Latest Updates
-
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು!
ಹಳೆ ಪ್ರೀತಿ ಬಗ್ಗೆ ಹೊಸ ಸಂಗಾತಿಯ ಬಳಿ ಅಪ್ಪಿ-ತಪ್ಪಿಯೂ ಹೇಳೋದಕ್ಕೆ ಹೋಗಬೇಡಿ!
ನಾವು ಪ್ರೀತಿ ಮಾಡಿದವರು ನಮ್ಮ ಜೊತೆಗೆ ಶಾಶ್ವತವಾಗಿ ಇರುತ್ತಾರೆ ಅಂತ ಹೇಳೋದಿಕ್ಕಾಗೋದಿಲ್ಲ. ಕೆಲವೊಂದು ಸಲ ಅವರೇ ನಮ್ಮಿಂದ ದೂರ ಆಗ್ಬಹುದು. ಇಲ್ಲಂದ್ರೆ ನಾವೇ ಅವರ ಜೊತೆಗೆ ಪ್ರೀತಿಯನ್ನು ಮುರಿದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ನಮಗೆ ಮತ್ತೆ ಬೇರೆಯವರ ಮೇಲೆ ಪ್ರೀತಿ ಹುಟ್ಟಬಾರದೆಂದೇನಿಲ್ಲ. ಖಂಡಿತ ಯಾರಾದರೂ ಒಬ್ಬರ ಮೇಲೆ ಪ್ರೀತಿ ಹುಟ್ಟುತ್ತದೆ.
ಮೊದ ಮೊದಲು ನಾವು ಅವರ ಜೊತೆಗೆ ಚೆನ್ನಾಗಿ ಇರುತ್ತೇವೆ. ಆದರೆ ದಿನ ಕಳೆದಂತೆ ಆ ಸಂಬಂಧದಲ್ಲಿ ಆ ಸಂಬಂಧದಲ್ಲಿ ಸಮಸ್ಯೆಗಳು ಹುಟ್ಟಿಕೊಳ್ಳೋದಕ್ಕೆ ಶುರು ಆಗುತ್ತದೆ. ಅದಕ್ಕೆ ಕಾರಣ ನಮ್ಮ ಹಳೆಯ ಪ್ರೀತಿ ಆಗಿರಬಹುದು. ಅಷ್ಟಕ್ಕು ನಮ್ಮ ಹಳೆಯ ಸಂಬಂಧ ಹೊಸ ಸಂಬಂಧಕ್ಕೆ ಸಮಸ್ಯೆಯುಂಟು ಮಾಡುತ್ತಿದೆ ಎಂದು ತೋರಿಸುವ ಸೂಚನೆಗಳು ಯಾವುದು ಅನ್ನೋದನ್ನು ತಿಳಿಯೋಣ.

1. ನಿಮಗೆ ಗೌರವ ನೀಡೋದಿಲ್ಲ
ನೀವು ನಿಮ್ಮ ಹಳೆಯ ಪ್ರೀತಿಯ ಬಗ್ಗೆ ನಿಮ್ಮ ಸಂಗಾತಿಯ ಬಳಿ ಎಲ್ಲವನ್ನೂ ಹೇಳಿದ್ದೀರಿ ಎಂದುಕೊಳ್ಳಿ. ಮೊದ ಮೊದಲು ಈ ಬಗ್ಗೆ ಅವರು ಹೆಚ್ಚು ತಕರಾರು ತೆಗೆಯೋದಿಲ್ಲ. ಆದರೆ ದಿನ ಕಳೆದಂತೆ ಅವರಿಗೆ ಇದೇ ಬಹುದೊಡ್ಡ ಸಮಸ್ಯೆಯಾಗಿ ಬಿಡಬಹುದು. ಇದೇ ಕಾರಣಕ್ಕೆ ಅವರು ನಿಮ್ಮ ಹತ್ತಿರ ಪದೇ ಪದೇ ಜಗಳ ಮಾಡಬಹುದು. ನಿಮಗೆ ಗೌರವ ಕೊಡದೇ ಮಾತನಾಡುತ್ತಾರೆ. ಯಾವುದಾದರೂ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳೋದಿದ್ದರೆ ಅವರು ನಿಮ್ಮನ್ನು ಗಣನೆಗೆ ತೆಗೆದುಕೊಳ್ಳೋದಿಲ್ಲ. ಅವರಾಗಿಯೇ ನಿರ್ಧರಿಸಿ ಬಿಡುತ್ತಾರೆ.
2. ನಿಮ್ಮನ್ನು ಹೆದರಿಸುತ್ತಾರೆ
ಗಂಡ ಅಥವಾ ಬೇರ್ಯಾರೇ ಆಗಲಿ ನಮ್ಮ ಎಲ್ಲಾ ಗುಟ್ಟುಗಳನ್ನು ಅವರೊಂದಿಗೆ ಹಂಚಿಕೊಳ್ಳೋದಿಕ್ಕೆ ಹೋಗಲೇಬಾರದು. ಯಾಕಂದ್ರೆ ಅವರು ಇದೇ ವಿಚಾರವನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡೋದಕ್ಕೆ ಶುರು ಮಾಡುತ್ತಾರೆ. ಉದಾಹರಣೆಗೆ ನೀನು ನನ್ನನ್ನು ಪ್ರೀತಿ ಮಾಡೋದೇ ಆದರೆ ನಾನು ಹೇಳಿದ್ದನ್ನೆಲ್ಲಾ ಕೇಳಬೇಕು ಎಂದು ಒತ್ತಡ ಹಾಕುತ್ತಾರೆ.
ಇದು ಎನನ್ನೂ ಸೂಚಿಸುತ್ತೆ ಎಂದರೆ ಅವರು ನಿಮ್ಮನ್ನು
ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದಾರೆ ಎಂದು. ಯಾವುದಾದರೂ ಒಂದು ವಿಚಾರದಲ್ಲಿ ಅವರೇ ತಪ್ಪು ಮಾಡಿದ್ದರೂ ಕೂಡ ಅವರು ನಿಮಗೆ ಮಾತನಾಡೋದಕ್ಕೆ ಅವಕಾಶ ನೀಡೋದಿಲ್ಲ. ಹಳೆಯ ವಿಚಾರವನ್ನು ಕೆದಕಿ ನಿಮ್ಮ ಬಾಯಿ ಮುಚ್ಚಿಸಲು ನೋಡುತ್ತಾರೆ.
3. ಅವರು ರಾಜಿ ಮಾಡಿಕೊಳ್ಳೋದಕ್ಕೆ ಸಿದ್ಧರಿರೋದಿಲ್ಲ
ದಾಂಪತ್ಯ ಎಂದ ಮೇಲೆ ಕೆಲವೊಂದು ಸಲ ಮಾತುಗಳು ಬರೋದು ಸಾಮಾನ್ಯ. ಎಲ್ಲಾ ಸಲ ದಂಪತಿಗಳ ನಿರ್ಧಾರ ಒಂದೇ ರೀತಿ ಇರೋದಿಲ್ಲ. ಯಾರ ಮಾತು ಸರಿ ಇರುತ್ತದೆಯೋ ಅದನ್ನು ಒಪ್ಪಿ ನಡೆಯಬೇಕು. ಒಂದು ವೇಳೆ ನಿಮ್ಮ ಸಂಗಾತಿಗೆ ನಿಮ್ಮ ಹಳೆಯ ಸಂಬಂಧದ ಬಗ್ಗೆ ಅಸಮಾಧಾನವಿದ್ದರೆ ಅವರು ನಿಮ್ಮ ಯಾವುದೇ ನಿರ್ಧಾರಗಳನ್ನು ಕೇಳೋದಿಲ್ಲ. ಅವರು ತಪ್ಪು ಮಾಡಿದ್ದರೂ ಕೂಡ ರಾಜಿ ಮಾಡಿಕೊಳ್ಳೋದಕ್ಕೆ ಸಿದ್ಧರಿರೋದಿಲ್ಲ. ನೀವೇನಾದರೂ ಹೇಳೋದಕ್ಕೆ ಬಂದರೆ ನಿನಗೇನು ಗೊತ್ತು ಸುಮ್ಮನಿರು ಎಂದು ಗದರಿಸುತ್ತಾರೆ.
4. ನಿಮ್ಮ ಜೊತೆಗೆ ಯಾವುದೇ ಭಾವನೆಗಳನ್ನು ಹಂಚಿಕೊಳ್ಳೋದಿಲ್ಲ
ನಿಮ್ಮ ಹಳೆಯ ಸಂಬಂಧದ ಬಗ್ಗೆ ಸಂಗಾತಿಗೆ ತಿಳಿದಿದ್ದಾಗ ನಿಮ್ಮ ಜೊತೆಗೆ ಸುಖವಾಗಿಯೇ ಸಂಸಾರ ನಡೆಸುತ್ತಾರೆ. ಆದರೆ ಯಾವಾಗ ಅವರಿಗೆ ನಿಮ್ಮ ಮೇಲೆ ಅಸಮಾಧಾನ ಹೆಚ್ಚಾಗಿರುತ್ತೋ ಆಗ ಅವರು ನಿಮ್ಮೊಂದಿಗೆ ಅವರ ಯಾವುದೇ ಭಾವನೆಗಳನ್ನು ಹಂಚಿಕೊಳ್ಳೋದಿಲ್ಲ. ಅವರ ವೃತ್ತಿಪರ ಸಮಸ್ಯೆ, ನೋವು, ದುಃಖ ಯಾವುದರ ಬಗ್ಗೆಯೂ ನಿಮ್ಮ ಬಳಿ ಹೇಳೋದಿಲ್ಲ. ಒಂದು ವೇಳೆ ಅವರು ಬೇಜಾರಾಗಿದ್ದಾಗ ನೀವು ಕೇಳೋದಕ್ಕೆ ಹೋದರೆ ನಿಮ್ಮನ್ನು ಬೈದು ಕಳುಹಿಸುತ್ತಾರೆ.
5. ಸ್ನೇಹಿತರು ಹಾಗೂ ಆಪ್ತರಿಗೆ ನಿಮ್ಮನ್ನು ಪರಿಚಯಿಸೋದಿಲ್ಲ
ಕೆಲವೊಂದು ಸಲ ಜನ ನಮಗೆ ಬೇರೆ ಸಂಬಂಧ ಇದ್ದು ಬ್ರೇಕ್ ಅಪ್ ಆಗಿದ್ದರೂ ಕೂಡ ನಮ್ಮನ್ನು ಪ್ರೀತಿಸುತ್ತಾರೆ. ಹಾಗಂತ ಪ್ರತಿಯೊಬ್ಬರು ನಮ್ಮ ಮೇಲೆ ತೋರಿಸುವ ಪ್ರೀತಿ ನಿಜ ಎಂದು ನಂಬಬೇಡಿ. ಕೆಲವರು ಟೈಂ ಪಾಸ್ ಗಾಗಿ ಪ್ರೀತಿಸುವವರೂ ಇದ್ದಾರೆ. ಯಾರು ಟೈಂ ಪಾಸ್ ಗಾಗಿ ಪ್ರೀತಿಸುತ್ತಾರೆ ನೋಡಿ ಅವರು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ನಿಮ್ಮನ್ನು ಪರಿಚಯಿಸೋದಿಲ್ಲ. ಯಾಕಂದ್ರೆ ಅವರು ಈ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರ್ಥ.
6. ನಿಮ್ಮಿಂದ ಎಲ್ಲಾ ವಿಚಾರಗಳನ್ನು ರಹಸ್ಯವಾಗಿ ಇಡುತ್ತಾರೆ
ಪ್ರೀತಿಯೇ ಆಗಿರಲಿ ಅಥವಾ ಮದುವೆಯೇ ಆಗಿರಲಿ ಗಂಡು-ಹೆಣ್ಣಿನ ಮಧ್ಯೆ ಯಾವುದೇ ರೀತಿ ರಹಸ್ಯಗಳು ಅನ್ನೋದು ಇರೋದಿಲ್ಲ. ಇಬ್ಬರೂ ಕೂಡ ಮುಕ್ತವಾಗಿ ಎಲ್ಲಾ ವಿಚಾರವನ್ನೂ ಹಂಚಿಕೊಳ್ಳುತ್ತಾರೆ. ಆದರೆ ನಿಮ್ಮ ಮೇಲೆ ಯಾರಿಗೆ ಅಸಮಾಧಾನ ಇರುತ್ತದೆಯೋ? ನಿಮ್ಮನ್ನು ಯಾರು ಗಂಭಿರವಾಗಿ ಪ್ರೀತಿಸಿರೋದಿಲ್ವಾ ಅವರು ಎಲ್ಲಾ ವಿಚಾರಗಳನ್ನು ನಿಮ್ಮಿಂದ ಮುಚ್ಚಿಡಲು ಯತ್ನಿಸುತ್ತಾರೆ.
7. ನಿಮ್ಮ ಹಳೆಯ ಪ್ರೀತಿ ಬಗ್ಗೆ ಚುಚ್ಚಿ ಮಾತನಾಡುತ್ತಾರೆ
ಎಷ್ಟೇ ನಂಬಿಕಸ್ಥ ವ್ಯಕ್ತಿಯನ್ನು ನೀವು ಪ್ರೀತಿ ಮಾಡಿದರೂ ಕೂಡ ನೀವು ನಿಮ್ಮ ಹಳೆಯ ಪ್ರೀತಿಯ ಬಗ್ಗೆ ಅವರ ಬಳಿ ಖಂಡಿತ ಹೇಳಿಕೊಳ್ಳಬೇಡಿ. ಯಾಕಂದ್ರೆ ಒಂದಲ್ಲ ಒಂದು ದಿನ ಇದೇ ವಿಚಾರಕ್ಕೆ ನಿಮ್ಮಿಬ್ಬರಿಗೆ ಜಗಳ ಆಗಬಹುದು. ಮತ್ತು ಜಗಳ ಆದಾಗಲೆಲ್ಲಾ ನಿಮ್ಮ ಹಳೇ ಪ್ರೀತಿಯ ಬಗ್ಗೆ ಹೇಳುತ್ತಾ, ಚುಚ್ಚು ಮಾತುಗಳನ್ನು ಆಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಮನಸ್ಸಿಗೆ ಮತ್ತಷ್ಟು ನೋವಾಗುತ್ತದೆ.
ಹಳೆಯ ಪ್ರೀತಿ ಯಾವತ್ತಿದ್ದರೂ ನಿಮ್ಮ ಹೊಸ ಪ್ರೀತಿಗೆ ದೊಡ್ಡ ಸಮಸ್ಯೆ. ಹೀಗಾಗಿ ಯಾವುದೇ ಕಾರಣಕ್ಕೂ ಹಳೆ ಪ್ರೀತಿಯ ಬಗ್ಗೆ ಹೊಸ ಸಂಗಾತಿ ಬಳಿ ಹೇಳದಿರೋದೇ ಒಳ್ಳೆಯದು.



Click it and Unblock the Notifications
