For Quick Alerts
ALLOW NOTIFICATIONS  
For Daily Alerts

ಫಟಾಫಟ್ ಅಂತ ರೆಡಿಯಾಗುತ್ತೆ ಈ ಸಬ್ಬಕ್ಕಿ ವಡೆ...

Posted By:
|

ವಡೆಯ ಹೆಸರು ಕೇಳ್ದಾಗಲೇ ಎಲ್ಲರ ಬಾಯಲ್ಲಿ ನೀರೂರುತ್ತೆ. ಬಿಸಿ ಕಾಫಿ ಜೊತೆ, ಗರಿಗರಿಯಾದ ಸಾಬಕ್ಕಿ ವಡೆ ಇದ್ರೆ ಸ್ವರ್ಗಕ್ಕೆ ಮೂರೇ ಗೇಣು ಬಾಕಿ ಎನ್ನುವಂತಹ ಭಾವನೆ ಮನದಲ್ಲಿ. ಇಂತಹ ಸಾಬಕ್ಕಿಯ ವಡೆಯು ವ್ರತಾಚರಣೆ ಹಾಗೂ ಉಪವಾಸದ ಸಂದರ್ಭದಲ್ಲಿ ಮಾಡುವ ಪ್ರಸಿದ್ಧ ಲಘು ಆಹಾರ. ಸಾಬಕ್ಕಿಯಿಂದ ತಯಾರಿಸಲಾಗುವ ಈ ಪಾಕವಿಧಾನವು ಶ್ರಾವಣ ಮಾಸದ ವ್ರತಗಳು, ನವರಾತ್ರಿಯ ಉಪವಾಸ ಕ್ರಮ ಹಾಗೂ ಇನ್ನಿತರ ವ್ರತಾಚರಣೆ ಹಾಗೂ ಹಬ್ಬ ಹರಿದಿನಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ.

Sabudana Vada Recipe In Kannada

ಇದು ಮಹಾರಾಷ್ಟ್ರ ಶೈಲಿಯ ಪಾಕವಿಧಾನವಾಗಿದ್ದು, ರುಚಿ ಹಾಗೂ ಉತ್ತಮ ಉಪಯೋಗದಿಂದಾಗಿ ದೇಶದ ವಿವಿಧ ಪ್ರದೇಶದಲ್ಲೂ ತಯಾರಿಸುತ್ತಾರೆ. ಇದರಲ್ಲಿ ಸಮೃದ್ಧವಾದ ಕಾರ್ಬೋಹೈಡ್ರೇಟ್ ಮತ್ತು ಗ್ಲೂಕೋಸ್ ಇರುವುದರಿಂದ ಉಪವಾಸದ ಸಂದರ್ಭದಲ್ಲಿ ಸೇವಿಸುತ್ತಾರೆ. ಸರಳವಾದ ಈ ಪಾಕವಿಧಾನವನ್ನು ನೀವು ಸುಲಭವಾಗಿ ಮಾಡಬಹುದು. ಹಾಗಾದ್ರೆ ಬನ್ನಿ ಈ ತಿಂಡಿಯನ್ನು ಸುಲಭವಾಗಿ ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಂಡು ಬರೋಣ.

ಫಟಾಫಟ್ ಅಂತ ರೆಡಿಯಾಗುತ್ತೆ ಈ ಸಬ್ಬಕ್ಕಿ ವಡೆ...
ಫಟಾಫಟ್ ಅಂತ ರೆಡಿಯಾಗುತ್ತೆ ಈ ಸಬ್ಬಕ್ಕಿ ವಡೆ...
Prep Time
5 Mins
Cook Time
10M
Total Time
15 Mins

Recipe By: Shreeraksha

Recipe Type: Vegetarian

Serves: 2

Ingredients
  • ಬೇಕಾಗುವ ಸಾಮಗ್ರಿಗಳು:

    ಬೇಯಿಸಿದ ಆಲೂಗಡ್ಡೆ- 4

    ಸಾಬಕ್ಕಿ -೧೦೦ಗ್ರಾಂ

    ಕತ್ತರಿಸಿದ ಹಸಿಮೆಣಸಿನಕಾಯಿ - 4

    ಕೊತ್ತಂಬರಿ ಸೊಪ್ಪು

    ಕಾಳು ಮೆಣಸಿನ ಹುಡಿ

    ಉಪ್ಪು

    ಜಜ್ಜಿದ ನೆಲಗಡಲೆ -1/2 ಕಪ್‌

    ಕರಿಮೆಣಸು 1/4 ಚಮಚ

    ಅಗತ್ಯಕ್ಕೆ ತಕ್ಕಷ್ಟು ಎಣ್ಣೆ

Red Rice Kanda Poha
How to Prepare
  • ತಯಾರಿಸುವ ವಿಧಾನ:

    - ಒಂದು ಪಾತ್ರೆಯಲ್ಲಿ ಸಾಬಕ್ಕಿಯನ್ನು ಹಾಕಿ, ಚೆನ್ನಾಗಿ ತೊಳೆಯಿರಿ. ನಂತರ ಅದಕ್ಕೆ ನೀರನ್ನು ಹಾಕಿ 2 ಗಂಟೆಗಳ ಕಾಲ ನೆನೆಯಲು ಬಿಡಿ.

    - ಬೇಯಿಸಿದ ಆಲೂಗಡ್ಡೆಯನ್ನು ತುರಿ ಮಣೆಯಿಂದ ತುರಿದುಕೊಳ್ಳಿ.

    - ಒಂದು ಪಾತ್ರೆಯಲ್ಲಿ ತುರಿದುಕೊಂಡ ಆಲೂಗಡ್ಡೆ, ಸಾಬಕ್ಕಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಉಪ್ಪು, ಶೇಂಗಾ ಪುಡಿ ಎಲ್ಲವನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ.

    - ನಂತರ ಅಂಗೈ ಮೇಲೆ ಎಣ್ಣೆಯನ್ನು ಹಚ್ಚಿಕೊಂಡು, ವಡೆಯ ಆಕಾರದಲ್ಲಿ ತಟ್ಟಿ, ಪ್ಲೇಟ್ ಒಂದಕ್ಕೆ ವರ್ಗಾಯಿಸಿ.- ತಟ್ಟಿಕೊಂಡ ವಡೆಯನ್ನು 5 ನಿಮಿಷಗಳ ಕಾಲ ಫ್ರಿಜ್ ನಲ್ಲಿ ಇರಿಸಿ, ತಂಪಾಗಿಸಿ ಕೊಳ್ಳಿ.

    - ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಕರಿಯಲು ಸಿದ್ಧಮಾಡಿಕೊಳ್ಳಿ.- ಎಣ್ಣೆ ಬಿಸಿಯಾದ ಮೇಲೆ ವಡೆಯನ್ನು ಹಾಕಿ, ಕರಿಯಿರಿ. ಎರಡು ಭಾಗದಲ್ಲಿ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗಿದ ಮೇಲೆ, ತೆಗೆಯಿರಿ.

    - ಬೆಂದ ವಡಾ ಅನ್ನು ಪ್ಲೇಟ್ ಒಂದಕ್ಕೆ ವರ್ಗಾಯಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸವಿಯಲು ನೀಡಿ.

Instructions
  • ಇದರಲ್ಲಿ ಸಮೃದ್ಧವಾದ ಕಾರ್ಬೋಹೈಡ್ರೇಟ್ ಮತ್ತು ಗ್ಲೂಕೋಸ್ ಇರುವುದರಿಂದ ಉಪವಾಸದ ಸಂದರ್ಭದಲ್ಲಿ ಸೇವಿಸುತ್ತಾರೆ.
Nutritional Information
  • People - 2
  • ಕೊಬ್ಬು - 3ಗ್ರಾಂ
  • ಪ್ರೋಟೀನ್ - 2ಗ್ರಾಂ
  • ಕಾರ್ಬ್ಸ್ - 25ಗ್ರಾಂ
  • ಫೈಬರ್ - 3ಗ್ರಾಂ
[ 4 of 5 - 106 Users]
X
Desktop Bottom Promotion