Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಶೀತ ಶಮನ ಮಾಡುತ್ತೆ ರುಚಿಕರ ಪುದೀನಾ ಸೂಪ್
ಚಳಿಗಾಲ ಬಂತೆಂದರೆ ಸಾಕು, ನೆಗಡಿ, ಕೆಮ್ಮು, ಗಂಟಲಿನ ಕೆರೆತ, ಜೀರ್ಣ ಕ್ರಿಯೆ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಆದರೆ ಈ ಸಮಸ್ಯೆಗಳಿಗೆಲ್ಲಾ ಯಾವಾಗಲೂ ಮಾತ್ರೆಗಳ ಮೊರೆಹೋಗುವುದು ಒಳ್ಳೆಯ ಅಭ್ಯಾಸವಲ್ಲ. ಆದ್ದರಿಂದ ಈ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನೈಸರ್ಗಿಕವಾಗಿ ಉಪಶಮನ ಮಾಡುವ ಉಪಾಯವೊಂದು ಇಲ್ಲಿದೆ.
ಚಳಿಗಾಲದಲ್ಲಿ ಬಾಯಿಗೆ ಹಿತ ನೀಡುವುದರೊಂದಿಗೆ ಶೀತ ಶಮನ ಮಾಡುವ ಈ ರುಚಿಕರ ಪುದೀನಾ ಸೂಪನ್ನು ಸುಲಭವಾಗಿ ತಯಾರಿಸುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.
ಪುದೀನಾ ಸೂಪ್ ಗೆ ಏನೇನು ಬೇಕು?
1 ಕಪ್ ತಾಜಾ ಪುದೀನಾ ಎಲೆ, ಸ್ವಲ್ಪ ಶುಂಠಿ ಪೇಸ್ಟ್, 1 ಚಮಚ ಹುಣಸೆ ರಸ, 1 ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ, 1 ಚಮಚ ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಕೆಂಪು ಒಣ ಮೆಣಸಿನ ಕಾಯಿ, 1 ಚಮಚ ಸಾಸಿವೆ
ಪುದೀನಾ ಸೂಪ್ ತಯಾರಿಸುವ ವಿಧಾನ:
* ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಜೀರಿಗೆ, ಸಾಸಿವೆ, ಪುದೀನಾ, ಶುಂಠಿ ಪೇಸ್ಟ್, ಕೊತ್ತಂಬರಿ ಮತ್ತು ಕೆಂಪು ಒಣ ಮೆಣಸಿನಕಾಯಿಯನ್ನು ಒಂದೆರೆಡು ನಿಮಿಷ ಹುರಿದುಕೊಳ್ಳಬೇಕು.
* ಈ ಮಿಶ್ರಣಕ್ಕೆ 2-3 ಕಪ್ ನೀರು ಹಾಕಿ, ಹುಣಸೆ ಹಣ್ಣಿನ ರಸ, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಬಿಸಿಯಾಗಲು ಬಿಡಬೇಕು. ಈಗ ಪುದೀನಾ ಸೂಪ್ ಕುಡಿಯಲು ಸಿದ್ಧ. ಈ ಸೂಪನ್ನು ಬಿಸಿಯಿದ್ದಾಗಲೇ ಕುಡಿದರೆ ರುಚಿ ಹೆಚ್ಚು.



Click it and Unblock the Notifications
