Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮನೆಯಲ್ಲಿಯೆ ಸವಿಯಬಹುದು ಪಾವ್ ಬಾಜಿ ಸವಿ

ಬೇಕಾಗುವ ಸಾಮಗ್ರಿಗಳು:
1. ಅರ್ಧ ಓಪನ್ ಮಾಡಿದ ಬನ್ 8
2. ಬೇಯಿಸಿದ ಆಲೂಗೆಡ್ಡೆ 2
3. ಬೇಯಿಸಿದ ಬಟಾಣಿ 1 ಕಪ್
4. ಬೇಯಿಸಿದ ಕ್ಯಾರೆಟ್ 2
5. ಬೇಯಿಸಿದ ಹೂಕೋಸು
6. ಬೇಯಿಸಿದ ಎಲೆಕೋಸು1/2
7. ಬೇಯಿಸಿದ ಬೀನ್ಸ್ 10
8. ಈರುಳ್ಳಿ ಕತ್ತರಿಸಿದ 2
9. 2 ಟೊಮೆಟೊ
10. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
11. ದುಂಡು ಮೆಣಸಿನ ಕಾಯಿ 1
12. ಕತ್ತರಿಸಿದ ಹಸಿಮೆಣಸಿನ ಕಾಯಿ 4
13. ಕೊತ್ತಂಬರಿ ಸೊಪ್ಪು
14. ಮೆಣಸಿನ ಪುಡಿ 1 ಚಮಚ
15. ಜೀರಿಗೆ ಪುಡಿ 1 ಚಮಚ
16. ಕೊತ್ತಂಬರಿ ಪುಡಿ 1 ಚಮಚ
17. ಪಾವ್ ಬಾಜಿ ಮಸಾಲ ಪುಡಿ 1 ಚಮಚ
18. ಗರಂ ಮಸಾಲ 1 ಚಮಚ ( ಕರಿಮೆಣಸಿನ ಕಾಯಿ, ಬೆಳ್ಳುಳ್ಳಿ, ಚಕ್ಕೆ, ಏಲಕ್ಕಿ )
19. ತುಪ್ಪ 2 ಚಮಚ
20. ಎಣ್ಣೆ 2 ಚಮಚ
21. ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ದುಂಡು ಮೆಣಸಿನ ಕಾಯಿ ಬಿಟ್ಟು , ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಉಪ್ಪು ಹಾಕಿ ಬೇಯಿಸಿ ನಂತರ ಅವುಗಳನ್ನು ಮಸೆದಾಗ ಪೇಸ್ಟ್ ರೀತಿ ಆಗುವುದು.
2. ನಂತರ ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರ ಮಾಡಬೇಕು.
3. ನಂತರ ಆ ಬಾಣಲೆಗೆ ದುಂಡು ಮೆಣಸಿನ ಕಾಯಿ ಮತ್ತು ಹಸಿ ಮೆಣಸಿನ ಕಾಯಿಯನ್ನು ಹಾಕಿ 2 ನಿಮಿಷ ಬೆರೆಸಿ ನಂತರ ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಬೆರೆಸ ಬೇಕು, ಗರಂ ಮಸಾಲ ಪುಡಿಯನ್ನು ಈಗ ಹಾಕಬಾರದು.
4. ಅದಕ್ಕೆ ಟೊಮೆಟೊ ಹಾಕಿ ಅದು ಮೆದುವಾದಾಗ ರಸ ತರ ಮಾಡಬೇಕು .
5. ಈಗ ಮಸೆದ ತರಕಾರಿಯನ್ನು ಬೆರೆಸಿ ಅದಕ್ಕೆ 1/2 ಕಪ್ ನೀರು ಸೇರಿಸಬೇಕು, ಅದಕ್ಕೆ ರುಚಿಗೆ ತಕ್ಕ ಹಾಗೆ ಉಪ್ಪು ಸೇರಿಸಿ.
6. ಅದಕ್ಕೆ ಗರಂ ಮಸಾಲ ಹಾಕಿ 5 ನಿಮಿಷ ಕಾಲ ಕುದಿಸಿ, ನಂತರ ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
7. ಬನ್ ಅನ್ನು ತುಪ್ಪದಲ್ಲಿ ಮುಳುಗಿಸಿ ಅದನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ ಅದನ್ನು ತಯಾರಿಸಿದ ಮಸಾಲೆಯೊಂದಿಗೆ ತಿನ್ನಲು ಕೊಡಿ. ಎಲ್ಲರೊಂದಿಗೆ ತಿನ್ನಲು ತುಂಬಾನೆ ಮಜವಾಗಿರುತ್ತದೆ.



Click it and Unblock the Notifications
