Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ದಿವಿಹಲಸಿನ ಕಾಯಿ ಸಾಂಬಾರ್ ರೆಸಿಪಿ
ಕೆಲವರಿಗೆ ಸಾಂಬಾರ್ ಇದ್ದರೆ ಮಾತ್ರ ಊಟ ರುಚಿಸುತ್ತದೆ. ಅನ್ನದ ಜೊತೆ ಸಾಂಬಾರ್ ನಷ್ಟು ಬೆಸ್ಟ್ ಕಾಂಬಿನೇಷನ್ ಇನ್ನೊಂದಿಲ್ಲ. ಕೆಲವು ತರಕಾರಿಗಳು ವರ್ಷಪೂರ್ತಿ ಲಭ್ಯವಿರುತ್ತದೆ. ಆದರೆ ಇನ್ನು ಕೆಲವು ಸೀಸನಲ್ ತರಕಾರಿಗಳು. ಅಂತಹ ತರಕಾರಿಗಳಲ್ಲಿ ಒಂದು ದಿವಿಹಲಸು ಅಥವಾ ಜೀಗುಜ್ಜೆ.

ಈ ದಿವಿಹಲಸನ್ನು ಬಳಸಿ ಅನೇಕ ಅಡುಗೆಗಳನ್ನು ತಯಾರಿಸಬಹುದು. ನಾವಿಲ್ಲಿ ದಿವಿಹಲಸನ್ನು ಬಳಸಿ ಸಾಂಬಾರ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
Recipe By: Sushma
Recipe Type: Veg
Serves: 5
-
ಬೇಕಾಗುವ ಸಾಮಗ್ರಿಗಳು
ದಿವಿಹಲಸು - 1 ಕಾಯಿ
ಮೆಂತ್ಯೆ- ಕಾಲು ಸ್ಪೂನ್
ಜೀರಿಗೆ - ಅರ್ಧ ಸ್ಪೂನ್
ಕೊತ್ತುಂಬರಿ ಬೀಜಗಳು - ಎರಡು ಸ್ಪೂನ್
ಕೆಂಪು ಬ್ಯಾಡಗಿ ಮೆಣಸು - ಆರರಿಂದ ಏಳು
ಕರಿಬೇವಿನ ಸೊಪ್ಪುಗಳು- 10 ರಿಂದ 12 ಎಲೆಗಳು
ತೆಂಗಿನ ಕಾಯಿ - ಒಂದು ಕಾಯಿ
ಅಡುಗೆ ಎಣ್ಣೆ - ಎರಡರಿಂದ ಮೂರು ಸ್ಪೂನ್
ತೊಗರಿಬೇಳೆ - ಒಂದು ಕಪ್
ಅರಿಶಿನ - ಚಿಟಿಕೆ
ಉಪ್ಪು- ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು - ಒಂದು ಅಡುಕೆ ಗಾತ್ರ
ಬೆಲ್ಲ - ಒಂದು ಸ್ಪೂನ್
-
ಮಾಡುವ ವಿಧಾನ -
. ದಿವಿಹಲಸು ಅಥವಾ ಜೀಗುಜ್ಜೆಯನ್ನು ತ್ರಿಕೋನಾಕೃತಿಯಲ್ಲಿ ಕತ್ತರಿಸಿಕೊಂಡು ನೀರಿಗೆ ಹಾಕಿ. ಕತ್ತರಿಸುವಾಗ ನೀರಿಗೆ ಹಾಕಿಕೊಳ್ಳದೇ ಇದ್ದರೆ ಹೋಳುಗಳು ಕಪ್ಪಗಾಗುವ ಸಾಧ್ಯತೆ ಇರುತ್ತದೆ.
. ತೊಗರಿಬೇಳೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
. ದಿವಿಹಲಸಿನ ಹೋಳುಗಳನ್ನು ಉಪ್ಪು, ಬೆಲ್ಲ, ಚಿಟಿಕೆ ಅರಿಶಿನ ಹಾಕಿ ಬೇಯಿಸಿಕೊಳ್ಳಿ( ಕುಕ್ಕರ್ ನಲ್ಲಿ ಬೇಯಿಸಿದರೆ ಕರಗಿಹೋಗುವ ಸಾಧ್ಯತೆ ಹೆಚ್ಚು. ಗಟ್ಟಿಯಾದ ಹೋಳುಗಳೇ ಆಗಿದ್ದರೂ ಇದು ಬಹಳ ಬೇಗನೆ ಬೇಯುತ್ತದೆ. ಹಾಗಾಗಿ ಕುಕ್ಕರ್ ನಲ್ಲಿ ಬೇಯಿಸದೇ ಇರುವುದೇ ಒಳಿತು.)
. ತೊಗರಿ ಬೇಳೆಯೊಂದಿಗೆ ಬೇಯಿಸಿದ ಹೋಳುಗಳನ್ನು ಸೇರಿಸಿ.
. ಎರಡು ಸ್ಪೂನ್ ಅಡುಗೆ ಎಣ್ಣೆಗೆ ಮೆಂತ್ಯೆ,ಜೀರಿಗೆ, ಕೊತ್ತುಂಬರಿ ಬೀಜಗಳನ್ನು ಸೇರಿಸಿ ಹುರಿದುಕೊಳ್ಳಿ, ಕೆಂಬಣ್ಣಕ್ಕೆ ಬಂದಾಗ ಬ್ಯಾಡಗಿ ಮೆಣಸು ಸೇರಿಸಿ ಹುರಿಯಿರಿ.
. ಹುರಿದ ಮಿಶ್ರಣಕ್ಕೆ ತೆಂಗಿನತುರಿ,ಹುಣಸೆ ಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ.
. ರುಬ್ಬಿದ ಮಿಶ್ರಣವನ್ನು ದಿವಿಹಲಸಿನ ಹೋಳುಗಳೊಂದಿಗೆ ಸೇರಿಸಿ ಐದು ನಿಮಿಷ ಹಸಿವಾಸನೆ ಹೋಗುವವರೆಗೆ ಕುದಿಸಿ.
. ನಂತರ ಬೇವಿನಸೊಪ್ಪುಗಳನ್ನು ಹಾಕಿ ಒಗ್ಗರಣೆ ನೀಡಿ ಅಥವಾ ಹಾಗೆಯೇ ಕುದಿಯುವಾಗ ಹಾಕಿದರೂ ಕೂಡ ಪರವಾಗಿಲ್ಲ.
- ನಿಮ್ಮ ದಿನನಿತ್ಯದ ಅಗತ್ಯತೆಯ 23% ಪೊಟಾಷಿಯಂ ಇದರಿಂದ ಲಭ್ಯವಾಗುತ್ತದೆ .ಮೆಗ್ನೇಷಿಯಂ,ಮ್ಯಾಂಗನೀಸ್,ಕಾಪರ್, ಸತು,ಕಬ್ಬಿಣ,ಕ್ಯಾಲ್ಸಿಯಂ,ಪಾಸ್ಪರಸ್, ಸೆಲೇನಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇದರಲ್ಲಿ ಲಭ್ಯವಿದೆ. .ಡಯಾಬಿಟೀಸ್ ಸಮಸ್ಯೆ ಇರುವವರು ಸೇವಿಸಬಹುದಾದ ಅತ್ಯುತ್ತಮ ಆಹಾರ. ಒಮೆಗಾ-3 ಫ್ಯಾಟಿ ಆಸಿಡ್ ಸೇರಿದಂತೆ ಫೈಬರ್ ಅಂಶಗಳು ಇದರಲ್ಲಿದೆ. .ವಿಟಮಿನ್ ಸಿ ಅಂಶಗ ಕೂಡ ಇದರಲ್ಲಿದ್ದು ಚರ್ಮಕ್ಕೆ ಆರೋಗ್ಯವನ್ನು ಒದಗಿಸುತ್ತದೆ. . ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆರವಾಗುವ ಇದು ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸುತ್ತದೆ.
- 100 Gram -



Click it and Unblock the Notifications