Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಬೀಟ್ರೂಟ್ ಹಲ್ವಾ: ಒಮ್ಮೆ ಮಾಡಿ ಸವಿದು ನೋಡಿ
ಭಾರತದಲ್ಲಿರುವ ಅಸಂಖ್ಯಾತ ಸಂಸ್ಕೃತಿಗಳ ಕಾರಣ ವರ್ಷದ ಪ್ರತಿದಿನವೂ ಒಂದಲ್ಲಾ ಒಂದು ಹಬ್ಬ ಅಥವಾ ವಿಶೇಷವಿದ್ದೇ ಇರುತ್ತದೆ. ಅದರಲ್ಲೂ ಪ್ರಮುಖವಾದ ಹಬ್ಬಗಳು ಬಂತೆಂದರೆ ಇಡಿಯ ದೇಶದ ಚಿತ್ರಣವೇ ಬದಲಾಗುತ್ತದೆ. ಅದರಲ್ಲೂ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮೆರೆಯಲು ಹಿಂದೂ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ಇನ್ನೇನು ಒಂದರ ಹಿಂದೊಂದು ಹಬ್ಬಗಳು ಸಾಲಾಗಿ ಬರುವುದರಿಂದ ಮನೆಯಿಂದ ದೂರವಿದ್ದವರು ತಮ್ಮ ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿ ಎಲ್ಲರೊಡನೆ ಬೆರೆತು ಹಬ್ಬ ಆಚರಿಸುವ ಕಾರಣ ಪ್ರತಿ ಮನೆಯಲ್ಲಿ ಸಂಭ್ರಮ ಮತ್ತು ಸಂತೋಷ ತುಂಬಿ ತುಳುಕುತ್ತದೆ.
ದೀಪಾವಳಿ, ದಸರಾ, ಲಕ್ಷೀಪೂಜೆ ಮತ್ತು ನವರಾತ್ರಿ ಹಬ್ಬಗಳು ಇವುಗಳಲ್ಲಿ ಪ್ರಮುಖವಾಗಿವೆ. ಆದರೆ ಒಂಬತ್ತು ದಿನಗಳ ಕಾಲ ಆಚರಿಸಲ್ಪಡುವ ನವರಾತ್ರಿ ಎಲ್ಲಾ ಹಬ್ಬಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ವಾಸ್ತವವಾಗಿ ನವರಾತ್ರಿಯನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮೊದಲನೆಯದು ಚೈತ್ರಮಾಸದಲ್ಲಿ (ಸುಮಾರು ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ) ಮತ್ತು ಎರಡನೆಯದಾಗಿ ಅಶ್ವಿನಿ ಮಾಸದಂದು (ಸೆಪ್ಟೆಂಬರ್ ಅಕ್ಟೋಬರ್ ತಿಂಗಳುಗಳಲ್ಲಿ) ಆಚರಿಸಲಾಗುತ್ತದೆ.
ವಸಂತ ಮಾಸದ ನವರಾತ್ರಿ ಈಗಲೇ ಆರಂಭವಾಗಿದ್ದು ಗೃಹಿಣಿಯರಿಗೆ ರುಚಿಯಾದ ಭಕ್ಷ್ಯಗಳನ್ನು ಸಿದ್ಧಪಡಿಸುವ ಕೆಲಸ ಆರಂಭವಾಗಿದೆ. ಅಡುಗೆಯ ಜಾಣ್ಮೆಯನ್ನು ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳ ಎದುರು ಪ್ರದರ್ಶಿಸಿ ಅವರಲ್ಲಿ ತೃಪ್ತಿಯ ಮಂದಹಾಸವನ್ನು ಮೂಡಿಸುವುದು ನಿಮ್ಮ ಕೆಲಸವಾಗಿದೆ. ಹಬ್ಬದ ಸಂಭ್ರಮದಲ್ಲಿ ನೀವು ಪಾಲ್ಗೊಂಡು ಬಾಯಿ ಸಿಹಿ ಮಾಡುವ ಸರಳವಾದ ಸಿಹಿಯನ್ನು ನೀವು ತಡಕಾಡುತ್ತಿದ್ದೀರಿ ಎಂದಾದಲ್ಲಿ ಇಲ್ಲಿದೆ ವಿಶೇಷ ಖಾದ್ಯ ಬೀಟ್‌ರೂಟ್ ಹಲ್ವಾ. ಕೆಲವೇ ನಿಮಿಷಗಳಲ್ಲಿ ಸ್ವಾದಿಷ್ಟವಾಗಿ ತಯಾರಿಸಬಹುದಾದ ಈ ಹಲ್ವಾ ನಿಮಗೆ ಹೆಚ್ಚಿನ ತ್ರಾಸನ್ನು ಉಂಟು ಮಾಡುವುದಿಲ್ಲ,ಮುಂದೆ ಓದಿ..

ತಯಾರಿಕೆಗೆ ತಗುಲುವ ಸಮಯ: 10 ನಿಮಿಷ
ಅಡುಗೆಗೆ ತಗುಲುವ ಸಮಯ: 30 ನಿಮಿಷ
ಬೀಟ್‍ರೂಟ್ ಹಲ್ವಾ ಮಾಡಲು ಬೇಕಾದ ಪದಾರ್ಥಗಳು:
*ಬೀಟ್‍ರೂಟ್ - 4
*ಹಾಲು - 2 ಕಪ್
*ಸಕ್ಕರೆ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು
*ಏಲಕ್ಕಿ ಪುಡಿ - 1 ಟೀ ಚಮಚ
*ತುಪ್ಪ - 3 ಟೇಬಲ್ ಚಮಚ
*ಗೋಡಂಬಿ - ಸ್ವಲ್ಪ
*ಒಣ ದ್ರಾಕ್ಷಿ - ಸ್ವಲ್ಪ
*ಬಾದಾಮಿ - ಒಂದು ಹಿಡಿ
*ಕೋವಾ - 100 ಗ್ರಾಂ (ಐಚ್ಛಿಕ)
*ಮಂದಗೊಳಿಸಿದ ಹಾಲು - ನಿಮ್ಮ ರುಚಿಗೆ ತಕ್ಕಷ್ಟು (ಐಚ್ಛಿಕ)
ತಯಾರಿಸುವ ವಿಧಾನ
1. ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ.
2. ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ.
3. ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.
4. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.
5. ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.
6. ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.
7. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿ ಕೊಡಿ. 8. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.
9. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ.
10. ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ.
11. ಈಗ ಬೀಟ್‍ರೂಟ್ ಹಲ್ವಾ ಬಡಿಸಲು ಸಿದ್ಧವಾಗಿದೆ. ಆರೋಗ್ಯಕರವಾದ ಹಲ್ವಾವನ್ನು ನಿಮ್ಮ ಅತಿಥಿಗಳಿಗೆ ಬಡಿಸಿ



Click it and Unblock the Notifications