Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ಎಗ್ ಸ್ಯಾಂಡ್ ವಿಚ್- ಆರೋಗ್ಯಕರ ತಿಂಡಿ
ಬೆಳಗ್ಗೆ ಸ್ವಲ್ಪ ತಡವಾಗಿ ಎದ್ದರೆ ಆಫೀಸ್ ಗೆ ಹೊತ್ತಾಯಿತು, ಬ್ರೇಕ್ ಫಾಸ್ಟ್ ತಯಾರಿಸಲು ಸಮಯವಿಲ್ಲ ಎಂದು ಒದ್ದಾಡುತ್ತೇವೆ. ಆದರೆ ಹೊರಗಡೆ ತಿನ್ನುವ ಅಂದರೆ ಹೋಟೆಲ್ ಹೋಗಿ ಆರ್ಡರ್ ಕೊಟ್ಟು ತಿಂಡಿ ಸಿಗಲು 5-10 ನಿಮಿಷ ಕಾಯಬೇಕು. ಇಷ್ಟೆಲ್ಲಾ ಕಷ್ಟಪಡುವ ಬದಲು ಎಗ್ ಸ್ಯಾಂಡ್ ವಿಚ್ ಅನ್ನು ಹತ್ತೇ ನಿಮಿಷದಲ್ಲಿ ತಯಾರಿಸಬಹುದು. ಎಗ್ ಸ್ಯಾಂಡ್ ವಿಚ್ ಮಾಡುವ ವಿಧಾನ ನೋಡಿ ಇಲ್ಲಿದೆ.
ಸಲಹೆ: ಗೋಧಿ ಬ್ರೆಡ್ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಕಟ್ಟುನಿಟ್ಟಿನ ಡಯಟ್ ಮಾಡುವವರು ಕೂಡ ಈ ವಿಧಾನವನ್ನು ಪಾಲಿಸಬಹುದು.

ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ 4
ಬ್ರೆಡ್ ಚೂರು 4
ಟೊಮೆಟೊ 1
ಈರುಳ್ಳಿ 2 (ಕತ್ತರಿಸಿದ್ದು)
ಹಸಿಮೆಣಸಿನ ಕಾಯಿ 2
ಕೊತ್ತಂಬರಿ ಸೊಪ್ಪು ಅರ್ಧ ಕಪ್
ಹಾಲು 2 ಚಮಚ
ಎಣ್ಣೆ 1 ಚಮಚ
ಬೆಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಮೊಟ್ಟೆಯನ್ನು ಒಡೆದು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಹಾಲು ಹಾಕಿ ಮಿಶ್ರಣ ಮಾಡಿ ಚೆನ್ನಾಗಿ ಕದಡಬೇಕು. ನಂತರ ಕತ್ತರಿಸಿದ ಹಸಿ ಮಣಸಿನ ಕಾಯಿ, ತುಂಬಾ ಚಿಕ್ಕದಾಗಿ ಕತ್ತರಿಸಿದ ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು ಹಾಕಿ ಮತ್ತೊಮ್ಮೆ ಚೆನ್ನಾಗಿ ಕದಡಬೇಕು.
2. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದಕ್ಕೆ ಕದಡಿದ ಮೊಟ್ಟೆಯ ಮಿಶ್ರಣವನ್ನು ಹಾಕಬೇಕು.
3. ಉರಿಯನ್ನು ಕಮ್ಮಿ ಮಾಡಿ ಎಗ್ ಫ್ರೈ ಮಾಎಬೇಕು. ಎಗ್ ಫ್ರೈ ಆದ ನಂತರ ಉರಿಯಿಂದ ತೆಗೆದು ಒಂದು ಬದಿಯಲ್ಲಿಡಬೇಕು.
4. ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಬೆಣ್ಣೆ ಸವರಿ ಮಧ್ಯದಲ್ಲಿ ಎಗ್ ಫ್ರೈ ಹಾಕಿ ಮತ್ತೊಂದು ಬ್ರೆಡ್ ಗೆ ಬೆಣ್ಣೆ ಸವರಿ ಎಗ್ ಫ್ರೈ ಮೇಲೆ ಇಡಬೇಕು. ಬ್ರೆಡ್ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ತೆಗೆದರೆ ಎಗ್ ಸ್ಯಾಂಡ್ ವಿಚ್ ರೆಡಿ.



Click it and Unblock the Notifications