Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗರಿಗರಿಯಾದ ಆಲೂ ಕುರುಕುರೆ ರೆಸಿಪಿ
ಕಡಿಮೆ ಸಮಯದಲ್ಲಿ ರುಚಿಯಾದುದನ್ನು ತಯಾರಿಸುವ ಆಸೆ ನಿಮ್ಮಲ್ಲಿದೆಯೇ? ಹಾಗಿದ್ದರೆ ನಿಮಗಾಗಿ ನಾವಿಂದು ಅದ್ಭುತವಾದ ಸರಳ ರೆಸಿಪಿಯನ್ನು ಮುಂದಿರಿಸಲಿದ್ದು ನೀವದನ್ನು ಖಂಡಿತವಾಗಿಯೂ ಪ್ರಯತ್ನಿಸಲೇಬೇಕು.
ಆಲೂ ಕುರುಕುರೆ ರೆಸಿಪಿ ನಿಮ್ಮ ಸಂಜೆಯ ಚಹಾ ಅಥವಾ ಕಾಫಿಯ ರುಚಿಯನ್ನು ಹೆಚ್ಚಿಸುವುದು ಖಂಡಿತ. ಹಾಗಿದ್ದರೆ ಇನ್ನೇಕೆ ತಡ ಈ ರುಚಿಯಾದ ಸ್ನ್ಯಾಕ್ಸ್ ಮಾಡಲು ನೀವೂ ಪ್ರಯತ್ನಿಸಿ.

ಆರೋಗ್ಯಕರ ವೆಜಿಟೇಬಲ್ ಮಯೋನೈಸ್ ಸ್ಯಾಂಡ್‌ವಿಚ್!
ಪ್ರಮಾಣ:3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು
ಸಾಮಾಗ್ರಿಗಳು:
*ಆಲೂಗಡ್ಡೆ - 1 ಕಪ್ (ಬೇಯಿಸಿ ಹಿಸುಕಿದ್ದು)
*ಪುದೀನಾ ಎಲೆಗಳು - 1/2 ಕಪ್ (ಕತ್ತರಿಸಿದ್ದು)
*ಹಸಿಮೆಣಸು - 1/2 ಸ್ಪೂನ್ (ಸಣ್ಣಗೆ ಕತ್ತರಿಸಿದ್ದು)
*ಹುರಿದ ಜೀರಿಗೆ ಹುಡಿ - 1/2 ಸ್ಪೂನ್
*ಲಿಂಬೆ ರಸ - 1/2 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ಮೈದಾ - 1/2 ಕಪ್
*ಅವಲಕ್ಕಿ - 1/2 ಕಪ್ (ಚೆನ್ನಾಗಿ ಅರೆದದ್ದು)
*ನೀರು - 1/2 ಕಪ್
*ಎಣ್ಣೆ - ಹುರಿಯಲು
ಮೊಳಕೆ ಬರಿಸಿದ ಹೆಸರುಕಾಳಿನ ಸಲಾಡ್
ಮಾಡುವ ವಿಧಾನ:
1.ಹಿಸುಕಿದ ಆಲೂಗಡ್ಡೆ, ಕತ್ತರಿಸಿದ ಪುದೀನಾ, ಹಸಿಮೆಣಸು, ಹುರಿದ ಜೀರಿಗೆ ಹುಡಿ, ಉಪ್ಪು ಮತ್ತು ಲಿಂಬೆ ರಸವನ್ನು ಒಂದು ಬೌಲ್‌ನಲ್ಲಿ ಮಿಶ್ರ ಮಾಡಿಕೊಳ್ಳಿ.
2.ಈ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪಕ್ಕದಲ್ಲಿಡಿ.
3.ಮೈದಾಕ್ಕೆ ಸ್ವಲ್ಪ ನೀರು ಹಾಕಿಕೊಂಡು ಅದನ್ನು ಚೆನ್ನಾಗಿ ಕಲಿಸಿಕೊಳ್ಳಿ.
4.ಹುಡಿ ಮಾಡಿದ ಅವಲಕ್ಕಿಯನ್ನು ಪ್ಲೇಟ್‌ನಲ್ಲಿ ಸುತ್ತಲೂ ಹರಡಿ.
5.ಈಗ ಆಲೂಗಡ್ಡೆ ಉಂಡೆಗಳನ್ನು ಮೈದಾ ಹಿಟ್ಟಿನಲ್ಲಿ ಅದ್ದಿ ನಂತರ ಅವಲಕ್ಕಿ ಮಿಶ್ರಣದಲ್ಲಿ ಉರುಳಿಸಿ.
6.ಉಂಡೆಯ ಎಲ್ಲಾ ಬದಿಯು ಚೆನ್ನಾಗಿ ಕೋಟ್ ಆಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
7.ಕಡಾಯಿಯಲ್ಲಿ ಕಾಯಲು ಎಣ್ಣೆ ಇರಿಸಿ.
8.ಎಣ್ಣೆ ಬಿಸಿಯಾದೊಡನೆ, ಆಲೂಗಡ್ಡೆ ಉಂಡೆಗಳನ್ನು ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಹುರಿಯಿರಿ.
9.ಚಿನ್ನದ ಬಣ್ಣಕ್ಕೆ ಈ ಉಂಡೆ ತಿರುಗವವರೆಗೆ ಕಾಯಿರಿ.
10.ಪೂರ್ತಿ ಆದ ನಂತರ ಉಂಡೆಯನ್ನು ಎಣ್ಣೆಯಿಂದ ಹೊರತೆಗೆದು ಪ್ಲೇಟ್‌ನಲ್ಲಿ ಇರಿಸಿ.
11.ಉಳಿದ ಉಂಡೆಗಳನ್ನು ಈ ವಿಧಾನವನ್ನು ಅನುಸರಿಸಿಕೊಂಡು ತಯಾರಿಸಿ.
ಈ ರುಚಿಯಾದ ಆಲೂಗಡ್ಡೆ ಉಂಡೆಯನ್ನು ಬಿಸಿಬಿಸಿಯಾಗಿ ಚಟ್ನಿ ಅಥವಾ ಸಾಸ್‌ನೊಂದಿಗೆ ಸೇವಿಸಿ.



Click it and Unblock the Notifications
