Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗೊಂಬೆಗಳ ಹಬ್ಬಕ್ಕೆ ಗೋಡಂಬಿ ಗ್ರೇವಿ ಮಾಡಿ
ನವರಾತ್ರಿಯಲ್ಲಿ ನಡೆಯುವ ಗೊಂಬೆ ಹಬ್ಬಕ್ಕೆ ಗೊಂಬೆಗಳೊಂದಿಗೆ ತಿಂಡಿತಿನಿಸುಗಳನ್ನು ಮಾಡಲೂ ತಯಾರಾಗಿ. ಹಬ್ಬಗಳಿಗೆ ಸಿಹಿತಿಂಡಿಗಯೊಂದಿಗೆ ಸ್ವಲ್ಪ ಖಾರವೂ ಇರಲಿ. ಗೋಡಂಬಿಯಲ್ಲಿ ಮಸಾಲೆಭರಿತ ಗ್ರೇವಿ ಮಾಡುವುದು ಹೇಗೆ ಎಂದು ತಿಳಿದುಕೊಂಡರೆ ಹಬ್ಬದ ದಿನ ಮಾಡಿ ಸವಿಯಬಹುದು.
ಗೋಡಂಬಿ ಗ್ರೇವಿಗೆ ಏನೇನು ಬೇಕು?
* 2 ಚಮಚ ಮಖಾನ (ಲೋಟಸ್ ಸೀಡ್, ಫಾಕ್ಸ್ ನಟ್)
* 50 ಗ್ರಾಂ ಗೋಡಂಬಿ (ಪೇಸ್ಟ್)
* 2 ಚಮಚ ಶುಂಠಿ ಪೇಸ್ಟ್
* ಕತ್ತರಿಸಿದ ಟೊಮೆಟೊ, ಕೊತ್ತಂಬರಿ
* 2 ಚಮಚ ಹಸಿ ಬಟಾಣಿ
* 1/2 ಚಮಚ ಕತ್ತರಿಸಿದ ಶುಂಠಿ
* ಅರಿಶಿನ, ಕೆಂಪುಮೆಣಸಿನ ಪುಡಿ ಮತ್ತು ಗರಂ ಮಸಾಲ
* ಜೀರಿಗೆ, ಸಾಸಿವೆ, ಉಪ್ಪು
* ಬೆಣ್ಣೆ ಮತ್ತು ಕೆನೆ, ಎಣ್ಣೆ
ಗೋಡಂಬಿ ಗ್ರೇವಿ ಮಾಡೋದು ಹೀಗೆ..
* ಲೋಟಸ್ ಸೀಡ್ (ಮಖಾನ) ಅನ್ನು ಕೆಂಪಗಾಗುವವರೆಗೂ ಚೆನ್ನಾಗಿ ಹುರಿದು ತಣ್ಣಗಾದ ನಂತರ ಕೆಲ ಸಮಯ ನೀರಿನಲ್ಲಿ ನೆನೆಸಬೇಕು. ಹಸಿ ಬಟಾಣಿಯನ್ನೂ ನೆನೆಸಬೇಕು.
* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಜೀರಿಗೆ, ಸಾಸಿವೆಯನ್ನು ಹಾಕಬೇಕು. ನಂತರ ಶುಂಠಿ ಪೇಸ್ಟ್ ಹಾಕಿ ಕೆಲ ಸೆಕೆಂಡ್ ನಂತರ ಕತ್ತರಿಸಿದ ಟೊಮಟೊ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಕೆಂಪುಮೆಣಸಿನ ಪುಡಿ ಮತ್ತು ಗರಂ ಮಸಾಲ ಪುಡಿ ಹಾಕಿ ಸಣ್ಣ ಉರಿಯಲ್ಲಿ 3-4 ನಿಮಿಷ ಬೇಯಿಸಬೇಕು.
* ನಂತರ ಈ ಮಿಶ್ರಣಕ್ಕೆ ಗೋಡಂಬಿ ಪೇಸ್ಟ್ ಸೇರಿಸಿ ಒಂದು ಕಪ್ ನೀರು ಬೆರೆಸಬೇಕು. ಅದು ಕುದಿಯಲು ಆರಂಭಿಸಿದ ನಂತರ ಚೆನ್ನಾಗಿ ತಿರುಗಿಸಿ 5 ನಿಮಿಷ ಬೇಯಲು ಬಿಡಬೇಕು.
* ಈಗ ನೆನೆಸಿಟ್ಟಿದ್ದ ಮಖಾನ ಮತ್ತು ಹಸಿ ಬಟಾಣಿಯನ್ನು ಗ್ರೇವಿಗೆ ಬೆರೆಸಿ ಚೆನ್ನಾಗಿ ಕದಡಬೇಕು. ನಂತರ ಅದಕ್ಕೆ ಕೆನೆ ಬೆರೆಸಿ 2 ನಿಮಿಷದ ನಂತರ ಉರಿಯನ್ನು ಆರಿಸಬೇಕು. ಕೊನೆಗೆ ಗ್ರೇವಿ ಮೇಲೆ ಬೆಣ್ಣೆ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಗೋಡಂಬಿ ಗ್ರೇವಿ ತಿನ್ನಲು ರೆಡಿಯಾಗಿರುತ್ತೆ.



Click it and Unblock the Notifications
