Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಈ ಬೇಸಿಗೆಗಾಗಿ ಟಾಪ್ 10 ಮುಳ್ಳುಸೌತೆ ರೆಸಿಪಿಗಳು
ಮುಳ್ಳುಸೌತೆ ಒಂದು ನೀರಿನಿಂದ ಭರಿತ ತರಕಾರಿಯಾಗಿದ್ದು ಬೇಸಿಗೆಯಲ್ಲಿ ನೀವು ಅತ್ಯವಶ್ಯಕವಾಗಿ ತೆಗೆದುಕೊಳ್ಳಬೇಕಾದ ಆಹಾರವಾಗಿದೆ. ಆರೋಗ್ಯಕರವಾದ ಅಂಶಗಳನ್ನು ಹೊಂದಿರುವ ಮುಳ್ಳುಸೌತೆ ರುಚಿಯಲ್ಲಿ ಕೂಡ ಶ್ರೀಮಂತವಾಗಿದೆ.
ಸಲಾಡ್ ರೂಪದಲ್ಲಿ ಇಲ್ಲವೇ ಸೈಡ್ ಡಿಶ್ ಆಗಿ ಕೂಡ ಮುಳ್ಳುಸೌತೆಯನ್ನು ನಮ್ಮ ಆಹಾರದಲ್ಲಿ ಬಳಸಬಹುದು. ಇಂದು ಬೋಲ್ಡ್ ಸ್ಕೈ ನಿಮಗಾಗಿ ಮುಳ್ಳುಸೌತೆಯಿಂದ ಮಾಡಬಹುದಾದ ರೆಸಿಪಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸೌತೆಕಾಯಿಯಲ್ಲಿದೆ ಕೆಲವು ಅಚ್ಚರಿಯ ಗುಣಗಳು
ಮುಳ್ಳುಸೌತೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವ ಗುಣವನ್ನು ಹೊಂದಿರುವ ತರಕಾರಿಯಾಗಿದ್ದು, ದೇಹದಲ್ಲಿ ಹೈಡ್ರೇಶನ್ ಇರುವಂತೆ ನೋಡಿಕೊಳ್ಳುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಇದು ನಿಯಮಿತ ಕರುಳ ಚಲನೆಯನ್ನು ಬೆಂಬಲಿಸುತ್ತದೆ ಮತ್ತು ದೇಹದ ಉಷ್ಣವನ್ನು ಕಡಿಮೆ ಮಾಡುವ ಗುಣ ಕೂಡ ಹೊಂದಿದೆ.
ಮುಳ್ಳುಸೌತೆಯನ್ನು ಮುಖ್ಯ ಸಾಮಾಗ್ರಿಯನ್ನಾಗಿ ಕೇಂದ್ರೀಕರಿಸಿಕೊಂಡು ಹಲವಾರು ಭಕ್ಷ್ಯಗಳನ್ನು ತಯಾರಿಸಬಹುದು. ಕೇವಲ ಹಸಿಯಾಗಿ ಸಲಾಡ್ ರೂಪದಲ್ಲಿ ಸೇವಿಸದೆ ಡಿಶ್ ಆಗಿ ಕೂಡ ಇದನ್ನು ಸೇವಿಸಬಹುದು.
ಕ್ಯಾಲೋರಿ ಅಂಶಗಳು ಮುಳ್ಳುಸೌತೆಯಲ್ಲಿ ಕಡಿಮೆ ಇದ್ದು ನೀರಿನಂಶ ಇದರಲ್ಲಿ ಹೆಚ್ಚಿದೆ. ಆದ್ದರಿಂದಲೆ ಡಯೆಟ್ ಮಾಡುವವರು ತಮ್ಮ ಆಹಾರದಲ್ಲಿ ಮುಳ್ಳುಸೌತೆಯನ್ನು ಸಲಾಡ್ ಅಥವಾ ರಾಯಿತ ರೂಪದಲ್ಲಿ ನಿತ್ಯವೂ ಸೇವಿಸುತ್ತಾರೆ.
ನಿರ್ಜಲೀಕರಣವನ್ನು ದೂರೀಕರಿಸಿ ದೇಹವನ್ನು ಸ್ವಚ್ಛಗೊಳಿಸಿ ಜೀರ್ಣಕ್ರಿಯೆಯನ್ನು ಮುಳ್ಳುಸೌತೆ ಪೋಷಿಸುತ್ತದೆ. ಮುಳ್ಳುಸೌತೆ ನ್ಯೂಟ್ರಿಶಿಯನ್ ಭರಿತವಾಗಿದ್ದು ಆರೋಗ್ಯವಂತವಾಗಿದೆ. ಇದರಲ್ಲಿರುವ ನೀರಿನಂಶ ದೇಹಕ್ಕೆ ಮಾತ್ರವಲ್ಲ ತ್ವಚೆಗೂ ಉತ್ತಮವಾದುದಾಗಿದೆ.
ಬಾಯಿಯ ದುರ್ಗಂಧವನ್ನು ದೂರೀಕರಿಸಿ ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶಗಳು ಮುಳ್ಳುಸೌತೆಯಲ್ಲಿದೆ. ಇದು ಅತಿ ಕಡಿಮೆ ದರದಲ್ಲಿ ದೊರೆಯುವ ತರಕಾರಿಯಾಗಿದ್ದು ನಿತ್ಯವೂ ಮಾರುಕಟ್ಟೆಯಲ್ಲಿ ಲಭ್ಯ. ಸೀಸನ್‌ನ ಕ್ರಂಚಿ ಮತ್ತು ಜೂಸಿ ತರಕಾರಿಯಾಗಿರುವ ಮುಳ್ಳುಸೌತೆಯನ್ನು ಪೂರ್ಣವಾಗಿ ಸೇವಿಸುವುದಕ್ಕಾಗಿ, ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಅತ್ಯುತ್ತಮ ಮುಳ್ಳುಸೌತೆ ರೆಸಿಪಿಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಬನ್ನಿ ಅವುಗಳತ್ತ ನೋಟ ಹರಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮುಳ್ಳುಸೌತೆ ಜ್ಯೂಸ್‌ನ 8 ಆರೋಗ್ಯಕಾರಿ ಪ್ರಯೋಜನೆಗಳು

ತಂಪಾದ ಮುಳ್ಳುಸೌತೆ ಸೂಪ್
ಈ ಬೇಸಿಗೆಗಾಗಿ ತಂಪಾದ ಮತ್ತು ರುಚಿರವಾದ ಸೂಪ್‌ಗಳನ್ನು ತಯಾರಿಸಬಹುದು. ಮುಳ್ಳುಸೌತೆ ಮತ್ತು ಬೇಯಿಸಿದ ತರಕಾರಿಗಳಾದ ಕ್ಯಾರೇಟ್, ಆಲೂಗಡ್ಡೆ ಮೊದಲಾದ ತರಕಾರಿಗಳನ್ನು ಬಳಸಿ ತಂಪಾದ ಸೂಪ್ ಅನ್ನು ನಿಮಗೆ ತಯಾರಿಸಬಹುದು. ರುಚಿಕರವಾದ ಕ್ಯಾಲೋರಿ ಕಡಿಮೆ ಇರುವ ಈ ಸೂಪ್ ಡಯೆಟ್ ಮಾಡುವವರಿಗೆ ಹೇಳಿ ಮಾಡಿಸಿರುವಂಥದ್ದು.

ಟೊಮೇಟೋ ಮತ್ತು ಮುಳ್ಳುಸೌತೆ ಸಲಾಡ್:
ಹೆಚ್ಚಾಗಿ ಸಲಾಡ್‌ಗಳಲ್ಲಿ ಮುಳ್ಳುಸೌತೆಯನ್ನು ಬಳಸುತ್ತಾರೆ. ಈ ಕ್ರಂಚಿ ತರಕಾರಿಯೊಂದಿಗೆ ಟ್ಯಾಂಗಿ ಟೊಮೇಟೋಗಳನ್ನ ಬಳಸಿ ಮಸಾಲೆಯನ್ನು ಬೆರೆಸಿ ರುಚಿಕರ ಸಲಾಡ್ ಅನ್ನು ತಯಾರಿಸಬಹುದು.

ಕೀರಾ ಚಾಟ್:
ಅನ್ನ ಹಾಗೂ ರೋಟಿಯೊಂದಿಗೆ ಚೆನ್ನಾಗಿ ಹೊಂದುವ ಸೈಡ್ ಡಿಶ್ ಆಗಿದೆ ಕೀರಾ ಚಾಟ್. ತುರಿದ ಮುಳ್ಳುಸೌತೆಯನ್ನು ಲಿಂಬೆ ಹಾಗೂ ಖಾರ ಸಾಮಾಗ್ರಿಗಳಾದ ಕೆಂಪು ಮೆಣಸಿನ ಹುಡಿ ಮತ್ತು ಉಪ್ಪು ಬೆರೆಸಿ ಇದನ್ನು ತಯಾರಿಸಲಾಗುತ್ತದೆ.

ಮುಳ್ಳುಸೌತೆ ಗೊಜ್ಜು:
ಮುಳ್ಳುಸೌತೆಯನ್ನು ಕತ್ತರಿಸಿ ರುಚಿಕರ ಗೊಜ್ಜು ತಯಾರಿಸುತ್ತಾರೆ (ಕರ್ನಾಟಕ ರೆಸಿಪಿ) ಇದನ್ನು ದಕ್ಷಿಣಭಾರತದಲ್ಲಿ ಖಾರ ಪೊಂಗಲ್‌ನೊಂದಿಗೆ ಬಡಿಸಲಾಗುತ್ತದೆ.

ಮುಳ್ಳುಸೌತೆ ರಾಯಿತದೊಂದಿಗೆ ಗ್ರಿಲ್ ಮಾಡಿದ ಸಾಲ್‌ಮನ್:
ಸಾಲ್‌ಮನ್ ಒಮೆಗಾ - 3 ಫ್ಯಾಟ್ಸ್ ಏಸಿಡ್‌ನೊಂದಿಗೆ ಹೆಚ್ಚು ನ್ಯೂಟ್ರೀನ್, ಅನ್ನು ಒಳಗೊಂಡಿದೆ. ಹೃದಯ ಕಾಯಿಲೆ, ಮಧುಮೇಹ, ವಿವಿಧ ಪ್ರಕಾರದ ಕ್ಯಾನ್ಸರ್ ಮತ್ತು ಸಂಧಿವಾತ ಸೇರಿದಂತೆ ನಮ್ಮ ದೇಹದಲ್ಲಿರುವ ಉರಿಯನ್ನು ತಗ್ಗಿಸಲು ಸಹಾಯ ಮಾಡಲು ಒಮೆಗಾ - 3 ಫ್ಯಾಟ್ಸ್ ಸಹಾಯ ಮಾಡುತ್ತದೆ. ಕ್ರಂಚಿ ಮುಳ್ಳುಸೌತೆಯನ್ನು ಸೈಡ್ ಡಿಶ್‌ಗೆ ಸೇರಿಸುವುದು ಸಲಾಡ್ ಅನ್ನು ಇನ್ನಷ್ಟು ರುಚಿಕರವನ್ನಾಗಿಸುತ್ತದೆ.

ಮುಳ್ಳುಸೌತೆ ಚಿಕನ್ ರೆಸಿಪಿ:
ಚಿಕನ್ ರೆಸಿಪಿಗೆ ಮುಳ್ಳುಸೌತೆಯನ್ನು ಸೇರಿಸುವುದು ಈ ಡಿಶ್‌ಗೆ ಹೆಚ್ಚಿನ ರುಚಿಯನ್ನು ಸೇರಿಸುತ್ತದೆ. ಇದು ತುಂಬಾ ಖಾರ ಇರದಿರುವುದರಿಂದ ಮತ್ತು ಯಮ್ಮಿ ಟೇಸ್ಟ್ ಅನ್ನು ಹೊಂದಿರುವುದರಿಂದ ಮಕ್ಕಳಿಗೆ ಇದು ಮೆಚ್ಚಿನ ರೆಸಿಪಿಯಾಗುವುದು ಖಂಡಿತ. ಸ್ಟೀಮ್ ರೈಸ್ ಮತ್ತು ಚಪಾತಿಯೊಂದಿಗೆ ಈ ಅನನ್ಯ ಡಿಶ್ ಚೆನ್ನಾಗಿ ಹೊಂದುತ್ತದೆ.

ಮುಳ್ಳುಸೌತೆ ಸಲಾಡ್:
ಮುಳ್ಳುಸೌತೆ ಸಲಾಡ್ ಒಂದು ಆರೋಗ್ಯಯುತ ಮತ್ತು ಹೊಟ್ಟೆ ಭರ್ತಿ ಮಾಡುವ ಡಿಶ್ ಆಗಿದ್ದು ಸೈಡ್ ಡಿಶ್ ನಂತೆ ಇಲ್ಲವೇ ಮುಖ್ಯ ಡಿಶ್ ಆಗಿ ಕೂಡ ಇದನ್ನು ಸೇವಿಸಬಹುದು. ಟೊಮೇಟೋ, ಲಿಂಬೆ, ಈರುಳ್ಳಿ ಮತ್ತು ಚಾಟ್ ಮಸಾಲಾವನ್ನು ಸೇರಿಸಿ ನಿಮ್ಮ ನಾಲಗೆಯ ರುಚಿಯನ್ನು ತಣಿಸಿ.

ಮುಳ್ಳುಸೌತೆ ಮತ್ತು ಚೀಸ್ ಸ್ಯಾಂಡ್‌ವಿಚ್:
ತರಕಾರಿ ಸ್ಯಾಂಡ್‌ವಿಚ್ ಅನ್ನು ಮುಳ್ಳುಸೌತೆಯನ್ನು ಪ್ರಧಾನ ಸಾಮಾಗ್ರಿಯೊಂದಿಗೆ ಮುಖ್ಯವಾಗಿಸಿ ಇದನ್ನು ತಯಾರಿಸಬಹುದು. ಕತ್ತರಿಸಿದ ಈರುಳ್ಳಿ, ಟೊಮೇಟೋ, ಹಾಗೂ ಚೀಸ್ ಬಳಸಿ ರುಚಿಕರ ಬ್ರೇಕ್‌ಫಾಸ್ಟ್ ತಯಾರಿಸಬಹುದು.

ಮುಳ್ಳುಸೌತೆ ಚನ್ನಾ ದಾಲ್:
ಮುಳ್ಳುಸೌತೆ ಚನ್ನಾ ದಾಲ್ ಸರಳ ಮತ್ತು ಆರೋಗ್ಯಪೂರ್ಣ ರೆಸಿಪಿಯಾಗಿದೆ. ಕಡಲೆಬೇಳೆ ಒಂದು ನ್ಯೂಟ್ರಿಶಿಯನ್ ಉಳ್ಳ ಬೇಳೆಯಾಗಿದ್ದು ಇದು ಮುಳ್ಳುಸೌತೆಯೊಂದಿಗೆ ಬೆರೆತಾಗ, ಇದರ ರುಚಿ ಅಮೋಘವಾಗಿರುತ್ತದೆ. ಇವೆರಡರ ಮಿಶ್ರಣ ಕೊಂಚ ಭಿನ್ನವಾಗಿರುತ್ತದೆ. ಮುಳ್ಳುಸೌತೆಯ ಅಸಾಮಾನ್ಯ ರುಚಿಯು ಇದನ್ನು ಸ್ವಾದಿಷ್ಟಗೊಳಿಸುತ್ತದೆ.

ಮುಳ್ಳುಸೌತೆ ರಾಯಿತ:
ಮುಳ್ಳುಸೌತೆ ರಾಯಿತ ಯೋಗರ್ಟ್ ಮತ್ತು ಸಾಂಬಾರು ಪದಾರ್ಥಗಳಾದ ಜೀರಿಗೆ, ಮೆಣಸಿನ ಹುಡಿ ಮತ್ತು ಈರುಳ್ಳಿಯೊಂದಿಗೆ ಬೆರೆತು ಒಂದು ಉತ್ತಮ ಸೈಡ್ ಡಿಶ್‌ನಂತೆ ರೂಪಿಸುತ್ತದೆ.



Click it and Unblock the Notifications
