಧ್ಯವಿಲ್ಲ.
ಆಕರ್ಷಣೆಯ ಸಂಬಂಧ!
ದೈಹಿಕ ಆಕರ್ಷಣೆ ನಿರಂತರವಾಗಿ ಅಥವಾ ಶಾಶ್ವತವಾಗಿ ಇರುವಂತದ್ದಲ್ಲ. ಅದರ ಬದಲು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಬಹಳ ಮುಖ್ಯವಾಗಿರುತ್ತದೆ. ಆದರೆ ನಿಮ್ಮ ಸೌಂದರ್ಯವನ್ನು ನೋಡಿ ಒಬ್ಬ ವ್ಯಕ್ತಿ ನಿಮ್ಮ ಜೊತೆಗೆ ಇದ್ದಾನೆ ಎಂದಾದರೆ ತಕ್ಷಣವೇ ಅದನ್ನ ಗುರುತಿಸಿ ಆ ಸಂಬಂಧಕ್ಕೆ ಬ್ರೇಕ್ ಹಾಕಿ ಇಲ್ಲವಾದರೆ ಕಳೆದುಹೋಗುವ ಈ ಆಕರ್ಷಣೆಯಂತೆ ಸಂಬಂಧವು ಕೂಡ ಹಾಳಾಗಬಹುದು.
ಹೀಗೆ ಒಬ್ಬ ವ್ಯಕ್ತಿಯನ್ನು ಭೇಟಿಯಾದ ಕೂಡಲೇ ಆತನ ಸ್ವಭಾವವನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಮದುವೆ ಆದ ನಂತರ ಅರ್ಥ ಮಾಡಿಕೊಳ್ಳುತ್ತೇನೆ ಎಂದು ನೀವು ಈಗಲೇ ತೀರ್ಮಾನಿಸಿದರೆ ನಂತರ ಜೀವನಪೂರ್ತಿ ಹೊಂದಾಣಿಕೆ ಮಾಡುಕೊಳ್ಳುವುದರಲ್ಲಿಯೇ ಕಾಲದೂಡಬೇಕಾಗುತ್ತದೆ ಎಚ್ಚರ.



Click it and Unblock the Notifications