Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಂತೋಷದ ಸಂಸಾರಕ್ಕೆ ಬೇಕು ಆರೋಗ್ಯಕರ ದಾಂಪತ್ಯ

ಮದುವೆಯ ನಂತರ ಮನೆಯವರು ಸಂತೋಷವಾಗಿದ್ದೀರ ಅಂತ ವಿಚಾರಿಸುತ್ತಾರೆ, ಆದರೆ ನೀವು ಮಾತ್ರ ನಿಮ್ಮ ಸಂಸಾರ ಆರೋಗ್ಯಕರವಾಗಿದೆಯೇ ಎಂದು ಗಮನಿಸಬೇಕು! ಮದುವೆಯಾದ ಶುರುವಿನಲ್ಲಿ ಎಲ್ಲರೂ ಸಂತೋಷವಾಗಿಯೇ ಇರುತ್ತಾರೆ, ಆದರೆ ನಂತರ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ. ಅದನ್ನೇ ಬೆಳೆಯಲು ಬಿಟ್ಟರೆ ಆ ಸಂತೋಷವೆಂಬುದು ಇಲ್ಲವಾಗುತ್ತದೆ. ಅದಕ್ಕೆ ಸಂಸಾರ ಆರೋಗ್ಯಕರವಾಗಿದೆಯೇ ಎಂದು ನೋಡಿಕೊಳ್ಳಿ. ಆರೋಗ್ಯಕರವಾಗಿದ್ದ ಸಂಸಾರದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲೆಸಿರುತ್ತದೆ.
ಮದುವೆಯ ನಂತರ ತಾನು ಅಂತ ಯೋಚಿಸದೆ ನಾವು ಅಂತ ಯೋಚಿಸಬೇಕು ಅಂತ ಹಿರಿಯರು ಹೇಳುತ್ತಾರೆ. ನಾವು ಅಂತ ಯೋಚಿಸಿದಾಗ ಅಲ್ಲಿ ಇಬ್ಬರ ಭಾವನೆಗಳಿಗೆ ಬೆಲೆ ಇರುತ್ತದೆ. ನಾವು, ನಮ್ಮದು ಅಂತ ಯೋಚಿಸುವ ಬದಲು ನಾನು, ನನ್ನದು ಎಂಬ ಭಾವನೆ ದಂಪತಿಗಳಲ್ಲಿ ಒಬ್ಬರಿಗೆ ಇದ್ದರೆ ಸಾಕು ಆ ಸಂಸಾರ ಸುಖಕರವಾಗಿರುವುದಿಲ್ಲ. ಅಲ್ಲಿ ಪ್ರೀತಿಗಿಂತ ಅಹಂ ಹೆಚ್ಚಾಗುವುದು.
ಮತ್ತೊಂದು ಮುಖ್ಯವಾದ ಅಂಶವೆಂದರೆ ಇಬ್ಬರಿಗೂ ತಮ್ಮದೇ ಆದ ಸಮಯ ಕಳೆಯುವ ಸ್ವಾತಂತ್ರ್ಯ ಇರಬೇಕು. ಫ್ರೆಂಡ್ಸ್ ಜೊತೆ ಕಳೆಯಲು, ಮನೆಯವರ ಜೊತೆ ಕಳೆಯಲು ಅವಕಾಶ ಮತ್ತು ಸ್ವಾತಂತ್ರ್ಯ ಕೊಡಬೇಕು. ಗಂಡ ಗೆಳೆಯರ ಜೊತೆ ಪಾರ್ಟಿಗೆ ಹೋದ ಎಂದು ಹೆಂಡತಿ ರಂಪಾಟ ಮಾಡುವುದು, ತಾಯಿಗೆ ಮನೆಗೆ ಅಥವಾ ಫ್ರೆಂಡ್ಸ್ ಜೊತೆ ಹೊರಗಡೆ ಹೋಗಬೇಡವೆಂದು ಗಂಡ ಹೆಂಡತಿಗೆ ನಿರ್ಬಂಧ ಹಾಕುವುದು ಮಾಡಿದರೆ ಅಂತಹ ಸಂಸಾರ ಆರೋಗ್ಯಕರವಾಗಿರಲು ಸಾಧ್ಯವಿಲ್ಲ.
ಅದರಲ್ಲೂ ಸಂಸಾರವೆಂದ ಮೇಲೆ ನಂಬಿಕೆ ಮುಖ್ಯ. ಇವತ್ತು ಎಷ್ಟೋ ಸಂಸಾರಗಳು ಕೋರ್ಟಿಗೆ ಬರಲು ಕಾರಣ 'ಸಂಶಯ'. ಆದ್ದರಿಂದ ಪ್ರತಿಯೊಂದು ವಿಷಯದ ಬಗ್ಗೆ ಮನಬಿಚ್ಚಿ ಮಾತನಾಡಿದರೆ ಅಲ್ಲಿ ಸಂಶಯವೆಂಬುದು ಇರುವುದಿಲ್ಲ. ದಂಪತಿಗಳ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಕೆಲಸ ಕಾರ್ಯಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಗಂಡ-ಹೆಂಡತಿಯ ನಡುವೆ ಯಾವುದೇ ಕಾರಣಕ್ಕೂ ಬಿರುಕು ಬರಲು ಬಿಡಬಾರದು. ದಂಪತಿಗಳಲ್ಲಿ ಅತೃಪ್ತಿ, ಅಹಂ, ಮುಚ್ಚುಮರೆಯ ಗುಣಗಳಿದ್ದರರ ಮಾತ್ರ ಮೂರನೆಯ ವ್ಯಕ್ತಿ ಅವರಿಬ್ಬರ ಮಧ್ಯದಲ್ಲಿ ಪ್ರವೇಶಿಸುತ್ತಾನೆ/ತ್ತಾಳೆ. ಆ ರೀತಿ ಆಗದಿರಲು ಸಂಸಾರವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು, ಆಗ ಸಂತೋಷ ದಾಂಪತ್ಯ ಜೀವನ ನಿಮ್ಮದಾಗುವುದು.



Click it and Unblock the Notifications
