Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನವರಾತ್ರಿ ವಿಶೇಷ: ಅನಾನಸ್ ಕೇಸರಿಬಾತ್ ಬೊಂಬಾಟ್ ರುಚಿ!
ಈಗ ಎಲ್ಲಿ ನೋಡಿದರೂ ನವರಾತ್ರಿಯ ಸಂಭ್ರಮ. ಯಾವುದೇ ದೇವಸ್ಥಾನ, ಮಂದಿರಕ್ಕೆ ಹೋದರೂ ಹಲವಾರು ರೀತಿಯ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಅದರಲ್ಲೂ ಬಂಗಾಳೀಯರು ಈಗ ದುರ್ಗಾ ಪೂಜೆಯನ್ನು ಎದುರು ನೋಡುತ್ತಾ ಇದ್ದಾರೆ. ದುರ್ಗಾ ಪೂಜೆಯು ಮಹಾಸಪ್ತಮಿ ಬೋಧೋನ್‌ನಂದು ಆರಂಭವಾಗಲಿದೆ. ದುರ್ಗಾಪೂಜೆಯನ್ನು ದೇಶದ ವಿವಿಧೆಡೆಗಳಲ್ಲಿ ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ.
ಅದರಲ್ಲೂ ಪಶ್ಚಿಮಬಂಗಾಳದಲ್ಲಿ ದುರ್ಗಾಪೂಜೆಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲಾಗುತ್ತದೆ. ನವರಾತ್ರಿ ವೇಳೆ ವಿವಿಧ ರೀತಿಯ ಅಲಂಕಾರ, ಬಣ್ಣಬಣ್ಣದ ದೀಪಗಳು, ಹೀಗೆ ಹಲವಾರು ರೀತಿಯ ವಿಶೇಷಗಳನ್ನು ಕಾಣಬಹುದಾಗಿದೆ. ಬಂಗಾಳಿಗಳು ಎಲ್ಲೇ ಇದ್ದರೂ ದುರ್ಗಾ ಪೂಜೆಯನ್ನು ತಪ್ಪದೆ ಆಚರಿಸುತ್ತಾರೆ.

ಅಷ್ಟೇ ಅಲ್ಲದೆ ದುರ್ಗಾ ಪೂಜೆಗೆ ಅವರು ವಿಶೇಷವಾದ ಕೆಲವೊಂದು ಅಡುಗೆಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ವಿಜಯ ದಶಮಿಯಂದು ವಿವಿಧ ರೀತಿಯ ಸಿಹಿ ತಿಂಡಿತಿನಿಸುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸುತ್ತೇವೆ.... ಹಾಗಾಗಿ ಈ ಬಾರಿ ಬೋಲ್ಡ್ ಸ್ಕೈ ತಂಡ ಅನಾನಸು ಕೇಸರಿಬಾತ್ ಮಾಡುವ ವಿಧಾನವನ್ನು ಪರಿಚಯಿಸುತ್ತಿದೆ, ಮಾಡುವ ವಿಧಾನಕ್ಕಾಗಿ ಮುಂದೆ ಓದಿ...
ನಾಲ್ಕು ಜನರಿಗೆ ಆಗುಷ್ಟು
ತಯಾರಿಸಲು ಬೇಕಾಗುವ ಸಮಯ- 5 ನಿಮಿಷ
ಅಡುಗೆಗೆ ಸಮಯ- 20 ನಿಮಿಷ ಸ್ವಾದದ ಘಮಲನ್ನು ಹೆಚ್ಚಿಸುವ ಕೇಸರಿ ಬಾತ್ ರೆಸಿಪಿ
ಬೇಕಾಗುವ ಸಾಮಗ್ರಿಗಳು
*ಅನಾಸಿನ ಪ್ಯೂರಿ- ಒಂದು ಕಪ್
*ಬೆಣ್ಣೆ- ಒಂದು ಚಮಚ
*ಸಕ್ಕರೆ- ಒಂದು ಚಮಚ
*ಕೊಬ್ಬು ಕಡಿಮೆಯಿರುವ ಹಾಲು-1 ಕಪ್
*ರವೆ-ಒಂದು ಕಪ್
*ಸಕ್ಕರೆ ಪರ್ಯಾಯ-3 ಚಮಚ
*ಏಲಕ್ಕಿ ಹುಡಿ-½ ಚಮಚ
*ಕೇಸರಿ-ಕೆಲವು ಎಸಲು(ಹಾಲಿನಲ್ಲಿ ಮುಳುಗಿಸಿಡಬೇಕು) ಹತ್ತೇ ನಿಮಿಷದಲ್ಲಿ ರೆಡಿ ರವೆ ಕೇಸರಿಬಾತ್
ಮಾಡುವ ವಿಧಾನ
1. ತಳ ಆಳವಿರುವ ತವಾ ತೆಗೆದುಕೊಂಡು ಅದಕ್ಕೆ ಅನಾನಸು ಪ್ಯೂರಿಯನ್ನು ಹಾಕಿಕೊಳ್ಳಿ. ಅದಕ್ಕೆ ಸಕ್ಕರೆ ಸೇರಿಸಿ.
2. ಇನ್ನು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು 3-4 ನಿಮಿಷ ಕಾಲ ಕುದಿಸಿ.
3. ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ ರವೆಯನ್ನು ಬೆಣ್ಣೆಯೊಂದಿಗೆ ಬಿಸಿ ಮಾಡಿ. ರವೆ ಗುಲಾಬಿ ಬಣ್ಣಕ್ಕೆ ಬರಲಿ. ಇದಕ್ಕೆ ಸಮಯ ಬೇಕಾಗುತ್ತದೆ. ತಾಳ್ಮೆಯಿರಲಿ.
4. ಈಗ ರವೆಗೆ ಕಡಿಮೆ ಕೊಬ್ಬು ಇರುವ ಹಾಲನ್ನು ಹಾಕಿ. ತಕ್ಷಣ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಸರಿಯಾಗಿ ಕಲಸಿ. ಇಲ್ಲವಾದರೆ ರವೆ ಗಟ್ಟಿಯಾಗುತ್ತದೆ.
5.ಕೆಲವು ನಿಮಿಷ ತಿರುಗಿಸುತ್ತಾ ಇರಬೇಕಾಗುತ್ತದೆ. ಇದು ದಪ್ಪಗೆ ಆದಾಗ ಸಕ್ಕರೆ ಬದಲಿಯನ್ನು ಹಾಕಿ. ಇದು ಸರಿಯಾಗಿ ಮಿಶ್ರಣವಾಗುವ ತನಕ ತಿರುಗಿಸಿ.
6.ಈಗ ಇದಕ್ಕೆ ಅನಾನಸು ಪ್ಯೂರಿಯನ್ನು ಹಾಕಿಕೊಳ್ಳಿ. ಮಧ್ಯಮ ಬೆಂಕಿಯೊಂದಿಗೆ ಇದನ್ನು ಕುದಿಸಿ.
7.ಈಗ ಕೇಸರಿ ಹಾಕಿದ ಹಾಲನ್ನು ಇದಕ್ಕೆ ಸೇರಿಸಿ. ಏಲಕ್ಕಿ ಹುಡಿಯನ್ನು ಮಿಶ್ರಣಕ್ಕೆ ಹಾಕಿ. ಸರಿಯಾಗಿ ಮಿಶ್ರಣವಾದ ಬಳಿಕ 1-2 ನಿಮಿಷ ಬೇಯಲು ಬಿಡಿ.
8.ಈಗ ಅನಾನಸು ಕೇಸರಿಬಾತ್ ತಯಾರಾಗಿದೆ. ಇದನ್ನು ಗಾಜಿನ ಪಿಂಗಾಣಿಗೆ ಹಾಕಿಡಿ. ಅದನ್ನು ಪ್ಲೇಟ್‌ನಿಂದ ಮುಚ್ಚಿಡಿ ಮತ್ತು ಪಿಂಗಾಣಿಯನ್ನು ತಿರುಗಿಸಿ.
9.ಈಗ ನಿಧಾನವಾಗಿ ಪಿಂಗಾಣಿಯನ್ನು ತೆಗೆಯಿರಿ. ಫಮಫಮಿಸುವ ಕೇಸರಿಬಾತ್ ರೆಡಿ! ಇನ್ನು ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ ಇದನ್ನು ಅಲಂಕರಿಸಬಹುದು.



Click it and Unblock the Notifications





