For Quick Alerts
ALLOW NOTIFICATIONS  
For Daily Alerts

ಭಾರತೀಯ ಶೈಲಿಯಲ್ಲಿ ಮ್ಯಾಕೋರೋನಿ ಪಾಸ್ತಾ ರೆಸಿಪಿ

Posted By:
|

ಪಾಸ್ತಾ ನಮ್ಮ ಭಾರತೀಯರ ಆಹಾರ ಅಲ್ಲ, ಆದರೆ ಅದು ಈಗ ಭಾರತೀಯರಿಗೆ ಚಿರಪರಿಚಿತ. ಮಕ್ಕಳು-ದೊಡ್ಡವರು ಎನ್ನದೆ ಎಲ್ಲರೂ ಪಾಸ್ತಾ ಇಷ್ಟ ಪಡುತ್ತಾರೆ.

Macaroni Pasta recipe

ಸಂಜೆ ಸ್ನ್ಯಾಕ್ಸ್‌ಗೆ, ಬೆಳಗ್ಗೆ ಬ್ರೇಕ್‌ ಫಾಸ್ಟ್‌ಗೆ ಇದನ್ನು ಮಾಡಿ ಸವಿಯಲು ಇಷ್ಟ ಪಡುತ್ತಾರೆ. ನಾವಿಲ್ಲಿ ಭಾರತೀಯ ಶೈಲಿಯಲ್ಲಿ ಪಾಸ್ತಾ ಮಾಡುವ ವಿಧಾನ ಹೇಳಿದ್ದೇವೆ ನೋಡಿ:

Indian Style Macaroni Pasta Recipe, ಮ್ಯಾಕೋರೋನಿ ಪಾಸ್ತಾ ರೆಸಿಪಿ
Indian Style Macaroni Pasta Recipe, ಮ್ಯಾಕೋರೋನಿ ಪಾಸ್ತಾ ರೆಸಿಪಿ
Prep Time
10 Mins
Cook Time
15M
Total Time
25 Mins

Recipe By: Reena TK

Recipe Type: Snacks

Serves: 2

Ingredients
  • ಬೇಕಾಗುವ ಸಾಮಗ್ರಿ

    ಪಾಸ್ತಾ ಬೇಯಿಸಲು

    1 ಕಪ್ ಮ್ಯಾಕೋರೋನಿ ಪಾಸ್ತಾ

    1 ಚಮಚ ಎಣ್ಣೆ

    ರುಚಿಗೆ ತಕ್ಕ ಉಪ್ಪು

    ಬೇಯಲು ತಕ್ಕ ನೀರು

    ಪಾಸ್ತಾ ತಯಾರಿಸಲು

    2 ಚಮಚ ಆಲೀವ್ ಎಣ್ಣೆ/ ಯಾವುದೇ ಅಡುಗೆ ಎಣ್ಣೆ

    2 ಎಸಳು ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)

    1/2 ಕ್ಯಾರೆಟ್ (ಚಿಕ್ಕದಾಗಿ ಹೆಚ್ಚಿದ್ದು

    ಅರ್ಧ ಚಮಚ ಕಾಶ್ಮೀರಿ ಮೆಣಸಿನ ಪುಡಿ

    ಅರ್ಧ ಚಮಚ ಆಮ್‌ ಚೂರ್(ಒಣ ಮಾವಿನಕಾಯಿ ಪುಡಿ0

    2 ಚಮಚ ಚೀಸ್

    ಸ್ವಲ್ಪ ಸ್ಪ್ರಿಂಗ್ ಆನಿಯನ್

Red Rice Kanda Poha
How to Prepare
  • ಮಾಡುವುದು ಹೇಗೆ?

    * ಮೊದಲಿಗೆ ಪಾತ್ರೆಗೆ ನೀರನ್ನು ಹಾಕಿ ಕುದಿಸಿ.

    * ನಂತರ ಅದಕ್ಕೆ ಮ್ಯಾಕೋರೋನ್ ಪಾಸ್ತಾ ಹಾಕಿ, ಜೊತೆಗೆ 1 ಚಮಚ ಎಣ್ಣೆ ಸೇರಿಸಿ.

    * 10 ನಿಮಿಷ ಬೇಯಿಸಿ (ಮಧ್ಯದಲ್ಲಿ ಒಂದೆರಡು ಬಾರಿ ಸೌಟ್‌ನಿಂದ ಆಡಿಸಿ).

    * ನೀವು ಬೇರೆ ಬ್ರ್ಯಾಂಡ್‌ ಪಾಸ್ತಾ ಬಳಸಿದರೆ ಅದಕ್ಕೆ ತಕ್ಕಂತೆ ಬೇಯಿಸಿ.

    * ಈಗ ಪಾಸ್ತಾದ ನೀರನ್ನು ಸೋಸಿ, ಪಾಸ್ತಾವನ್ನು ತಣ್ಣೀರಿನಲ್ಲಿ ಹಾಕಿಡಿ.

    * ಈಗ ದೊಡ್ಡ ಪ್ಯಾನ್‌ ತೆಗೆದು ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಬೆಳ್ಳುಳ್ಳಿ ಹಾಕಿ ಸ್ವಲ್ಪ ಆಡಿಸಿ, ನಂತರ ಈರುಳ್ಳಿ ಹಾಕಿ.

    * ಈಗ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಸೌಟ್‌ನಿಂದ ಆಡಿಸುತ್ತಾ ಬೇಯಿಸಿ.

    * ಈಗ ನಿಮಗೆ ಬೇಕಾದ ತರಕಾರಿ ಸೇರಿಸಿ (ಕ್ಯಾರೆಟ್, ಬ್ರೊಕೋಲಿ, ಕ್ಯಾಪ್ಸಿಕಂ....)

    * ನಂತರ ಸೌಟ್‌ನಿಂದ ಆಡಿಸಿ, ತರಕಾರಿ ಅರ್ಧ ಬೆಂದ ಮೇಲೆ, ಖಾರದ ಪುಡಿ, ಅರ್ಧ ಚಮಚ ಆಮ್‌ಚೂರ್ ಹಾಗೂ ರುಚಿಗೆ ತಕ್ಕ ಉಪ್ಪು ಸೇರಿಸಿ.

    * ಮಸಾಲೆ ಜೊತೆಗೆ ತರಕಾರಿ ಬೇಯಲಿ.

    * ತರಕಾರಿ ಬೆಂದ ಮೇಲೆ, ಬೇಯಿಸಿದ ಪಾಸ್ತಾ ಸೇರಿಸಿ.

    * ಈಗ ಮಸಾಲ ಸಾಸ್ ನಿಧಾನಕ್ಕೆ ಹಾಕಿ ಮಿಕ್ಸ್ ಮಾಡಿ.

    * ಈಗ ಅವುಗಳನ್ನು ಸರ್ವ್ ಮಾಡುವ ಬೌಲ್‌ಗೆ ಹಾಕಿ ಅದರ ಮೇಲೆ ತುರಿದ ಚೀಸ್ ಹಾಕಿದರೆ ಮ್ಯಾಕೋರೋನ್ ಪಾಸ್ತಾ ರೆಡಿ.

Instructions
  • * ಪಾಸ್ತಾವನ್ನು ತುಂಬಾ ಬೇಯಿಸಬೇಡಿ, ಅಧಿಕ ಬೆಂದರೆ ಅಂಟು-ಅಂಟಾಗುವುದು.* * ಬೇಯಿಸಿ ಪಾಸ್ತಾವನ್ನು ತಣ್ಣನೆಯ ನೀರಿನಲ್ಲಿ (ಫ್ರಿಡ್ಜ್‌ನಲ್ಲಿಟ್ಟ ನೀರು) ಹಾಕಿಟ್ಟರೆ ಇನ್ನೂ ಒಳ್ಳೆಯದು. * ರುಚಿಗೆ ತಕ್ಕಂತೆ ಖಾರ ಸೇರಿಸಿ. * ಬಿಸಿ ಬಿಸಿ ಇರುವಾಗಲೇ ಸರ್ವ್ ಮಾಡಿ.
Nutritional Information
  • ಪ್ರೊಟೀನ್ - 8 ಗ್ರಾಂ
  • ಕಾರ್ಬ್ಸ್ - 43ಗ್ರಾಂ
[ 4 of 5 - 87 Users]
X
Desktop Bottom Promotion