Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಮ್ಮನ ಸಕ್ಕರೆ ಅಕ್ಕರೆ ನೆನಪಿದೆಯೇ ಮಕ್ಕಳೇ

ಅಮ್ಮ ಸರಿಯಾಗಿ ಮಾತನಾಡುವುದಿಲ್ಲ, ಓದು ಎನ್ನುತ್ತಾಳೆಯೇ ಹೊರತು ಹೇಳಿಕೊಡುವುದಿಲ್ಲ, ಮಿಸ್ ಸ್ಕೂಲಿನಲ್ಲಿ ಬೈದಿದ್ದರ ಬಗ್ಗೆ ಅಮ್ಮನಿಗೆ ಕೊಂಚವೂ ಬೇಸರವಿಲ್ಲ, ಗೆಳೆಯರ ಬಗ್ಗೆ ಅಮ್ಮನಲ್ಲಿ ಪ್ರಶ್ನೆಗಳಿಲ್ಲ. ಹೀಗೆ ನೂರೆಂಟು ಸಮಸ್ಯೆಗಳು ಸುಮಿಯಂತ ಹಲವಾರು ಹದಿಹರೆಯದ ಮಕ್ಕಳಲ್ಲಿ ಇಂದು ತಲೆ ಎತ್ತಿರುವುದಕ್ಕೆ ಕಾರಣ ಅಮ್ಮ ಕೆಲಸಕ್ಕೆ ಹೋಗುತ್ತಿರುವುದು!
ಇಂತಹ ಅಸಮಾಧಾನಗಳು 1980ರ ಈಚೆಗೆ ಶುರುವಾದದ್ದು. ಹಿಂದೆ ಹತ್ತು ಮಕ್ಕಳನ್ನು ಹೆತ್ತು, ಸೀರೆಯ ಸೇರಗಿನಲ್ಲೇ ಮಗುವಿನ ಗೊಣ್ಣೆ ಒರೆಸಿ ಎಲ್ಲಾ ಮಕ್ಕಳನ್ನು ಒಂದೇ ರೀತಿ ಪ್ರೀತಿಯೊಂದ ಬೆಳೆಸಿ ಅವರ ಬಗ್ಗೆ ತನ್ನದೇ ಆದ ಕನಸು ಕಾಣುವುದಕ್ಕೂ ತಾಯಿ ಸ್ವತಂತ್ರಳಾಗಿದ್ದಳು. ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿಯುತ ಹಕ್ಕು ಆಕೆಯದಾಗಿತ್ತು. ಮಗು ಎಡವಿ ಬಿದ್ದರೆ ರಾತ್ರಿ ಕನಸಿನಲ್ಲೂ ಅದನ್ನೇ ಕನವರಿಸಿ ಮಗುವನ್ನೋಮ್ಮೆ ಮಟ್ಟಿ ಮುದ್ದಿಸಿ ಮಲಗಿ ಮತ್ತೇ ಮರುದಿನ ಮಗುವಿನ ಸೇವೆಗೆ ಆಕೆ ಸಿದ್ಧ. ದಿನದ ಇಪ್ಪತ್ನಾಲ್ಕು ಗಂಟೆಗಳು ತನ್ನ ಮಗುವಿಗಾಗಿಯೇ ಮೀಸಲಿಟ್ಟರೂ ಅವಳಿಗೆ ಆಯಾಸವೆಂಬುದೇ ಇರಲಿಲ್ಲ. ಒಟ್ಟಿನಲ್ಲಿ ತನ್ನ ಕೆರಿಯರ್ ಕಂಡು ಕೊಂಡಿದ್ದು ಮಗುವಿನ ಪಾಲನೆಯಲ್ಲೆ. ಆದರೆ ಇಂದು ಅಮ್ಮನ ಈ ಪ್ರೀತಿ ನೆಗ್ಲೆಟೆಡ್! (ಹಳೆಯದು)
ಮನೆಯಲ್ಲೇ ಇದ್ದು ಅಮ್ಮ ತೋರಿಸಿವ ಪ್ರೀತಿ, ಕಾಳಜಿಯಿಂದ ನಾವು ವಂಚಿತರಾಗಿದ್ದೇವೆ ಎನ್ನುವ ಈ ಶತಮಾನದ ಮಕ್ಕಳ ಅಳುಕಿನಲ್ಲಿ ಕಿಂಚಿತ್ ಹುರುಳಿಲ್ಲ. ಇವತ್ತಿನ ಪೀಳಿಗೆ ಸಾಕಷ್ಟು ಪ್ರೌಢರು. ಯಾವ ವಿಷಯವನ್ನು ಹೇಳಿ ಕೇಳಿ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ತಂತ್ರಜ್ಞಾನವನ್ನಂತೂ ಹುಟ್ಟುತ್ತಲ್ಲೇ ಬೆನ್ನಿಗಂಟಿಸಿಕೊಂಡು ಬಂದಿದ್ದೇವೆ. ಸರಿ ತಪ್ಪುಗಳಿಗೆ ಯಾರಿಂದಲೂ ಸಮಜಾಯಿಸಿಯಾಗಲಿ, ಉಪದೇಶಗಳನ್ನಾಗಲಿ ಕೇಳುವ ವ್ಯವಧಾನವೂ ಇಲ್ಲ. ಆಧುನಿಕ ಯುಗಕ್ಕೆ ಇಷ್ಟು ಹೊಂದಿಕೊಂಡವರಿಗೆ ಅದೇಕೋ ತಾಯಿ ಕೆಲಸಕ್ಕೆ ಹೋಗುತ್ತಿರುವುದು ಅಪತ್ಯವಾಗಿದೆ.
ತಮಗೆ ಸರಿಯಾದ ಸಮಯಕ್ಕೆ ಅಮ್ಮನ ಪ್ರೀತಿ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕುಂಟು ನೆಪಕ್ಕೆ ಆಕೆಯ ನಿಲುವನ್ನೇ ಪ್ರಶ್ನಿಸುವ ಮಟ್ಟಕ್ಕೆ ಮೌಢ್ಯತೆ ನಮ್ಮನ್ನು ಆವರಿಸಿದೆ. ತನ್ನ ಮಗು ಮುಂದೆ ಹೀಗಾಗಬೇಕು ಎಂದುಕೊಂಡು ಅಂತೆಯೇ ಮಗುವನ್ನು ಬೆಳೆಸುತ್ತಿದ್ದದ್ದು ನಿಜ. ಆದರೆ ಇಂದು ಪ್ರತಿ ಮಗುವಿನ, ತಾನು ಇಂತದ್ದೇ ಕಲಿಯಬೇಕು, ಇದೇ ವೃತ್ತಿಯನ್ನು ಆರಿಸಿಕೊಳ್ಳಬೇಕು ಎಂಬ ಕನಸನ್ನು ಸಾಕಾರಗೊಳಿಸುವುದಕ್ಕಾಗಿ ಆಕೆ ಮನೆಯಿಂದ ಆಚೆಗೆ ದುಡಿಯುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾಳೆ.
ಮಲಗಿರುವಾಗ ನಾಳೆ ನನ್ನ ಮಗು ಯಾವ ಬೇಡಿಕೆಯನ್ನು ಮುಂದಿಡುವುದೋ, ಅದನ್ನು ಈಡೇರಿಸುವಲ್ಲಿ ತಾನೆಲ್ಲಿ ಎಡವುತ್ತೇನೋ, ಅದರಿಂದ ಮಗುವೆಲ್ಲಿ ನೊಂದುಕೊಳ್ಳುವುದೋ ಎಂಬಿತ್ಯಾದಿ ಚಿಂತೆಯಲ್ಲೇ ರಾತ್ರಿ ಕಳೆದು ಬೆಳಿಗ್ಗೆ ಎದ್ದು ಮಕ್ಕಳ ಬೇಡಿಕೆಯನ್ನು ನೀಗಿಸುವ ಉದ್ಧೇಶದಿಂದ ಇಷ್ಟವಿದ್ದರೂ, ಇಲ್ಲದಿದ್ದರೂ ಕೆಲಸ ನೆಚ್ಚಿಕೊಂಡಿರುವ ಅಮ್ಮನ ಮೇಲೆ ಗೂಬೆ ಕೂರಿಸುವ ದಡ್ಡತನವನ್ನೇಕೆ ಪ್ರದರ್ಶಿಸುತ್ತಿದ್ದೇವೆ?
ಪ್ರಪಂಚವನ್ನೇ ಅರಿತುಕೊಂಡ ಹುಂಬರಿಗೆ ಅಮ್ಮನ ಒಳ ಮನಸ್ಸೇಕೆ ಅರ್ಥವಾಗುತ್ತಿಲ್ಲ. ತನ್ನ ಮಗು ಮುಂದೊಂದು ದಿನ ಯಾರ ಮುಂದು ತಲೆ ತಗ್ಗಿಸಬಾರದೆಂಬ ಆಕೆಯ ನಿಲುವು ನಮಗೇಕೆ ಸ್ವಾರ್ಥದ ಸಾಧನೆಯಂತೆ ಗೋಚರಿಸುತ್ತಿದೆ? ಶಿಕ್ಷಣಕ್ಕೆ ಐಷಾರಾಮಿ ಕಾಲೇಜು ಬೇಕು ಅದರ ಶುಲ್ಕ ಭರಿಸುವುದಕ್ಕೆ ದುಡಿಯುವುದನ್ನು ಬಿಟ್ಟು ಬೇರೆ ಮಾರ್ಗವೇನಿದೆ? ಅಮ್ಮನ ನಿಶ್ಕಲ್ಮಶ ಪ್ರೀತಿಯನ್ನು ಕಾಣದಷ್ಟು ಕುರಡರಾಗಿದ್ದೇವೆಯೇ? ಇಂತಹ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಅಸಮರ್ಥರಾಗಿರುವ ನಮಗೆ ಹೆತ್ತ ತಾಯಿಯನ್ನೇ ಸಣ್ಣ ಪುಟ್ಟ ವಿಷಯಕ್ಕೆ ದೂರುವ ಮನೋಭಾವ ಬೆಳೆದುಬಿಟ್ಟಿದೆ. ಅಮ್ಮನ ಆರೈಕೆಗೆ ಹಾರೈಕೆಗೆ ಮೊದಲಿನಂತೆ ಬದ್ಧರಾಗಿರುವುದಿರಲಿ, ಕೊನೆಪಕ್ಷ ಆಕೆಯ ಬಗ್ಗೆ ಕೃತಜ್ಷತೆ ಭಾವ ಕೂಡ ನಮ್ಮಲ್ಲಿಲ್ಲ.
ವಿದೇಶಗಳಲ್ಲಿ ಮಕ್ಕಳು ತಾರುಣ್ಯಕ್ಕೆ ಕಾಲಿಡುತ್ತಿದ್ದಂತೆ ಹೆತ್ತವರಿಂದ ದೂರವಾಗಿ ಬದುಕುತ್ತಾರೆ. ಆದರೆ ಭಾರತೀಯರಿಗೆ ಸ್ವತಂತ್ರವಾಗಿ ಬದುಕುವುದು ರುಚಿಸದ ವಿಷಯ. ಆಥವಾ ತಾನು ಸ್ವತಂತ್ರವಾಗಿ ಬದುಕಬಲ್ಲೇ ಎಂಬ ಆತ್ಮವಿಶ್ವಾಸ ನಮ್ಮಲ್ಲಿಲ್ಲ. ಅಪ್ಪ ಅಮ್ಮನ ಪ್ರೀತಿಯ ಹೆಸರಿನಲ್ಲಿ ಅವಲಂಬನೆಯ ಬದುಕು ನಡೆಸುತ್ತಿದ್ದೇವೆ.
ಇಷ್ಟಾದರೂ ಅಮ್ಮ ನನ್ನ ಗಮನಿಸುತ್ತಿಲ್ಲ ಎನ್ನುವ ಹದಿಹರೆಯದ ಮಕ್ಕಳು ಒಂದಷ್ಟು ಹೊತ್ತು ಅಮ್ಮನಾಗಿ, ಅಮ್ಮನಂತೆ ಯೋಚಿಸಿದರೆ ಅವರ ಅನಗತ್ಯ ಚರ್ಚೆಗಳಿಗೆ ಉತ್ತರ ಸಿಗಬಹುದೇನೋ!



Click it and Unblock the Notifications
