Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರುಚಿಕರವಾದ ಪ್ರಾನ್ ಗ್ರೀನ್ ಕರಿ ರೆಸಿಪಿ
ಸಮುದ್ರಾಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಮುದ್ರಾಹಾರಗಳಲ್ಲಿ ಮೀನಿನ ಆಹಾರ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಅನೇಕ ಬಗೆಯ ಮೀನುಗಳಿದ್ದು ಅವುಗಳ ರುಚಿ ಕೂಡ ಭಿನ್ನವಾಗಿರುತ್ತದೆ. ಅದರಲ್ಲಿ ಪ್ರಾನ್ ಹೆಚ್ಚಿನವರ ಮೆಚ್ಚಿನ ಆಹಾರವಾಗಿದೆ.
ಪ್ರಾನ್ ನಿಂದ ತಯಾರಿಸಿದ ಅಡುಗೆ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಅನೇಕ ಬಗೆಯಲ್ಲಿ ತಯಾರಿಸಬಹುದಾಗಿದ್ದು ಇಲ್ಲಿ ನಾವು ಪಾಲಾಕ್ ಸೊಪ್ಪು ಹಾಕಿ ತಯಾರಿಸುವ ಪ್ರಾನ್ ಕರಿ(ಸಾರು) ರೆಸಿಪಿ ನೀಡಿದ್ದೇವೆ ನೋಡಿ.

ಬೇಕಾಗುವ ಸಾಮಾಗ್ರಿಗಳು:
ಪ್ರಾನ್ 1 ಕೆಜಿ
ತೆಂಗಿನ ಹಾಲು 1 ಕಪ್
ಪಾಲಾಕ್ ಸೊಪ್ಪು 1-2 ಕಟ್ಟು
ಜೀರಿಗೆ 1 ಚಮಚ
ಪಲಾವ್ ಎಲೆ 1
ಚಕ್ಕೆ 1
ಏಲಕ್ಕಿ 2
ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ 1 ಚಮಚ
ಪುದೀನಾ ಪೇಸ್ಟ್ 1 ಚಮಚ
ಶುಂಠಿ ಪೇಸ್ಟ್ 1 ಚಮಚ
ಮೆಣಸಿನ ಪುಡಿ (ಖಾರಕ್ಕೆ ತಕ್ಕಷ್ಟು)
ಗರಂ ಮಸಾಲ 1 ಚಮಚ
ಸ್ವಲ್ಪ ಹುಣಸೆ ಹಣ್ಣು
ಎಣ್ಣೆ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಪಾತ್ರೆಗೆ 4 ಚಮಚ ಎಣ್ಣೆ ಹಾಕಿ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದಾಗ ಪ್ರಾನ್ ಹಾಕಿ ಪ್ರಾನ್ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಗ್ಯಾಸ್ ಅನ್ನು ಆಫ್ ಮಾಡಿ ಪ್ರಾನ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಬದಿಯಲ್ಲಿಡಿ.
* ಈಗ ತೆಂಗಿನ ಹಾಲನ್ನು ಒಂದು ಪಾತ್ರೆಗೆ ಹಾಕಿ ಕಾಯಿಸಬೇಕು. ಒಂದು ಕಪ್ ಇರುವ ತೆಂಗಿನ ಹಾಲು ಅರ್ಧ ಕಪ್ ಆಗುವವರೆಗೆ ಕಾಯಿಸಿ ತಣ್ಣಗಾಗಲು ಇಡಬೇಕು.
* ನಂತರ ಪಾಲಾಕ್ ಸೊಪ್ಪನ್ನು ಎಣ್ಣೆ ಹಾಕಿ ಸ್ವಲ್ಪ ಬಾಡಿಸಿ ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ಮಾಡಿಡಬೇಕು.
* ಈಗ ಸಾರು ಮಾಡುವ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಮಾಡಬೇಕು. ನಂತರ ಕತ್ತರಿಸಿದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದಕ್ಕೆ ಜೀರಿಗೆ, ಪಲಾವ್ ಎಲೆ, ಚಕ್ಕೆ , ಶುಂಠಿ ಪೇಸ್ಟ್ , ಪುದೀನಾ ಪೇಸ್ಟ್ , ಏಲಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ಪಾಲಾಕ್ ಪೇಸ್ಟ್ ಹಾಗೂ ತೆಂಗಿನ ಹಾಲು ಹಾಕಿ ಅದಕ್ಕೆ ಗರಂ ಮಸಾಲ, ಅರಿಶಿಣ ಪುಡಿ ಹಾಗೂ ಖಾರದ ಪುಡಿ ಹಾಕಬೇಕು, ರುಚಿಗೆ ತಕ್ಕ ಉಪ್ಪು ಹಾಕಬೇಕು. ನಂತರ ಹುಣಸೆ ಹಣ್ಣಿನ ರಸ ಹಾಕಿ ಈ ಸಾರನ್ನು ಚೆನ್ನಾಗಿ ಕುದಿಸಬೇಕು.
* ನಂತರ ಫ್ರೈ ಮಾಡಿದ ಪ್ರಾನ್ಸ್ ಹಾಕಿ 5-8 ನಿಮಿಷ ಕುದಿಸಿದರೆ ರುಚಿಕರವಾದ ಪ್ರಾನ್ ಗ್ರೀನ್ ಕರಿ ರೆಡಿ.



Click it and Unblock the Notifications
