For Quick Alerts
ALLOW NOTIFICATIONS  
For Daily Alerts

ಚಪಾತಿ ಜೊತೆ ಸವಿಯಲು ಆಲೂಮಟರ್ ಗ್ರೇವಿ

|

ಅಡುಗೆಗೆ ಆಲೂಗೆಡ್ಡೆ ಮತ್ತು ಬಟಾಣಿ ಸೂಪರ್ ಕಾಂಬೀನೇಷನ್. ಇವುಗಳಿಂದ ಆಲೂಮಟರ್ ಗ್ರೇವಿ, ಪರೋಟ, ಕಟ್ಲೇಟ್ ಹೀಗೆ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದು.

ಆಲೂಗೆಡ್ಡೆಗೆ ಬಟಾಣಿ ಹಾಕಿ ತಯಾರಿಸುವ ರುಚಿ, ಆಲೂಗೆಡ್ಡೆಗೆ ಬೇರೆ ಯಾವುದೇ ಪದಾರ್ಥ ಸೇರಿಸಿದರೂ ಬರುವುದಿಲ್ಲ. ಇಲ್ಲಿ ಸುಲಭದಲ್ಲಿ ತಯಾರಿಸಬಹುದಾದ ಆಲೂಮಟರ್ ಗ್ರೇವಿಯ ರೆಸಿಪಿ ನೀಡಿದ್ದೇವೆ.

ಸೂಚನೆ: ಇಲ್ಲಿ ತೆಂಗಿನಕಾಯಿ ಹಾಕದೆ ತಯಾರಿಸುವ ಆಲೂಮಟರ್ ಗ್ರೇವಿ ರೆಸಿಪಿ ನೀಡಿದ್ದೇವೆ, ನಿಮಗೆ ಬೇಕಿದ್ದರೆ ತೆಂಗಿನಕಾಯಿ ಹಾಕಿಯೂ ಮಾಡಬಹುದು.

Aloo Mutter Gravy Recip

ಬೇಕಾಗುವ ಸಾಮಾಗ್ರಿಗಳು
ಚಿಕ್ಕ ಗಾತ್ರದ ಆಲೂಗೆಡ್ಡೆ 20
ಹಸಿರು ಬಟಾಣಿ 1 ಕಪ್
ಹಸಿ ಮೆಣಸಿನಕಾಯಿ 2 (ಎರಡು ಭಾಗಗಳಾಗಿ ಕತ್ತರಿಸಿ)
ಜೀರಿಗೆ ಅರ್ಧ ಚಮಚ
1 ಚಮಚ ಶುಂಠಿ
ಟೊಮೆಟೊ 1
ಪಲಾವ್ ಎಲೆ 1
ಜೀರಿಗೆ 1 ಚಮಚ
ಗಸೆಗಸೆ 1 ಚಮಚ
ತುಪ್ಪ/ ಎಣ್ಣೆ 2 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು)


ತಯಾರಿಸುವ ವಿಧಾನ:

* ಆಲೂಗೆಡ್ಡೆಯನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ, ನಂತರ ಅವುಗಳ ಸಿಪ್ಪೆ ಸುಲಿದು ಒಂದು ಪಾತ್ರೆಯಲ್ಲಿಡಿ.

* ಈಗ ಸಾರು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಜೀರಿಗೆ, ಪಲಾವ್ ಎಲೆ, ಹಸಿ ಮೆಣಸಿನ ಕಾಯಿ ಹಾಕಬೇಕು. ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಬೇಕು.

* ಈಗ ಬೇಯಿಸಿದ ಆಲೂಗೆಡ್ಡೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ಶುಂಠಿ ಪೇಸ್ಟ್ ಹಾಕಿ ಬೇಯಿಸಿದ ಬಟಾಣಿ, ಖಾರದ ಪುಡಿ, ಅರಿಶಿಣ ಪುಡಿ ಹಾಕಿ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ 2-3 ನಿಮಿಷ ಹುರಿದು ನಂತರ ಒಂದೂವರೆ ಕಪ್ ನೀರು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಗ್ರೇವಿ ರೀತಿಯಲ್ಲಿ ಆಗುವವರೆಗೆ ಬೇಯಿಸಿ. ನಂತರ ಅದನ್ನು ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಆಲೂಮಟರ್ ರೆಡಿ.

English summary

Aloo Mutter Gravy Recipe| Variety Of Gravy Recipe | ಆಲೂಮಟರ್ ಗ್ರೇವಿ ರೆಸಿಪಿ | ಅನೇಕ ಬಗೆಯ ಗ್ರೇವಿ ರೆಸಿಪಿ

Aloo mutter is a potato recipe that is made in all parts of the country. There are various ways to making this dish. Down south, people add some coconut to this gravy.
X
Desktop Bottom Promotion