Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಾಯಿಯಲ್ಲಿ ನೀರೂರಿಸುವ ಬಿಸ್ಕೆಟ್ ರೊಟ್ಟಿ ರೆಸಿಪಿ
ಸಂಜೆಯ ವೇಳೆಗೆ ಬಿಸಿ ಬಿಸಿ ಚಹಾ ಸವಿಯುವಾಗ ಕುರುಕಲು ಮೆಲ್ಲುವ ಬಯಕೆಯಾಗುವುದು ಸಹಜವೇ. ಅದು ಬಾಯಿ ಚಪ್ಪರಿಸುವ ಇನ್ನೂ ತಿನ್ನಬೇಕೆಂಬ ಬಯಕೆಯನ್ನು ಆ ತಿಂಡಿ ಉಂಟುಮಾಡಿದರೆ ಸಂಜೆಯ ಚಹಾ ಮಜವೇ ಬೇರೆಯಾಗಿರುತ್ತದೆ. ಇಂದಿನ ಲೇಖನದಲ್ಲಿ ಕೂಡ ಹೆಚ್ಚು ರುಚಿಕರವಾಗಿರುವ ಸಂಜೆಯ ತಿನಿಸನ್ನು ನಿಮ್ಮ ಮುಂದೆ ಇಡುತ್ತಿದ್ದು ನಿಮಗಿದು ಖಂಡಿತ ಸ್ವಾದದ ಮಜವನ್ನು ದ್ವಿಗುಣಗೊಳಿಸುತ್ತದೆ.
ಸಂಜೆಯ ತಿಂಡಿಗೆ ಅತ್ಯುತ್ತಮ ಖಾದ್ಯ ಇದಾಗಿದ್ದು ನಿಮ್ಮ ಹಸಿವನ್ನು ತೀರಿಸುವುದರೊಂದಿಗೆ ನಿಮಗೆ ಆರೋಗ್ಯಕರ ಖಾದ್ಯವನ್ನು ಉಣಬಡಿಸುತ್ತದೆ. ಹೊರಗಿನ ಎಣ್ಣೆಯುಕ್ತ ಖಾದ್ಯಗಳಿಗಿಂತ ಮನೆಯಲ್ಲೇ ತಯಾರಿಸಬಹುದಾದ ಈ ತಿಂಡಿ ನಿಮಗೆ ಉತ್ತಮ ಖಾದ್ಯವೆನಿಸುತ್ತದೆ. ರವೆಯ ಪರಿಮಳ ಸುವಾಸಿತ ಒಗ್ಗರಣೆ ತೆಂಗಿನ ಕಾಯಿಯ ಹದವಾದ ಮಿಶ್ರಣ ಈ ಬಿಸ್ಕೆಟ್ ರೊಟ್ಟಿಯಲ್ಲಿದೆ.

ಹಾಗಿದ್ದರೆ ಮತ್ತೇಕೆ ತಡ ಇಂದಿನ ರೆಸಿಪಿ ವಿಧಾನವನ್ನು ಇಲ್ಲಿ ನೀಡುತ್ತಿದ್ದು ನೀವು ಇದನ್ನು ಪ್ರಯತ್ನಿಸಲೇಬೇಕು. ಮಾಡಲು ಅತ್ಯಂತ ಸರಳವಾಗಿರುವ ಖಾದ್ಯ ಬಿಸಿ ಇಲ್ಲದಿದ್ದರೂ ಸವಿಯಲು ಅತ್ಯುತ್ತಮವಾಗಿದೆ.
*ಪ್ರಮಾಣ : 10-12 ಬಿಸ್ಕೆಟ್ ರೊಟ್ಟಿ
*ಸಿದ್ಧತಾ ಸಮಯ: 10
*ಅಡುಗೆಗೆ ಬೇಕಾದ ಸಮಯ: 20 ನಿಮಿಷ
ನೀವು ಮಂಗಳೂರು ಬನ್ಸ್ ರೆಸಿಪಿಯ ರುಚಿ ನೋಡಿದಿರಾ?
ಸಾಮಾಗ್ರಿಗಳು
*ಮೈದಾ - 2.5 ಕಪ್‌ಗಳು
* ಸಣ್ಣ ರವೆ (ಬಾಂಬೆ ರವಾ) - 1/2 ಕಪ್
*ಕಡಲೆ ಹುಡಿ - 1 ಚಮಚ
*ತೆಂಗಿನ ಕಾಯಿ - 1/2 ಕಪ್
*ಕರಿಬೇವಿನ ಎಸಳು - 15-20
*ಶುಂಠಿ ಸಣ್ಣ ತುಂಡು
*ಅರಶಿನ ಹುಡಿ - ಸ್ವಲ್ಪ
*ಮೆಣಸಿನ ಪುಡಿ - 1 ಚಮಚ
*ಸಾಸಿವೆ - 1/2 ಚಮಚ
*ಇಂಗು - 1/4 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ- ಸ್ವಲ್ಪ
ಮಾಡುವ ವಿಧಾನ
*ರವೆ ಮತ್ತು ಕಡಲೆ ಪುಡಿಯನ್ನು ತವಾದಲ್ಲಿ ತುಸು ಕೆಂಪಗೆ ಹುರಿದುಕೊಳ್ಳಿ, ಹಾಗೂ ಶುಂಠಿ, ಹಸಿಮೆಣಸು ಮತ್ತು ಕರಿಬೇವಿನೆಸಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ
* ಇನ್ನು ಒಂದು ಚಮಚದಷ್ಟು ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಳ್ಳಿ. ಬಿಸಿಯಾಗುತ್ತಿದ್ದಂತೆ ಇದಕ್ಕೆ ಸಾಸಿವೆಯನ್ನು ಹಾಕಿ ಇದು ಸಿಡಿಯುತ್ತಿದ್ದಂತೆ ಶುಂಠಿ, ಹಸಿಮೆಣಸು, ಕರಿಬೇವಿನೆಸಳನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ತದನಂತರ ಇದಕ್ಕೆ ಇಂಗು, ಅರಶಿನವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
*ನಂತರ ತೆಂಗಿನ ಕಾಯಿಯನ್ನು ಈ ಮಿಶ್ರಣಕ್ಕೆ ಸೇರಿಸಿ. ಕಾಯಿ ಚಿನ್ನದ ಬಣ್ಣಕ್ಕೆ ಬರುತ್ತಿದ್ದಂತೆ ಮೆಣಸಿನ ಪುಡಿಯನ್ನು ಸೇರಿಸಿ.
*ಮೊದಲೇ ಹುರಿದಿಟ್ಟ ರವೆಗೆ ಈ ಮಿಶ್ರಣವನ್ನು ಸೇರಿಸಿ ಒಂದು ನಿಮಿಷ ಹಾಗೆಯೇ ಬಿಡಿ.
*ಮೈದಾ, ಎಣ್ಣೆ, ಉಪ್ಪು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಹಿಟ್ಟು ನಾದಿಕೊಳ್ಳಿ ಈ ಹಿಟ್ಟನ್ನು ನಾದಿ 15 ನಿಮಿಷಗಳ ಮುಚ್ಚಿಡಿ.
*15 ನಿಮಿಷದ ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ. ಇದನ್ನು ಪೂರಿ ಆಕಾರದಲ್ಲಿ ಲಟ್ಟಿಸಿ. ನಡುವೆ ಮಿಶ್ರಣವನ್ನು ಇಟ್ಟು ಪುನಃ ಲಟ್ಟಿಸಿಕೊಳ್ಳಿ.
*ಬಾಣಲೆಯಲ್ಲಿ ಎಣ್ಣೆ ಇಟ್ಟು ಎಣ್ಣೆ ಬಿಸಿಯಾಗುತ್ತಿದ್ದಂತೆ ನಿಧಾನಕ್ಕೆ ಲಟ್ಟಿಸಿದ ಪೂರಿ ಆಕಾರದ ಬಿಸ್ಕೆಟ್ ರೊಟ್ಟಿಯನ್ನು ಎಣ್ಣೆಗೆ ಹಾಕಿ. ಎರಡೂ ಬದಿ ಇದನ್ನು ಚೆನ್ನಾಗಿ ಹುರಿದುಕೊಳ್ಳಿ.
*ನಂತರ ಚಿನ್ನದ ಬಣ್ಣಕ್ಕೆ ತಿರುಗಿರುವ ಬಿಸ್ಕೆಟ್ ರೊಟ್ಟಿಯನ್ನು ಬಾಣಲೆಯಿಂದ ತೆಗೆದು ತಟ್ಟೆಗೆ ವರ್ಗಾಯಿಸಿ.
ಗರಿಗರಿಯಾದ ಸ್ವಾದಿಷ್ಟ ಬಿಸ್ಕೆಟ್ ರೊಟ್ಟಿ ಸವಿಯಲು ಸಿದ್ಧವಾಗಿದೆ. ಸಂಜೆಯ ಚಹಾಕ್ಕೆ ಇದು ಅತ್ಯುತ್ತಮ ತಿಂಡಿಯಾಗಿದೆ.



Click it and Unblock the Notifications
