Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹತ್ತೇ ನಿಮಿಷದಲ್ಲಿ ರೆಡಿ ರವೆ ಕೇಸರಿಬಾತ್
ಮನೆಗೆ ಅಥಿತಿಗಳು ಕೆಲವರು ಬರುವ ಮೊದಲೇ ಹೇಳಿ ಬಂದರೆ, ಮತ್ತೆ ಕೆಲವರು ದಿಢೀರ್ ಭೇಟಿ ಕೊಟ್ಟು ಬಿಡುತ್ತಾರೆ. ಮನೆಗೆ ಬಂದ ಅಥಿತಿಗೆ ಏನಾದರೂ ಸಿಹಿ ಕೊಡಿದಿದ್ದರೆ ಹೇಗೆ? ಬೇಕರಿಯಿಂದ ತಂದಿಟ್ಟ ಸಿಹಿ ಪದಾರ್ಥಗಳನ್ನು ಕೊಡಬಹುದು, ಆದರೆ ನೀವೇ ಕೈಯಾರೆ ಮಾಡಿಕೊಟ್ಟರೆ ಇನ್ನೂ ಚೆನ್ನ ಅಲ್ಲವೇ?
ಬರೀ ಅಥಿತಿ ಬಂದಾಗ ಮಾತ್ರವಲ್ಲ, ಮಕ್ಕಳು ಸ್ಪೋರ್ಟ್ಸ್ ಗೆ ಭಾಗವಹಿಸುವಾಗ ಇದನ್ನು ಮಾಡಿ ಕೊಡಿ. ಬೆಳಗ್ಗೆ ಸ್ವಲ್ಪ ಕೇಸರಿ ಬಾತ್ ತಿಂದರೆ ಬೇಗನೆ ಸುಸ್ತಾಗುವುದಿಲ್ಲ, ದಿನಾಪೂರ್ತಿ ಚಟುವಟಿಕೆಯಿಂದ ಇರಬಹುದು. ಸಿಹಿ ಪದಾರ್ಥಗಳಲ್ಲಿ ಕೇಸರಿಬಾತ್ ಮಾಡುವುದು ಸರಳ, ಆದರೆ ಮಾಡುವ ವಿಧಾನ ತಪ್ಪಿದರೆ ಅದರ ರುಚಿ ಕಮ್ಮಿಯಾಗುವುದು. ಅತ್ಯಂತ ರುಚಿಕರವಾದ ರವೆ ಕೇಸರಿಬಾತ್ ಮಾಡುವ ವಿಧಾನದ ವೀಡಿಯೋ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು :
ಸಣ್ಣರವೆ 2 ಕಪ್ ನಂದಿನಿ ತುಪ್ಪ
3 ಸ್ಪೂನ್ ಡಾಲ್ಡ ತುಪ್ಪ
1/2 ಕಪ್ ಸನ್‌ಫ್ಲವರ್ ಆಯಿಲ್
ಸಕ್ಕರೆ 2 ಕಪ್
ಗೋಡಂಬಿ
ಸ್ವಲ್ಪ ಒಣದ್ರಾಕ್ಷಿ
ಸ್ವಲ್ಪ ಕೇಸರಿ ಬಣ್ಣ
ರವೆ ಕೇಸರಿ ಬಾತ್ ತಯಾರಿಸುವ ವಿಧಾನ
* ಮೊದಲು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಹಾಕಿ, ತುಪ್ಪ ಕಾದ ಮೇಲೆ ಗೋಡಂಬಿ, ಒಣದ್ರಾಕ್ಷಿಯನ್ನು ಹಾಕಿ ಕೈಯಾಡಿಸಿ (ಜಾಸ್ತಿಹೊತ್ತು ಬಿಟ್ಟರೆ ದ್ರಾಕ್ಷಿ ಕಪ್ಪಾಗಾಗುತ್ತದೆ).
* ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ ಬಿಸಿಯಾದ ಮೇಲೆ ರವೆಯನ್ನು ಹಾಕಿ, ನಂತರ ಡಾಲ್ಢ ತುಪ್ಪ ಮತ್ತು ಸನ್‌ಫ್ಲವರ್ ಆಯಿಲ್‌ನ್ನು (ಸ್ವಲ್ಪ) ಹಾಕಿ ಎಲ್ಲೂ ಗಂಟಾಗದಂತೆ ಕೈಯಾಡಿಸಿ. ನೀವು ಹಾಕಿದ ಪ್ರಮಾಣವು,ಬಾಣಲಿಯಲ್ಲಿ ರವೆ ಪಾಯಸದ ತರ ಇರಬೇಕು. ರವೆಯನ್ನು ಕಡಿಮೆ ಉರಿಯಲ್ಲಿ ತಿರುವುತ್ತಾ ಇರಬೇಕು.
* ಇನ್ನೊಂದು ಕಡೆ ಎರಡು ಕಪ್‌ನಷ್ಟು ನೀರನ್ನು ಬಿಸಿ ಮಾಡಿಕೊಳ್ಳಿ. ರವೆ ಇರುವ ಬಾಣಲಿಗೆ ಕಾದ ಬಿಸಿನೀರನ್ನು ಹಾಕಿ. ರವೆ ಪ್ರಮಾಣ ಮತ್ತು ನೀರಿನ ಪ್ರಮಾಣ ಸಮ ಇರಬೇಕು. ನಂತರ ಸ್ವಲ್ಪ ಕೇಸರಿಯನ್ನು ಹಾಕಿ.
ನಂತರ 2 ಲೋಟ ಸಕ್ಕರೆಯನ್ನು ಹಾಕಿ ಮತ್ತೆ ಕೈಯಾಡಿಸಿ. ದಟ್ಸಾಲ್, ದಿಢೀರ್ ಕೇಸರಿ ಬಾತ್ ರೆಡಿ.
<center><center><center><center><center>Embed code: <style type='text/css'>#vogroll_4{border:none;margin:0px;}</style><iframe src='http://www.indiavideo.org/video-embed.php?f=NjM1My4=' height='369' width='640' align='center' frameborder='0' marginwidth='0' marginheight='0'></iframe></center></center></center></center></center>



Click it and Unblock the Notifications
