For Quick Alerts
ALLOW NOTIFICATIONS  
For Daily Alerts

ಕ್ರಿಸ್ಮಸ್‌ ಪಾರ್ಟಿ ಸಂಭ್ರಮ ಹೆಚ್ಚಿಸಲು ನಾನ್‌ ಆಲ್ಕೋಹಾಲ್‌ ವೈನ್‌ ಮಾಕ್ಟೇಲ್‌ ರೆಸಿಪಿ

Posted By:
|

ಇತ್ತೀಚಿನ ದಿನಗಳಲ್ಲಿ ನಾನ್‌ ಆಲ್ಕೋ ಹಾಲಿಕ್‌ ಡ್ರಿಂಕ್ಸ್‌ ತುಂಬಾನೇ ಜನಪ್ರಿಯವಾಗಿದೆ. ಈ ಕ್ರಿಸ್ಮಸ್‌ ಸಮಯದಲ್ಲಿ ವೈನ್‌, ಬ್ರಾಂಡಿ ಜೊತೆ ನಾನ್‌ ಆಲ್ಕೋಹಲ್‌ ಡ್ರಿಂಕ್ಸ್‌ಗೂ ತುಂಬಾನೇ ಬೇಡಿಕೆ ಇರುವುದರಿಂದ ನಾವಿಲ್ಲಿ ನಿಮಗೆ ವೈನ್‌ ಮಾಕ್ಟೇಲ್‌ ರೆಸಿಪಿ ನೀಡಿದ್ದೇವೆ.

Christmas Recipe

ನಾನ್‌ ಆಲ್ಕೋಹಾಲ್‌ ವೈನ್‌ ಮಾಕ್ಟೇಲ್‌ ಅನ್ನು ಕ್ರಿಸ್ಮಸ್‌ ಫ್ರೂಟ್‌ ಕೇಕ್‌ ಜೊತೆ ಸವಿಯಲು ತುಂಬಾ ನೇ ರುಚಿಯಾಗಿರುತ್ತೆ. ವೈನ್‌ ಮಾಕ್ಟೇಲ್ ಅನ್ನು ಬಿಸಿ ಬಿಸಿಯಾಗಿ ಸರ್ವ್ ಮಾಡಲಾಗುವುದು, ನೀವು ಬೇಕಾದರೆ ತಣ್ಣೆಯ ವೈನ್‌ ಮಾಕ್ಟೇಲ್‌ ಕೂಡ ಸರ್ವ್ ಮಾಡಬಹುದು, ಎರಡೂ ರುಚಿ ಚೆನ್ನಾಗಿರುತ್ತದೆ.

ಮಸಾಲೆ ಸಾಮಗ್ರಿ ಹಾಕಿ ಮಾಡುವ ಫ್ರೂಟ್‌ ಫ್ಲೇವರ್‌ ವೈನ್‌ ಮಾಕ್ಟೇಲ್‌ ರೆಸಿಪಿ ತಿಳಿಯೋಣ:

ಬೇಕಾಗುವ ಸಾಮಗ್ರಿ
ಕ್ರ್ಯಾನ್‌ಬೆರ್ರಿ ಜ್ಯೂಸ್‌
ಗ್ರೇಪ್‌ ಜ್ಯೂಸ್‌
ಆ್ಯಪಲ್ ಜ್ಯೂಸ್
ಆರೇಂಜ್‌ ತುಂಡುಗಳು
ಫ್ರೆಷ್‌ ಕ್ರ್ಯಾನ್‌ಬೆರ್ರಿ (ಚೆರ್ರಿ ಕೂಡ ಬಳಸಬಹುದು)
ಚಕ್ಕೆ
ನಕ್ಷತ್ರ ಮೊಗ್ಗು
ಲವಂಗ
ನಟ್‌ಮಗ್

ಮಾಡುವ ವಿಧಾನ
ಕ್ರ್ಯಾನ್‌ ಬೆರಿ ಜ್ಯೂಸ್‌, ಗ್ರೇಪ್‌ ಜ್ಯೂಸ್‌, ಆ್ಯಪಲ್ ಜ್ಯೂಸ್ ಮಿಕ್ಸ್ ಮಾಡಿ ಅದಕ್ಕೆ ಮಸಾಲೆ ಹಾಕಿ ಸಿಮ್‌ನಲ್ಲಿ ಕಾಯಿಸಿ
* ನಂತರ ಅದಕ್ಕೆ ಫ್ರೆಷ್‌ ಕ್ರ್ಯಾನ್‌ಬೆರ್ರಿ ಸೇರಿಸಿ, ಆರೇಂಜ್‌ ತುಂಡುಗಳಿಂದ ಅಥವಾ ಕ್ರ್ಯಾನ್ ಬೆರ್ರಿ, ಚೆರ್ರಿ ಇವುಗಳಿಂದ ಅಲಂಕರಿಸಿ ಬಿಸಿ ಬಿಸಿ ಸರ್ವ್ ಮಾಡಿ,

ಚಳಿಗಾಲದಲ್ಲಿ ಕ್ರಿಸ್ಮಸ್‌ ಹಬ್ಬವನ್ನು ಈ ಬೆಚ್ಚನೆ ಮಾಕ್ಟೇಲ್‌ ಜೊತೆ ಸಂಭ್ರಮಿಸಿ.
ಸಲಹೆ: ಕ್ರ್ಯಾನ್‌ ಬೆರ್ರಿ ಹಾಗೂ ಗ್ರೇಪ್‌ ಜ್ಯೂಸ್‌ ಕಾಂಬಿನೇಷನ್‌ ತುಂಬಾನೇ ರುಚಿಯಾಗಿರುತ್ತೆ, ನೀವು ಬೇಕಾದರೆ ನಿಮಗಿಷ್ಟವಾದ ಫ್ರೂಟ್‌ ಸೇರಿಸಬಹುದು. ಪೈನಾಪಲ್, ಇತರ ಫ್ರೂಟ್ಸ್ ಕೂಡ ಬಳಸಬಹುದು.

* ನೀವು ಮಾಕ್ಟೇಲ್‌ಗೆ ಬೇರೆ-ಬೇರೆ ಫ್ರೂಟ್‌ ಜ್ಯೂಸ್‌ ಸೇರಿಸಬಹುದು.
* ಚಕ್ಕೆ, ಲವಂಗ, ನಕ್ಷತ್ರ ಮೊಗ್ಗು ನಟ್‌ಮಗ್‌ ಇವುಗಳ ಬದಲಿಗೆ ನೀವು ಇಷ್ಟಪಡುವ ಇತರ ಮಸಾಲೆ ಬೇಕಾದರೂ ಸೇರಿಸಬಹುದು.

[ of 5 - Users]
X
Desktop Bottom Promotion