For Quick Alerts
ALLOW NOTIFICATIONS  
For Daily Alerts

ಚಾಕೋಲೆಟ್ ಡೇ ಸ್ಪೆಷಲ್: ಚಾಕೋಲವಾ ರೆಸಿಪಿ

Posted By:
|

ವ್ಯಾಲೆಂಟೈನ್ಸ್ ವೀಕ್ ಸಂಭ್ರಮದಲ್ಲಿ ಪ್ರೇಮಿಗಳು ಮುಳುಗಿದ್ದಾರೆ. ಪ್ರೇಮಿಗೆ ಏನಾದರೂ ಸ್ಪೆಷಲ್ ಸಿಹಿ ಅಡುಗೆ ನಿಮ್ಮ ಕೈಯಾರೆ ಮಾಡಿ ತಿನಿಸಿದರೆ ಆ ಕ್ಷಣ ಇನ್ನೆಷ್ಟು ಮಧುರವಾಗುವುದು ಅಲ್ವಾ? ಹೇಳಿ ಕೇಳಿ ಇವತ್ತು ಚಾಕೋಲೆಟ್ ಡೇ. ಈ ದಿನ ಸ್ಪೆಷಲ್ ಮಾಡದಿದ್ರೆ ಹೇಗೆ ಅಲ್ವಾ? ತುಂಬಾ ತಲೆ ಕೆಡಿಸಿಕೊಳ್ಳಬೇಡಿ, ಇಲ್ಲಿ ನಾವು ಮಾಡಲು ಸುಲಭವಾದ ಕೇಕ್ ರೆಸಿಪಿ ಇಲ್ಲಿದೆ.

ಈ ವ್ಯಾಲೆಂಟೈನ್ಸ್ ಸಂಭ್ರಮಕ್ಕೆ ಮತ್ತಷ್ಟು ಸಿಹಿ ಸೇರಿಸಲು ಇಲ್ಲಿ ನಾವು ಚಾಕೋಲವಾ ರೆಸಿಪಿ ನೀಡಿದ್ದೇವೆ.

Choco Lava Recipe
Valentine's Day Special: Choco Lava Recipe, ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಚಾಕೋಲವಾ ರೆಸಿಪಿ
Valentine's Day Special: Choco Lava Recipe, ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಚಾಕೋಲವಾ ರೆಸಿಪಿ
Prep Time
30 Mins
Cook Time
20M
Total Time
50 Mins

Recipe By: Reena T K

Recipe Type: Sweet

Serves: 2

Ingredients
  • ಬೇಕಾಗುವ ಸಾಮಗ್ರಿ

    ಡಾರ್ಕ್ ಚಾಕೋಲೇಟ್ 150ಗ್ರಾಂ

    ಉಪ್ಪು ರಹಿತ ಬೆಣ್ಣೆ -100ಗ್ರಾಂ

    ಮೈದಾ 1/2 ಕಪ್

    ಮೊಟ್ಟೆ 3

    ವೆನಿಲ್ಲಾ ರಸ 1 ಚಮಚ

    ಕ್ರೀಮ್ 1 ಕಪ್

    ಓರಿಯೋ ಬಿಸ್ಕೆಟ್ 4

    ಸಕ್ಕರೆ 1 ಕಪ್

    ಐಸಿಂಗ್ ಶುಗರ್ 1 ಚಮಚ

    ಅಡುಗೆ ಸೋಡಾ 1/4 ಚಮಚ

Red Rice Kanda Poha
How to Prepare
  • ಮಾಡುವ ವಿಧಾನ:

    * ಒಂದು ಪಾತ್ರೆಯಲ್ಲಿ ಡಾರ್ಕ್ ಚಾಕೋಲೇಟ್, ಬೆಣ್ಣೆ, ಸಕ್ಕರೆ, ಚಕ್ಕೆ ಹಾಕಿ.

    * ನಿಧಾನಕ್ಕೆ ಇವುಗಳನ್ನು ಮಿಶ್ರ ಮಾಡಿ. ಅದು ಸಂಪೂರ್ಣವಾಗಿ ಕರಗಲಿ.

    * ಒಂದು ಬೌಲ್‌ ತೆಗೆದು ಅದಕ್ಕೆ ಮೈದಾ, ಮೊಟ್ಟೆ, ವೆನಿಲ್ಲಾ ರಸ ಹಾಕಿ ಚೆನ್ನಾಗಿ ಕಲೆಸಿ.

    * ಈಗ ಓರಿಯೋ ಬಿಸ್ಕೆಟ್, ಅಡುಗೆ ಸೋಡಾ, ಐಸಿಂಗ್ ಸುಗರ್, ಕ್ರೀಮ್‌ ಹಾಕಿ ಮಿಕ್ಸಿಯಲ್ಲಿ ರುಬ್ಬಿ.

    * ಈ ಮಿಶ್ರಣವನ್ನು ಕರಗಿದ ಚಾಕೋಲೇಟ್ ಮಿಶ್ರಣದ ಜೊತೆ ಹಾಕಿ.

    * ಈಗ ಮೈದಾ ಮಿಶ್ರಣವನ್ನು ಹಾಕಿ, ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ.

    * ಈಗ ಕೇಕ್‌ ಮೌಲ್ಡ್ ತೆಗೆದು ಅದಕ್ಕೆ ನಿಧಾನಕ್ಕೆ ಮಿಶ್ರಣವನ್ನು ಸುರಿಯಿರಿ.

    * ಈಗ 180 ಡಿಗ್ರಿ ಉಷ್ಣತೆಗೆ 15-20 ನಿಮಿಷ ಬೇಯಿಸಿದರೆ ಚಾಕೋಲವಾ ಕೇಕ್ ರೆಡಿ.

Instructions
  • ಮೈಕ್ರೋವೇವ್ ರೆಸಿಪಿ ಇದಾಗಿದ್ದು, ಈ ರೆಸಿಪಿ ಮಾಡಲು ಹೆಚ್ಚಿನ ಸಮಯ ಬೇಕಾಗಿಲ್ಲ. ಆದ್ದರಿಂದ ಈ ಟೇಸ್ಟಿ ಕೇಕ್ ಮಾಡಿ ನಿಮ್ಮ ಪ್ರೇಮಿಗೆ ವ್ಯಾಲೆಂಟೈನ್ಸ್ ಡೇಗೆ ಸರ್‌ಫ್ರೈಸ್ ನೀಡಬಹುದು.
Nutritional Information
  • ಸರ್ವ್ - 2
[ 3.5 of 5 - 39 Users]
Story first published: Saturday, February 8, 2020, 15:59 [IST]
X
Desktop Bottom Promotion