Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಬಿಸಿ ಬೇಳೆ ಭಾತ್ ಪೌಡರ್ ಮನೆಯಲ್ಲೇ ಮಾಡಿ...

ಬಿಸಿಬೇಳೆ ಭಾತ್ ಪುಡಿಗೆ ಬೇಕಾಗುವ ಸಾಮಾನು:
* 10 ಒಣಮೆಣಸಿನಕಾಯಿ / ಖಾರಕ್ಕೆ ತಕ್ಕಷ್ಟು
* 2 ಚಮಚ ಧನಿಯಾ
* 1/2 ಚಮಚ ಮೆಂತ್ಯ
* 1 ಚಮಚ ಜೀರಿಗೆ
* 1/2 ಚಮಚ ಗಸಗಸೆ, 2 ಏಲಕ್ಕಿ, 4 ಲವಂಗ
* 1 ಇಂಚು ಚೆಕ್ಕೆ ಚೂರು
* 1/2 ಚಮಚ ಮೆಣಸು
* ಸ್ವಲ್ಪ ಒಣಕೊಬ್ಬರಿ
* 1 ಚಮಚ ಕಡಲೆ ಬೇಳೆ ಮತ್ತು 1 ಚಮಚ ಉದ್ದಿನಬೇಳೆ
ಬಿಸಿಬೇಳೆ ಭಾತ್ ಪುಡಿ ತಯಾರಿಸುವ ವಿಧಾನ:
ಪುಡಿಗೆಂದು ತಿಳಿಸಿರುವ ಸಾಮಗ್ರಿಗಳನ್ನು ಒಂದು ಚಮಚ ಎಣ್ಣೆಯೊಂದಿಗೆ ಸೀದು ಹೋಗದಂತೆ ಒಂದೊಂದಾಗಿ ಹುರಿದು, ಎಲ್ಲವನ್ನು ಸೇರಿಸಿ ಪುಡಿ ಮಾಡಿಟ್ಟುಕೊಂಡರೆ ಸಾಕು ಬಿಸಿಬೇಳೆಭಾತ್ ಪುಡಿ ರೆಡಿಯಾಗುತ್ತದೆ.
ಬಿಸಿಬೇಳೆಭಾತ್ ಪುಡಿಯನ್ನು ಮೊದಲೇ ಹೆಚ್ಚಾಗಿ ತಯಾರಿಸಿ, ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟುಕೊಂಡರೆ ಯಾವಾಗ ಬೇಕೋ ಆಗ ಭಾತ್ ತಯಾರಿಸುವುದು ಸುಲಭವಾಗುತ್ತದೆ. ಆದರೆ ತುಂಬಾ ತಿಂಗಳವರೆಗೆ ಪುಡಿ ಇಟ್ಟುಕೊಂಡರೆ ಸ್ವಾದ ಕಡಿಮೆಯಾಗುತ್ತದೆ. ಈ ಪುಡಿಯನ್ನು ಪ್ರಿಡ್ಜ್ ನಲ್ಲಿಟ್ಟರೆ ಇನ್ನೂ ಹೆಚ್ಚು ಕಾಲ ತಾಜಾ ಆಗಿರುತ್ತೆ.
ಈ ಪ್ರಮಾಣ ಒಂದು ಬಾರಿ ಬಿಸಿಬೇಳೆಭಾತ್ ತಯಾರಿಸುವುದಕ್ಕೆ ಮಾತ್ರ ಕೊಟ್ಟಿರುವುದು. ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಪುಡಿ ಬೇಕೆನಿಸಿದರೆ ಅದಕ್ಕೆ ತಕ್ಕಂತೆ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ.



Click it and Unblock the Notifications
