Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಹುಳಿಹುಳಿ ಮಾವಿನಕಾಯಿ ಅನ್ನ : ನಿನಗಿನ್ನೇನು ಬೇಕಣ್ಣ?
ಚೈತ್ರದ ಚಿಗುರೊಂದಿಗೇ ಹೂವು-ಮಿಡಿಗೊಂಚಲು-ಕೋಗಿಲೆಯ ಪಾದಸ್ಪರ್ಶಿತ ಮಾವು ಪ್ರತ್ಯಕ್ಷ. ಉಪ್ಪಿನಕಾಯಿ ಆಮೇಲೆ ಮಾಡುವಿರಂತೆ... ಈಗ ಮಾವಿನಕಾಯಿ ಅನ್ನ ಮಾಡಿ ಸವಿಯಿರಿ. ಬೇಕಾಗುವ ಪದಾರ್ಥಗಳು :
2-3 ಮಾವಿನ ಕಾಯಿ
ಹಿಡಿ ಶೇಂಗಾ ಬೀಜ
7-8 ಗೋಡಂಬಿ
2-3 ಟೀ ಚಮಚದಷ್ಟು ಕಡಲೆಬೇಳೆ
4-5 ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
8-10 ಕರಿಬೇವು ಎಲೆ
ಒಂದು ಚಿಟಿಕೆಯಷ್ಟು ಅರಿಶಿಣ ಪುಡಿ
ಟೀ ಚಮಚದಲ್ಲಿ ಸಾಸಿವೆ
ತುರಿದ ಒಣ ಕೊಬ್ಬರಿ
ಚೂರು ಬೆಲ್ಲ
1/2 ಕೆ.ಜಿ ಅಕ್ಕಿ
ಮಾಡುವ ವಿಧಾನ :
ಮೊದಲು ಒಂದು ಪಾತ್ರೆಯಲ್ಲಿ ಉದುರುದುರಾಗಿ ಅನ್ನ ಮಾಡಿಟ್ಟುಕೊಂಡಿರಿ. ಆನಂತರ ಮಾವಿನಕಾಯಿಗಳನ್ನು ಸ್ವಲ್ಪಹೊತ್ತು ನೀರಲ್ಲಿ ನೆನೆಸಿಟ್ಟು ಸಿಪ್ಪೆಯನ್ನು ತೆಗೆದು ಸಣ್ಣಗೆ ತುರಿದುಕೊಳ್ಳಿ. ತುರಿದುಕೊಂಡ ಮಾವಿನಕಾಯಿಯಲ್ಲಿ 3-4 ಹಸಿಮೆಣಸಿನಕಾಯಿ ಹಾಕಿ ನೀರನ್ನು ಬಳಸದೆ ಮಿಕ್ಸಿ ಮಾಡಿ ಇಡಿ.
ಇನ್ನೊಂದು ಬಾಣಲೆಯನ್ನು ಸ್ಟೋವ್ ಮೇಲೆ ಇಟ್ಟು ಅದರಲ್ಲಿ 2-3ಚಮಚ ಎಣ್ಣೆಯನ್ನು ಹಾಕಿ. ಕಡಲೆಬೇಳೆ, ಶೇಂಗಾ, ಗೋಡಂಬಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಕೆಂಪು ಬಣ್ಣಕ್ಕೆ ಬಂದ ಮೇಲೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಅರಿಶಿಣ ಪುಡಿ, ಸ್ವಲ್ಪ ಕೆಂಪು ಮೆಣಸಿನಪುಡಿ ಹಾಕಿ ಸ್ವಲ್ಪ ಹೊತ್ತು ಹುರಿದು ನಂತರ ಮೊದಲೆ ಮಿಕ್ಸಿ ಮಾಡಿಕೊಂಡ ಮಾವಿನಕಾಯಿ ಮಿಶ್ರಣಕ್ಕೆ ಸೇರಿಸಿ.
ಕೊನೆಗೆ ಸ್ಟೋವ್ ಮೇಲಿಂದ ಬಾಣಲೆ ಕೆಳಗೆ ಇಳಿಸಿ ಅದರಲ್ಲಿ ಅನ್ನವನ್ನು ಚೆನ್ನಾಗಿ ಪ್ರೀತಿಯಿಂದ ಬೆರೆಸಿ. ರುಚಿ ನೋಡಿ..ಬಡಿಸಿ. ಉಪ್ಪು ಹಾಕುವುದು ಮರೆತಿರಾ?



Click it and Unblock the Notifications
