For Quick Alerts
ALLOW NOTIFICATIONS  
For Daily Alerts

ರೆಸಿಪಿ: ಟೀ ಜೊತೆ ಸವಿಯಲು ಬಿಸಿ ಬಿಸಿ ಈರುಳ್ಳಿ ಬಜ್ಜಿ

Posted By:
|

ಸಂಜೆ ಟೀ ಜೊತೆ ಸವಿಯಲು ಈರುಳ್ಳಿ ಬಜ್ಜಿ ತಿನ್ನಿಬೇಕೆಂದು ಅನಿಸುತ್ತಿದೆಯೇ? ಈ ಕೊರೊನಾ ಹೆಚ್ಚಾಗುತ್ತಿರುವುದರಿಂದ ಹೊರಗಡೆ ಅಡ್ಡಾಡುವುದು, ಹೊರಗಿನಿಂದ ಕೊಂಡು ತರುವುದು ಅಷ್ಟು ಸೂಕ್ತವಲ್ಲ, ಹಾಗಾಗಿ ಮನೆಯಲ್ಲಿಯೇ ಮಾಡಿ ಸವಿಯಿರಿ.

Onion Pakoda Recipe

ಈರುಳ್ಳಿ ಬಜ್ಜಿ ಮನೆಯಲ್ಲಿಯೇ ಮಾಡುವುದರ ಮತ್ತೊಂದು ಪ್ರಯೋಜನವೆಂದರೆ ಬಳಸುವ ಎಣ್ಣೆ ಶುದ್ಧವಾಗಿರುತ್ತದೆ, ಆದ್ದರಿಂದ ಹೊಟ್ಟೆಗೆ ಹಾನಿಯುಂಟಾಗುವುದಿಲ್ಲ. ಈ ಈರುಳ್ಳಿ ಬಜ್ಜಿ ಮಾಡುವುದು ಕಷ್ಟದ ಕೆಲಸವೇನಲ್ಲ, ಸುಲಭವಾಗಿ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

onion pakoda recipe, ಈರುಳ್ಳಿ ಬಜ್ಜಿ ರೆಸಿಪಿ
onion pakoda recipe, ಈರುಳ್ಳಿ ಬಜ್ಜಿ ರೆಸಿಪಿ
Prep Time
7 Mins
Cook Time
10M
Total Time
17 Mins

Recipe By: Reena TK

Recipe Type: Snacks

Serves: 5

Ingredients
  • ಬೇಕಾಗುವ ಸಾಮಗ್ರಿ

    ಈರುಳ್ಳಿ 3-4

    ಹಸಿ ಮೆಣಸು 3

    ಸ್ವಲ್ಪ ಕರಿಬೇವು ಉಪ್ಪು

    ಅರ್ಧ ಚಮಚ ಅರಿಶಿಣ ಪುಡಿ

    ಗರಂ ಮಸಾಲ 1/4 ಚಮಚ

    ಜೀರಿಗೆ ಪುಡಿ 1/4 ಚಮಚ

    ಕಡಲೆ ಹಿಟ್ಟು 1 ಕಪ್

    ಎಣ್ಣೆ 1 ಕಪ್

Red Rice Kanda Poha
How to Prepare
  • ಮಾಡುವ ವಿಧಾನ:

    * ಈರುಳ್ಳಿಯನ್ನು ಉದ್ದುದ್ದವಾಗಿ ತೆಳುವಾಗಿ ಕತ್ತರಿಸಿ ಒಂದು ಒಂದು ದೊಡ್ಡ ಬೌಲ್‌ಗೆ ಹಾಕಿ.

    * ಅದರಲ್ಲಿ ಉಳಿದೆಲ್ಲಾ ಸಾಮಗ್ರಿ ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ.

    * ತುಂಬಾ ನೀರು ಹಾಕಬೇಡಿ, ಮಿಶ್ರಣ ಸ್ವಲ್ಪ ಗಟ್ಟಿಯಾಗಿರಲಿ, ಆದರೆ ಕೈಯಿಂದ ಸುರಿಯುವಂತೆ ಇರಬೇಕು.

    * ಇದೇ ಸಮಯಕ್ಕೆ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.

    * ಎಣ್ಣೆ ಕುದಿ ಬರಲು ಪ್ರಾರಂಭಿಸಿದಾಗ ಸ್ವಲ್ಪ-ಸ್ವಲ್ಪ ಮಿಶ್ರಣ ಕೈಯಿಂದ ತೆಗೆದು ಎಣ್ಣೆಗೆ ಹಾಕಿ ಮಿಶ್ರಣ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ.

    * ಇಷ್ಟು ಮಾಡಿದರೆ ಟೀ ಜೊತೆ ಸವಿಯಲು ಈರುಳ್ಳಿ ಬಜ್ಜಿ ರೆಡಿ.

Instructions
  • ತುಂಬಾ ಗರಿ ಗರಿ ಬೇಕೆಂದರೆ ಜಾಸ್ತಿ ಹೊತ್ತು ಎಣ್ಣೆಯಲ್ಲಿ ಕರಿಯಿರಿ, ಹೀಗೆ ಕರಿದರೆ 1-2 ದಿನ ಇಡಬಹುದು, ಇಲ್ಲಾ ಅಂದರೆ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ, ಆದರೆ ಈರುಳ್ಳಿ ಹಾಗೂ ಹಿಟ್ಟು ಬೆಂದಿರಬೇಕು, ಬೇಗ ತೆಗೆಯಬೇಡಿ.
Nutritional Information
  • ಸರ್ವ್ - 1 ಪ್ಲೇಟ್
[ 5 of 5 - 28 Users]
X
Desktop Bottom Promotion