Latest Updates
-
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್!
ಹೆಣ್ಣೆಂದರೆ ಪುರುಷರಗೇಕೆ ಭಯ?

1. ಹೆಣ್ಣು ನನ್ನ ಬದಲಾಯಿಸಿ ಬಿಡುತ್ತಾಳೆ: ಈ ಭಯದಿಂದಲೆ ಅನೇಕರು ನಿಧಾನಕ್ಕೆ ಮದುವೆಯಾಗುತ್ತೇನೆ ಅನ್ನುತ್ತಾರೆ. 'ನನಗೆ ಇಷ್ಟ ಬಂದಂತೆ ಇರಲು ಸಾಧ್ಯವಿರುವುದಿಲ್ಲ, ಫ್ರೆಂಡ್ಸ್ ಜೊತೆ ಅಡ್ಡಾಡಲು ಸಾಧ್ಯವಿಲ್ಲ, ನನ್ನ ಸ್ವಾತಂತ್ರ್ಯ ಹೋಗುತ್ತದೆ' ಎನ್ನುವುದು ಅವರು ಕೊಡುವ ಉತ್ತರ. ಅವೆಲ್ಲಕ್ಕಿಂತ ಮುಖ್ಯವಾಗಿ ಹೆಣ್ಣು ಎಮೋಷನಲ್ ಬ್ಲ್ಯಾಕ್ ಮೇಲ್ ( ಭಾವನಾತ್ಮಕವಾಗಿ ತನ್ನತ್ತ ಸೆಳೆದು ಬಿಡುತ್ತಾಳೆ) ಎಂದು ಭಯಪಡುತ್ತಾರೆ.
2. ಕಣ್ಣೀರೆಂದರೆ ಭಯ: ಸ್ವಲ್ಪ ಏನಾದರೂ ಅಂದರೆ ಗಂಗಾ, ಕಾವೇರಿ ಉಕ್ಕಿ ಹರಿಯಲಾರಂಭಿಸುತ್ತದೆ. ಈ ಕಣ್ಣೀರಿಗೆ ಗಂಡಸರು ಭಯ ಪಡುತ್ತಾರೆ. ಉಕ್ಕಿನಂತೆ ಕಠಿಣವಾಗಿರುವ ಗಂಡಸರ ಮನಸ್ಸು ಹೆಣ್ಣಿನ ಕಣ್ಣೀರಿಗೆ ಕರುತ್ತದೆ!
3. ಜವಬ್ದಾರಿ ಅಂದರೆ ಭಯ: ಪ್ರೀತಿ, ಮದುವೆಯೆಂದರೆ ಹುಡುಗರು ಬೆಚ್ಚಿ ಬೀಳಲು ಕಾರಣ ಜವಬ್ದಾರಿ. ಮೊನ್ನೆ ನನ್ನ ಫ್ರೆಂಡ್ ಫೋನ್ ಮಾಡಿ ಮಾತನಾಡುತ್ತಿದ್ದ, ಆಗ ಯಾರಾದರೂ ಗರ್ಲ್ ಫ್ರೆಂಡ್ ಸಿಕ್ಕಿದಳಾ ಎಂದು ಚುಡಾಯಿಸಿದೆ, ಅದಕ್ಕೆ ಅವನು 'ಗರ್ಲ್ ಫ್ರೆಂಡ್ ಸಹವಾಸ ಬೇಡ ಬೆಳಗ್ಗೆ ಎದ್ದ ತಕ್ಷಣ ಪೋನು ಮಾಡಬೇಕು, ತಿಂಡಿ ಆಯ್ತಾ, ಊಟ ಆಯ್ತಾ ಹೀಗೆ ಫೋನು ಮಾಡ್ತಾನೆಇರಬೇಕು, ನಾನು ನೋಡು ಫ್ರೀ ಬರ್ಡ್' ಅಂದ.
4. ಸ್ವತಂತ್ರ ಮನೋಭಾವ: ಸ್ವತಂತ್ರ ಮನೋಭವದ ಹೆಣ್ಣಿಗಿಂತ ಅವನು ಹೇಳಿದ್ದನ್ನು ಕೇಳಿಕೊಂಡು ಇರುವ ಹೆಣ್ಣು ಗಂಡಸಿಗೆ ತುಂಬಾ ಇಷ್ಟವಾಗುತ್ತಾಳೆ. ಸ್ವತಂತ್ರ ಮನೋಭಾವದ ಹೆಣ್ಣನ್ನು ಕಂಡಾಗ ಭಯಪಡುತ್ತಾನೆ.
ತನಗಿಂತ ಹೆಚ್ಚು ಓದಿದ ಹೆಣ್ಣು, ತನಗಿಂತ ಹೆಚ್ಚು ವೇತನ ಪಡೆಯುವ ಹೆಂಡತಿ, ತನಗಿಂತ ಆಕೆ ಹೆಚ್ಚು ಎನ್ನುವುದೇ ಹೆಚ್ಚಿನ ಪುರುಷರಿಗೆ ಇಷ್ಟವಾಗುವುದಿಲ್ಲ. ಅದಕ್ಕೆ ಅವರ ಸಾಂಪ್ರದಾಯಿಕ, ಲಿಂಗತಾರತಮ್ಯ ಮನೋಭಾವವೂ ಕಾರಣವಿರಬಹುದು.



Click it and Unblock the Notifications
