Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾವ್..! ಸ್ವಾದದ ಘಮಲನ್ನು ಹೆಚ್ಚಿಸುವ ಮೊಟ್ಟೆಯ ರೆಸಿಪಿ
ಒಂದು ವೇಳೆ ನಿಮ್ಮ ಬಳಿ ತಯಾರು ಮಾಡಿದ ಅನ್ನ ಅಥವಾ ರೋಟಿ ಇದ್ದಲ್ಲಿ, ಅದಕ್ಕಾಗಿ ನೀವು ಯಾವುದಾದರು ಖಾರವಾದ ಮತ್ತು ಹುಳಿಯಿಂದ ಕೂಡಿದ ಗ್ರೇವಿಯನ್ನು ಮಾಡಬೇಕು ಎಂದುಕೊಂಡಲ್ಲಿ, ಅದಕ್ಕೆ ಖಾರವಾದ ಗಾರ್ಲಿಕ್ ಎಗ್ (ಮೊಟ್ಟೆ) ರೆಸಿಪಿಯನ್ನು ಮಾಡಬಹುದು. ಇದನ್ನು ಇಂದು ಮಧ್ಯಾಹ್ನ ತಯಾರಿಸಿ ನೋಡಿ. ಇದನ್ನು ತಯಾರು ಮಾಡಲು ನಿಮಗೆ ಮುಖ್ಯವಾಗಿ ಮೊಟ್ಟೆ ಮತ್ತು ಬೆಳ್ಳುಳ್ಳಿ ಬೇಕಾಗುತ್ತದೆ.
ಒಂದು ವೇಳೆ ನಿಮಗೆ ಬೆಳ್ಳುಳ್ಳಿ ಇಷ್ಟವಿಲ್ಲದಿದ್ದಲ್ಲಿ ನೀವು ಈ ರೆಸಿಪಿಯ ರುಚಿಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಈ ರುಚಿಕರವಾದ ಗಾರ್ಲಿಕ್ ಎಗ್ ರೆಸಿಪಿಯು ಪಲಾವ್ ಅಥವಾ ಫುಲ್ಕಾದ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಅತ್ಯಂತ ಮುಖ್ಯವಾದ ಅಂಶವೆಂದರೆ ಇದಕ್ಕೆ ಬೇಯಿಸಿದ ಮೊಟ್ಟೆಗಳನ್ನು ಹಾಕಲಾಗುತ್ತದೆ. ಅವುಗಳು ತುಂಬಾ ರುಚಿಕರವಾಗಿರುತ್ತವೆ. ಜೊತೆಗೆ ಆರೋಗ್ಯಕರವಾಗಿ ಸಹ ಇರುತ್ತವೆ. ಬೆಂದ ಮೊಟ್ಟೆಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತವೆ. ಇದು ನಿಮ್ಮ ಮೂಳೆಗಳು ಮತ್ತು ಹಲ್ಲುಗಳಿಗೆ ಒಳ್ಳೆಯದು. ಇವುಗಳನ್ನು ಈ ಮಧ್ಯಾಹ್ನ ಸೇವಿಸುವುದರಿಂದ ನಿಮಗೆ ರುಚಿಯ ಜೊತೆಗೆ ಆರೋಗ್ಯಕರ ಪ್ರಯೋಜನಗಳು ಉಚಿತವಾಗಿ ದೊರೆಯುತ್ತವೆ. ಬನ್ನಿ ಇದನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ. ಹೊಸ ರುಚಿಯಲ್ಲಿ 6 ಬಗೆಯ ಮೊಟ್ಟೆಯ ರೆಸಿಪಿ

ನಾಲ್ವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು
ಅಗತ್ಯವಾದ ಪದಾರ್ಥಗಳು
*ಮೊಟ್ಟೆಗಳು - 4 ( ಹಳದಿ ರಹಿತ, ಬೇಯಿಸದ ಮತ್ತು ಕತ್ತರಿಸದಂತಹುದು)
*ಬೆಳ್ಳುಳ್ಳಿ - 10 ತುಂಡು (ಸುಲಿದ ಮತ್ತು ಸ್ವಚ್ಛಗೊಳಿಸಿದಂತಹುದು)
*ಎಣ್ಣೆ - 2 ಟೀ.ಚಮಚ
*ಅರಿಶಿನ ಪುಡಿ - 1 ಟೀ.ಚಮಚ
*ಕೊತ್ತಂಬರಿ ಸೊಪ್ಪು - 2 ಟೀ.ಚಮಚ(ಕತ್ತರಿಸಿದಂತಹುದು)
*ಖಾರದ ಪುಡಿ - 2 ಟೀ.ಚಮಚ
*ಜೀರಿಗೆ ಪುಡಿ - 2 ಟೀ.ಚಮಚ
ಲಿಂಬೆರಸ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಸಾಸಿವೆ - 1 ಟೀ.ಚಮಚ
*ಜೀರಿಗೆ - 1 ಟೀ.ಚಮಚ
*ಕೆಂಪು ಮೆಣಸಿನಕಾಯಿ - 3
*ಮೆಣಸಿನ ಪುಡಿ - ½ ಟೀ.ಚಮಚ
*ಕರಿಬೇವು ಸೊಪ್ಪು- 4 10 ಬಗೆಯ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ
ತಯಾರಿಸುವ ವಿಧಾನ
*ತಳ ಆಳವಿರುವ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಿಸಿ. ಇದು ಬಿಸಿಯಾದ ಮೇಲೆ ಅದಕ್ಕೆ ಬೆಳ್ಳುಳ್ಳಿಗಳನ್ನು ಜಜ್ಜಿ ಹಾಕಿ. ಇದನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ.
*ಇನ್ನು ಇದಕ್ಕೆ ಅರಿಶಿನ ಪುಡಿಯನ್ನು ಹಾಕಿ ಹುರಿಯಿರಿ. ಇದರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ, ಚೆನ್ನಾಗಿ ಕಲೆಸಿ ಕೊಡಿ.
*ತದನಂತರ ಬಾಣಲೆಗೆ ಖಾರದ ಪುಡಿ ಮತ್ತು ಜೀರಿಗೆ ಪುಡಿಯನ್ನು ಹಾಕಿ. ಬೆಳ್ಳುಳ್ಳಿಯ ಜೊತೆಗೆ ಇದನ್ನು ಎಣ್ಣೆಯಲ್ಲಿ ಕರಿದುಕೊಳ್ಳಿ.
*ಇದರ ಮೇಲೆ ಲಿಂಬೆಯ ರಸವನ್ನು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
*ಇನ್ನು ಈ ಪದಾರ್ಥಗಳೆಲ್ಲವು ಬಾಣಲೆಯಲ್ಲಿ ಚೆನ್ನಾಗಿ ಬೇಯುವವರೆಗೆ ಕಾಯಿರಿ. ಇದಾದ ಮೇಲೆ ಗ್ಯಾಸ್‌ನ ಸ್ಟೌವ್ ಆರಿಸಿ. ಬಾಣಲೆಯನ್ನು ಒಲೆಯ ಮೇಲಿನಿಂದ ಕೆಳಗಿಳಿಸಿರಿ, ಹಾಗೂ ಬೇರೊಂದು ಪಾತ್ರಗೆ ವರ್ಗಾಹಿಸಿ
*ಇನ್ನು ಇನ್ನೊಂದು ಬಾಣಲೆಯಲ್ಲಿ ಸಾಸಿವೆ ಬೀಜಗಳನ್ನು ಹಾಕಿಕೊಳ್ಳಿ, ಒಗ್ಗರೆಣ್ಣೆಯ ರೀತಿ ತಯಾರಿಸಿಕೊಳ್ಳಿ. ಇದಕ್ಕೆ ಜೀರಿಗೆಯನ್ನು ಸಹ ಹಾಕಿ.
*ಇದನ್ನು ಬೇಯಿಸುವಾಗ ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ, ಹುರಿದುಕೊಳ್ಳಿ.
*ಇದಕ್ಕೆ ಕರಿಮೆಣಸಿನ ಪುಡಿ ಮತ್ತು ಕರಿಬೇವು ಸೊಪ್ಪನ್ನು ಹಾಕಿ. ಎಣ್ಣೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಇದಾದ ಮೇಲೆ ಈ ಪದಾರ್ಥಗಳನ್ನು ಮೊಟ್ಟೆಯಿರುವ ಬಟ್ಟಲಿಗೆ ಹಾಕಿಕೊಳ್ಳಿ, ಚೆನ್ನಾಗಿ ಕಲೆಸಿಕೊಡಿ.
ಪೋಷಕಾಂಶದ ಸಲಹೆ
ಮೊಟ್ಟೆಗಳು ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಇವುಗಳು ನಿಮ್ಮ ಹಲ್ಲು ಮತ್ತು ಮೂಳೆಗಳಿಗೆ ತುಂಬಾ ಉಪಯೋಗಕಾರಿ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮೊಟ್ಟೆಯನ್ನು ಪ್ರತಿದಿನ ನೀಡುವುದರಿಂದ ಒಳ್ಳೆಯ ಆರೋಗ್ಯವನ್ನು ಕಾಣಬಹುದು.
ಸಲಹೆ
ಈ ಮೊಟ್ಟೆರೆಸಿಪಿಯನ್ನು ಜಾಸ್ತಿ ಕಾಯಿಸಬೇಡಿ. ಇದರಿಂದ ಅದರ ರುಚಿ ಹಾಳಾಗುತ್ತದೆ.



Click it and Unblock the Notifications
