Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮದ್ದೂರು ವಡೆಗೆ ಸರಿಸಾಟಿ ಯಾವುದು?
ಬೆಂಗಳೂರು-ಮೈಸೂರು ರಸ್ತೆಯಲ್ಲಿ ನೀವು ಎಂದಾದರೂಪ್ರಯಾಣಿಸಿದ್ದರೆ ಬಹುಶಃ ಮದ್ದೂರು ವಡೆಯನ್ನು ಮಿಸ್ ಮಾಡಿಕೊಂಡಿರಲ್ಲ.ಅದರ ಸ್ವಾದ, ಪರಿಮಳ,ಸ್ಥಳ ಮಹಿಮೆ ನಿಮ್ಮನ್ನು ಒಂದಾದರೂ ಕೊಂಡುಕೊಳ್ಳುವಂತೆ ಪ್ರೇರೇಪಿಸುತ್ತದೆ. ತಿಂದ ನಂತರ ನಿಮಗರಿವಿಲ್ಲದಂತೆಯೇ ಮತ್ತೆರಡನ್ನು ಪಾರ್ಸಲ್ ಕಟ್ಟಿಸಿಕೊಂಡಿರುತ್ತೀರಿ.ಮದ್ದೂರು ವಡೆಯನ್ನು ಮತ್ತಷ್ಟು ರುಚಿಯಾಗಿಸಲು ಹಾಗೂ ಅದರ ಅಸಲಿ ಸ್ವಾದಕ್ಕೆ ಮೋಸವಾಗದಂತೆ ಅದನ್ನು ಒಂಚೂರು ಬದಲಾಯಿಸಿದ್ದೇನೆ.
*ಶ್ರೀರಕ್ಷಾ, ಬೆಂಗಳೂರು
ಬೇಕಾಗುವ ಪದಾರ್ಥಗಳು
ಅಕ್ಕಿ ಹಿಟ್ಟು: 2 ಕಪ್ಪು
ಹುರಿದು ಹೊಟ್ಟು ತೆಗೆದ ನೆಲಗಡಲೆ ಹುಡಿ:1 ಕಪ್ಪು
ರವೆ: 1 ಕಪ್ಪು
ಕಡಲೆಹಿಟ್ಟು: 1 ಕಪ್ಪು
ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ: 1
ಸಣ್ಣಗೆ ಹೆಚ್ಚಿಕೊಂಡ ಪುದೀನ ಸೊಪ್ಪು: 1 ಹಿಡಿ
ಶುಂಠಿ ತುರಿ:1 ಟೀ ಚಮಚ
ಬೆಳ್ಳುಳ್ಳಿ ತುರಿ:1 ಟೀ ಚಮಚ
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು:1 ಹಿಡಿ
ಕರಿಬೇವು: 1 ಎಸಳು
ಲವಂಗಪಟ್ಟೆ ಪುಡಿ: ¼ ಟೀ ಚಮಚ
ಚಕ್ಕೆ: ಒಂಚೂರು
ಉಪ್ಪು, ಕೆಂಪು ಮೆಣಸಿನಕಾಯಿ ಖಾರದ ಪುಡಿ: ರುಚಿಗೆ ತಕ್ಕಷ್ಟು
ಎಣ್ಣೆ: ಕರಿಯಲು
ತಯಾರಿಸುವ ವಿಧಾನ
1. ಮೇಲಿನ ಪದಾರ್ಥಗಳನ್ನೆಲ್ಲಾ ಚೆನ್ನಾಗಿ ಕಲೆಸಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಈ ಮಿಶ್ರಣಕ್ಕೆ ನೀರು ಹಾಕಿ ಚೆನ್ನಾಗಿ ನಾದಿ ಹಿಟ್ಟು ತಯಾರಿಸಿಕೊಳ್ಳಿ.
2.ನಿಂಬೆಹಣ್ಣು ಗಾತ್ರದ ಉಂಡೆಗಳನ್ನು ಮಾಡಿಕೊಂಡು ಮೃದುವಾಗಿ ತಟ್ಟಿ ದುಂಡಗೆ ಮದ್ದೂರು ವಡೆ ಆಕಾರಕ್ಕೆ ಮಾಡಿಕೊಳ್ಳಿ.
3. ಚೆನ್ನಾಗಿ ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದುಕೊಳ್ಳಿ.
4.ಕಡಿಮೆ ಉರಿಯಲ್ಲಿ ಎಣ್ಣೆಯನ್ನು ಕಾಯಿಸಿ. ಮದ್ದೂರು ವಡೆಗಳು ಗರಿಗರಿಯಾಗಿ ಬರುತ್ತವೆ.
5.ಚಟ್ನಿಯೊಂದಿಗೆ ಬಡಿಸಿ ಅಥವಾ ಹಾಗೆ ಸವಿಯಬಹುದು.
ಮದ್ದೂರು ವಡೆಗಳನ್ನು ಬರಿಗೈಯಲ್ಲೆ ಮಾಡಬಹುದು(ಮಾಡಿದ ನಂತರ ಒಂದು ವೇಳೆ ಉಳಿದರೆ ಅತಿಥಿಗಳಿಗೂ ಕೊಡಿ!). ಇಲ್ಲಿ ಕೊಟ್ಟಿರುವ ಪದಾರ್ಥಗಳನ್ನು ಬಳಸಿಕೊಂಡು 30ರಿಂದ 35 ಮದ್ದೂರು ವಡೆಗಳನ್ನು ತಯಾರಿಸಬಹುದು.



Click it and Unblock the Notifications
