Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚೀಸ್ ಮಶ್ರೂಮ್ ಸ್ಯಾಂಡ್ ವಿಚ್
ಸ್ಯಾಂಡ್ ವಿಚ್ ಅನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಫ್ರೂಟ್ ಸ್ಯಾಂಡ್ ವಿಚ್, ವೆಜೆಟೇಬಲ್ ಸ್ಯಾಂಡ್ ವಿಚ್, ಚೀಸ್ ಸ್ಯಾಂಡ್ ವಿಚ್, ಚೀಸ್ ಚಿಲ್ಲಿ ಹೀಗೆ ನೂರಕ್ಕೂ ಅಧಿಕ ವಿಧಗಳಲ್ಲಿ ಸ್ಯಾಂಡ್ ವಿಚ್ ತಯಾರಿಸಬಹುದು.
ಇಲ್ಲಿ ನಾವು ಅಣಬೆ ಹಾಕಿ ಮಾಡುವ ಮಶ್ರೂಮ್ ಸ್ಯಾಂಡ್ ವಿಚ್ ರೆಸಿಪಿ ನೀಡಲಾಗಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು
1 /4 ಕಪ್ ಚೀಸ್
1 ಕಪ್ ಕತ್ತರಿಸಿದ ಅಣಬೆ
ಬೆಳ್ಳುಳ್ಳಿ ಎಸಳು 3-4 (ಚಿಕ್ದಾಗಿ ಕತ್ತರಿಸಿದ್ದು)
ಸ್ವಲ್ಪ ಎಲೆಕೋಸು
4 ಬನ್ (ಎರಡು ಸಮಭಾಗಗಳಾಗಿ ಕತ್ತರಿಸಿರಬೇಕು)
ಅಥವಾ
ಬ್ರೆಡ್ ತುಂಡುಗಳು
1/2 ಕಪ್
2-3 ಚಮಚ ಸೋಯಾ ಸಾಸ್
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಮಯೋನೈಸ್
ಅರ್ಧ ಚಮಚ ಕರಿ ಮೆಣಸಿನ ಪುಡಿ
ಎಣ್ಣೆ 1 ಚಮಚ
ತಯಾರಿಸುವ ವಿಧಾನ:
* ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ 1 ಚಮಚ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿ, ನಂತರ ಶುಚಿ ಮಾಡಿ ಕತ್ತರಿಸಿದ ಅಣಬೆ ತುಂಡುಗಳನ್ನು ಹಾಕಿ ಸ್ವಲ್ಪ ಹೊತ್ತು ಉರಿದು ರುಚಿಗೆ ತಕ್ಕ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಹಾಕಿ ಹಾಕಿ ಬೇಯುವವರೆಗೆ ಸೌಟ್ ನಿಂದ ಆಡಿಸುತ್ತಾ ಹುರಿಯಿರಿ.
* ಅಣಬೆ ಬೆಂದ ನಂತರ ಅದನ್ನು ಒಂದು ಪಾತ್ರೆಯಲ್ಲಿಡಿ.
* ಈಗ ಬನ್ ಅಥವಾ ಬ್ರೆಡ್ ತುಂಡುಗಳ ನಡುವೆ ಅಣಬೆಯನ್ನು ಹಾಕಿ ಕತ್ತರಿಸಿದ ಎಲೆಕೋಸನ್ನು ಹಾಕಿ ಅದರ ಮೇಲೆ ಚೀಸ್ ಮತ್ತು ಮಯೋನೈಸ್ ಹಾಕಿ ಸೋಯಾ ಸಾಸ್ ಹಾಕಿ ಮತ್ತೊಂದು ತುಂಡು ಬ್ರೆಡ್ ಅನ್ನು ಅದರ ಮೇಲೆ ಇಟ್ಟರೆ ಮಶ್ರೂಮ್ ಸ್ಯಾಂಡ್ ವಿಚ್ ರೆಡಿ. ಇದನ್ನು ಟೊಮೆಟೊ ಕೆಚಪ್ ಜೊತೆ ತಿನ್ನಲು ರುಚಿಕರವಾಗಿರುತ್ತದೆ.
ಸಲಹೆ: ಈ ಸ್ಯಾಂಡ್ ವಿಚ್ ಗೆ ಬ್ರೆಡ್ ಬಳಸುವುದಾದರೆ ಬ್ರೆಡ್ ಗೆ ಬೆಣ್ಣೆ ಅಥವಾ ಎಣ್ಣೆ ಸವರಿ ತವಾದಲ್ಲಿ ಹಾಕಿ ಬಿಸಿ ಮಾಡಿ ನಂತರ ಸ್ಯಾಂಡ್ ವಿಚ್ ತಯಾರಿಸಿ.



Click it and Unblock the Notifications
