Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಖತ್ ರುಚೀರಿ ಬೇಬಿ ಕಾರ್ನ್ ಮಂಚೂರಿ!

ಮಕ್ಕಳಂತೂ ಹೊಟೇಲುಗಳಲ್ಲಿ ಗೋಬಿ ಮಂಚೂರಿ ಅಥವಾ ಬೇಬಿ ಕಾರ್ನ್ ಮಂಚೂರಿ ಇಲ್ಲದೆ ಊಟಕ್ಕೆ ಕೈಹಾಕುವುದಿಲ್ಲ. ಗೋಬಿ ಮಂಚೂರಿ ಅಂದರೆ ಹೂಕೋಸಿನಿಂದ ತಯಾರಿಸಿದ ಮಂಚೂರಿಗಿಂತ ರುಚಿಕಟ್ಟಾದ ಮಂಚೂರಿ ಬೇಬಿ ಕಾರ್ನ್ ಮಂಚೂರಿ. ಬೇಬಿ ಕಾರ್ನ್ ಮಂಚೂರಿಯನ್ನು ಬೇಬಿಗಳಿಂದ ಹಿಡಿದು ಹಲ್ಲಿಲ್ಲದ ವಯೋವೃದ್ಧರೂ ಮೆಲ್ಲಬಹುದು. ರಸ್ತೆಬದಿಯಲ್ಲಿ ಎಂತೆಂಥದೋ ಎಣ್ಣೆಯಲ್ಲಿ ಕರಿದು ಮಾಡಿದ ಮಂಚೂರಿ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ಮಾಡಿ ತಿನ್ನಿರಿ. ಅದನ್ನು ತಯಾರಿಸುವ ವಿಧಾನ ಇಲ್ಲಿ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು
ಬೇಬಿ ಕಾರ್ನ್ ಏಳೆಂಟು
ಕಾರ್ನ್ ಫ್ಲೋರ್ ಅರ್ಧ ಬಟ್ಟಲು
ಅಕ್ಕಿ ಹಿಟ್ಟು ಕಾಲು ಬಟ್ಟಲು
ಕರಿಯಲು ರಿಫೈನ್ಡ್ ಎಣ್ಣೆ
ಈರುಳ್ಳಿ ಎರಡು
ಮೆಣಸಿನಕಾಯಿ ಆರು
ದೊಡ್ಡ ಮೆಣಸಿನಕಾಯಿ ಒಂದು
ಸೋಯಾ ಸಾಸ್
ಹಸಿ ಶುಂಠಿ
ಗೋಡಂಬಿ ನಾಲ್ಕಾರು
ತಯಾರಿಸುವ ವಿಧಾನ
ಯಾವುದೇ ಮಾಲ್ ಗಳಲ್ಲಿ ದೊರೆಯುವ ಬೇಬಿ ಕಾರ್ನ್ ತಂದು ಅವುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ತೊಳೆದ ಬೇಬಿ ಕಾರ್ನ್ ಗಳನ್ನು ಎರಡಿಂಚಿನಂತೆ ಉದ್ದುದ್ದಕ್ಕೆ ಕತ್ತರಿಸಿಕೊಳ್ಳಬೇಕು.
ಎರಡನೇ ಹಂತದಲ್ಲಿ ಹಿಟ್ಟುಗಳೆರಡನ್ನೂ ಬೆರೆಸಿ ಬಜಿ ತಯಾರಿಸುವಾಗ ಮಾಡಿಕೊಳ್ಳುವ ಹಿಟ್ಟಿನಂತೆ ನೀರು ಹಾಕಿ ಕಲಿಸಿಟ್ಟುಕೊಳ್ಳಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನೂ ಬೆರೆಸಿಡಿ. ಸ್ವಲ್ಪ ಅಳ್ಳಕಾಗಿದ್ದರೆ ತೊಂದರೆಯೇನಿಲ್ಲ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹುಯ್ದುಕೊಂಡು ಕಾದ ನಂತರ ಬೇಬಿ ಕಾರ್ನ್ ಗಳನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ತೇಲಿಬಿಡಿ. ಕುದ್ದ ಎಣ್ಣೆಯಲ್ಲಿ ಕಂದುಬಣ್ಣಕ್ಕೆ ತಿರುಗಿದ ನಂತರ ಒಂದು ದೊಟ್ಟ ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ.
ನಾಲ್ಕನೇ ಹಂತದಲ್ಲಿ ಇನ್ನೊಂದು ತಳ ಸಮತಟ್ಟಾಗಿರುವ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಉದ್ದುದ್ದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಹಸಿ ಮೆಣಸಿನಕಾಯಿ, ದೊಡ್ಡ ಮೆಣಸಿನಕಾಯಿ, ಶುಂಠಿಗಳನ್ನು ಒಗ್ಗರಣೆಗೆ ಸೇರಿಸಿ ಚೆನ್ನಾಗಿ ತಾಳಿಸಿರಿ. ಅದಕ್ಕೆ ಕರಿದಿಟ್ಟು ಬೇಬಿ ಕಾರ್ನ್ ಗಳನ್ನು ಹಾಕಿ ಮತ್ತೊಮ್ಮೆ ಕೈಯಾಡಿಸಿ.
ಈ ಮಿಶ್ರಣಕ್ಕೆ ಸೋಯಾ ಸಾಸ್ ಹಾಕಿ ಮತ್ತೆ ಕೈಯಾಡಿಸಿ. ಅಷ್ಟೇ, ಬೇಬಿ ಕಾರ್ನ್ ಮಂಚೂರಿ ತಯಾರ್. ಇದನ್ನು ಇನ್ನೇನು ಶುರುವಾಗಲಿರುವ ಟ್ವೆಂಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ಟಿವಿಯಲ್ಲಿ ನೋಡುತ್ತಾ ಟೊಮೇಟೊ ಸಾಸ್ ಜೊತೆ ಮೆಲ್ಲಬಹುದು. ಹೇಗಿದೆ ಐಡಿಯಾ?



Click it and Unblock the Notifications
