Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹೆಣ್ಣು ನನಗಿಂತ ಹೆಚ್ಚು ಓದಿದ್ದರೆ ಮದುವೆಗೆ ಒಲ್ಲೆ!
ಸುಂದರವಾದ ಹುಡುಗಿ, ತನಗಿಂತ ಉನ್ನತ ಸ್ಥಾನ, ಉತ್ತಮ ಸಂಬಳವಿರುವ ಹೆಣ್ಣನ್ನು ಮದುವೆಯಾಗಲು ಬಹುತೇಕ ಹುಡುಗರು ಭಯಪಡುತ್ತಾರೆ! ನೀವೆ ನಿಮ್ಮ ಅಕ್ಕಪಕ್ಕ ಗಮನಿಸಿ ಗಂಡು ಮದುವೆ ವಿಷಯಕ್ಕೆ ಬಂದಾಗ ತನಗಿಂತ ತುಂಬಾ ಓದಿದ ಹೆಣ್ಣನ್ನು ಮದುವೆಯಾಗ ಬಯಸುವುದು ತುಂಬಾ ವಿರಳ. ಆದ್ದರಿಂದಲೆ ಈಗ ತುಂಬಾ ಓದಿದ ಜಾಣೆಗೆ ಹುಡುಗ ಸಿಗುವುದು ಕಷ್ಟವಾಗಿ ಬಿಟ್ಟಿದೆ.
ಇತ್ತೀಚಿಕೆಗೆ ನನ್ನ ಗೆಳತಿಗೆ ಒಂದು ಮದುವೆ ಆಫರ್ ಬಂದಿತ್ತು. ಹುಡುಗ, ಅವನ ಮನೆತನ ಎಲ್ಲಾ ಇವಳ ಮನೆಯವರಿಗೆ ಇಷ್ಟವಾಯಿತು ಆದರೆ ಹುಡುಗ ಅವಳನ್ನು ಮದುವೆಯಾಗಲು ಇಷ್ಟ ಪಡಲಿಲ್ಲ! ನೋಡಲು ರೂಪವಂತೆ, ಬುದ್ದಿವಂತೆ ಹಾಗೂ ಒಳ್ಳೆಯ ಗುಣವಿರುವ ಅವಳನ್ನು ತಿರಸ್ಕರಿಸಿದ್ದು ಏಕೆ ಎಂದು ನಮಗೆ ಆಶ್ಚರ್ಯವಾಯಿತು.

ಇರಲಿ, ಅವನನ್ನೆ ಕೇಳೋಣ ಎಂದು ಫೋನು ಮಾಡಿದಾಗ ಆ ಪುಣ್ಯಾತ್ಮ 'ನಂದು ಬರೀ ಡಿಗ್ರಿ ಅವರು ಪಿ.ಎಚ್. ಡಿ ಮಾಡುತ್ತಿದ್ದಾರೆ, ನಾನು ಅವರಿಗೆ ಸೂಕ್ತವಲ್ಲ ಅನಿಸಿತು ಅದಕ್ಕೆ ಬೇಡ ಅಂದೆ, ಅವರಿಗೆ ನನಗಿಂತ ಒಳ್ಳೆಯ ಹುಡುಗ ಸಿಗುತ್ತಾರೆ' ಎಂದು ಹೇಳಿ ಪೋನಿಡಬೇಕೆ, ಅವನ ಉತ್ತರ ಕೇಳಿ ನಗಬೇಕೊ, ಅಳಬೇಕೊ ಅಂತ ಒಂದು ಕ್ಷಣ ಗೊತ್ತಾಗಲಿಲ್ಲ.
ತನಗಿಂತ ಹೆಚ್ಚು ಓದಿದ ಹೆಣ್ಣು, ತನಗಿಂತ ಹೆಚ್ಚು ವೇತನ ಪಡೆಯುವ ಹೆಂಡತಿ, ತನಗಿಂತ ಆಕೆ ಹೆಚ್ಚು ಎನ್ನುವುದೇ ಹೆಚ್ಚಿನ ಪುರುಷರಿಗೆ ಇಷ್ಟವಾಗುವುದಿಲ್ಲ. ಅದಕ್ಕೆ ಅವರ ಸಾಂಪ್ರದಾಯಿಕ, ಲಿಂಗತಾರತಮ್ಯ ಮನೋಭಾವವೂ ಕಾರಣವಿರಬಹುದು. ಗಂಡಸಿರಿಗೆ ಸುಂದರಿಯಾದ, ಬುದ್ಧಿವಂತೆ, ಸ್ವತಂತ್ರ ಮನೋಭಾವದ ಹೆಣ್ಣು ಅಂದರೆ ಭಯ. ಈ ರೀತಿ ಭಯಪಡಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.
1. ಹೆಣ್ಣು ನನ್ನ ಬದಲಾಯಿಸಿ ಬಿಡುತ್ತಾಳೆ:
ಈ ಭಯದಿಂದಲೆ ಅನೇಕರು ನಿಧಾನಕ್ಕೆ ಮದುವೆಯಾಗುತ್ತೇನೆ ಅನ್ನುತ್ತಾರೆ. 'ನನಗೆ ಇಷ್ಟ ಬಂದಂತೆ ಇರಲು ಸಾಧ್ಯವಿರುವುದಿಲ್ಲ, ಫ್ರೆಂಡ್ಸ್ ಜೊತೆ ಅಡ್ಡಾಡಲು ಸಾಧ್ಯವಿಲ್ಲ, ನನ್ನ ಸ್ವಾತಂತ್ರ್ಯ ಹೋಗುತ್ತದೆ' ಎನ್ನುವುದು ಅವರು ಕೊಡುವ ಉತ್ತರ. ಅವೆಲ್ಲಕ್ಕಿಂತ ಮುಖ್ಯವಾಗಿ ಹೆಣ್ಣು ಎಮೋಷನಲ್ ಬ್ಲ್ಯಾಕ್ ಮೇಲ್ ( ಭಾವನಾತ್ಮಕವಾಗಿ ತನ್ನತ್ತ ಸೆಳೆದು ಬಿಡುತ್ತಾಳೆ) ಎಂದು ಭಯಪಡುತ್ತಾರೆ.
2. ಕಣ್ಣೀರೆಂದರೆ ಭಯ:
ಸ್ವಲ್ಪ ಏನಾದರೂ ಅಂದರೆ ಗಂಗಾ, ಕಾವೇರಿ ಉಕ್ಕಿ ಹರಿಯಲಾರಂಭಿಸುತ್ತದೆ. ಈ ಕಣ್ಣೀರಿಗೆ ಗಂಡಸರು ಭಯ ಪಡುತ್ತಾರೆ. ಉಕ್ಕಿನಂತೆ ಕಠಿಣವಾಗಿರುವ ಗಂಡಸರ ಮನಸ್ಸು ಹೆಣ್ಣಿನ ಕಣ್ಣೀರಿಗೆ ಕರುತ್ತದೆ!
3. ಜವಬ್ದಾರಿ ಅಂದರೆ ಭಯ:
ಪ್ರೀತಿ, ಮದುವೆಯೆಂದರೆ ಹುಡುಗರು ಬೆಚ್ಚಿ ಬೀಳಲು ಕಾರಣ ಜವಬ್ದಾರಿ. ಮೊನ್ನೆ ನನ್ನ ಫ್ರೆಂಡ್ ಫೋನ್ ಮಾಡಿ ಮಾತನಾಡುತ್ತಿದ್ದ, ಆಗ ಯಾರಾದರೂ ಗರ್ಲ್ ಫ್ರೆಂಡ್ ಸಿಕ್ಕಿದಳಾ ಎಂದು ಚುಡಾಯಿಸಿದೆ, ಅದಕ್ಕೆ ಅವನು 'ಗರ್ಲ್ ಫ್ರೆಂಡ್ ಸಹವಾಸ ಬೇಡ ಬೆಳಗ್ಗೆ ಎದ್ದ ತಕ್ಷಣ ಪೋನು ಮಾಡಬೇಕು, ತಿಂಡಿ ಆಯ್ತಾ, ಊಟ ಆಯ್ತಾ ಹೀಗೆ ಫೋನು ಮಾಡ್ತಾನೆಇರಬೇಕು, ನಾನು ನೋಡು ಫ್ರೀ ಬರ್ಡ್' ಅಂದ.
4. ಸ್ವತಂತ್ರ ಮನೋಭಾವ:
ಸ್ವತಂತ್ರ ಮನೋಭವದ ಹೆಣ್ಣಿಗಿಂತ ಅವನು ಹೇಳಿದ್ದನ್ನು ಕೇಳಿಕೊಂಡು ಇರುವ ಹೆಣ್ಣು ಗಂಡಸಿಗೆ ತುಂಬಾ ಇಷ್ಟವಾಗುತ್ತಾಳೆ. ಸ್ವತಂತ್ರ ಮನೋಭಾವದ ಹೆಣ್ಣನ್ನು ಕಂಡಾಗ ಭಯಪಡುತ್ತಾನೆ. ತನಗಿಂತ ಹೆಚ್ಚು ಓದಿದ ಹೆಣ್ಣು, ತನಗಿಂತ ಹೆಚ್ಚು ವೇತನ ಪಡೆಯುವ ಹೆಂಡತಿ, ತನಗಿಂತ ಆಕೆ ಹೆಚ್ಚು ಎನ್ನುವುದೇ ಹೆಚ್ಚಿನ ಪುರುಷರಿಗೆ ಇಷ್ಟವಾಗುವುದಿಲ್ಲ. ಅದಕ್ಕೆ ಅವರ ಸಾಂಪ್ರದಾಯಿಕ, ಲಿಂಗತಾರತಮ್ಯ ಮನೋಭಾವವೂ ಕಾರಣವಿರಬಹುದು.



Click it and Unblock the Notifications
