Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೇಸಿಗೆಯ ಬಿಸಿ ಆರಿಸಲು ತಂಪು ಪಾನಕ
ಅಮೃತಮಯಿ ಪಾನಕ
ಹಳೇ ಹುಣಸೇಹಣ್ಣನ್ನು(ನಿಂಬೆ ಗಾತ್ರದಷ್ಟು) ಒಂದು ಲೋಟ ನೀರಿನಲ್ಲಿ ಹತ್ತು ನಿಮಿಷ ನೆನೆಸಿ.ಚೆನ್ನಾಗಿ ಕಿವುಚಿ ಚರಟ ತೆಗೆದು ಎಸಿಯಿರಿ. ಅದಕ್ಕೆ ಸಾಕಷ್ಟು ಬೆಲ್ಲ, ತುಸು ಕಾಳುಮೆಣಸಿನಪುಡಿ, ಚಿಟಿಕೆ ಉಪ್ಪು ಸೇರಿಸಿ, ಇದಕ್ಕೆ ಎರಡು ಲೋಟ ನೀರು, ಮಂಜುಗೆಡ್ಡೆ ಚೂರು ಸೇರಿಸಿ
ಸೌತೆ ತಿರುಳಿನ ಪಾನಕ
ಸೌತೆಕಾಯಿ ಅಥವಾ ಹಣ್ಣಿನ ಸಿಪ್ಪೆ ಹಾಗೂ ಬೀಜ ಗಳನ್ನು ತೆಗೆದು ತಿರುಳನ್ನು ಮಾತ್ರ ಚೆನ್ನಾಗಿ ತುರಿಯಿರಿ. ಇದಕ್ಕೆ ಸ್ವಲ್ಪ ಕಾಯಿತುರಿ ಹಾಗೂ ಬೆಲ್ಲ ಹಾಕಿ ರುಬ್ಬಿ, ಏಲಕ್ಕಿ ಪುಡಿ, ಮಂಜುಗೆಡ್ಡೆ ಚೂರು ಹಾಕಿ ಕುಡಿಯಿರಿ.
ಹೆಸರುಕಾಳು ಪಾನಕ
ಅರ್ಧ ಕಪ್ ಹೆಸರುಕಾಳನ್ನು ರಾತ್ರಿಯೇ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದಕ್ಕೆ ಸ್ವಲ್ಪ ತೆಂಗಿನ ತುರಿ. ಸಿಹಿಗೆ ಬೇಕಾದಷ್ಟು ಬೆಲ್ಲ, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿ ತೀರಾ ತೆಳುವಾಗದಷ್ಟು ಕುಡಿಯಲು ಹಿತವಾಗುವಂತೆ ನೀರು ಸೇರಿಸಿ, ಏಲಕ್ಕಿ ಪುಡಿ ಹಾಗೂ ಮಂಜುಗೆಡ್ಡೆ ಚೂರು ಹಾಕಿ.
ಗಸಗಸೆ ಪಾನಕ
ಒಂದು ಕಪ್ ಗಸಗಸೆ ಹುರಿದು, ತೊಳೆದು, ಸ್ವಲ್ಪ ತೆಂಗಿನ ತುರಿ ನಾಯವಾಗಿ ರುಬ್ಬಿ ಬೇಕಾದಷ್ಟು ನೀರು ಸೇರಿಸಿ. ರುಚಿಗೆ ಬೆಲ್ಲ, ಸುವಾಸನೆಗೆ ಏಲಕ್ಕಿ ಪುಡಿ ಸೇರಿಸಿ. ಬೇಕಾದರೆ ಫ್ರೀಜ್ ನಲ್ಲಿಟ್ಟು ಅಥವಾ ಮಂಜುಗೆಡ್ಡೆ ಚೂರು ಸೇರಿಸಿ ಕುಡಿಯಬಹುದು. ಗಸಗಸೆ ಹುರಿಯುವ ಬದಲು 10-15ನೀರಿನಲ್ಲಿ ನೆನಸಿ, ಅದರಿಂದಲೂ ಪಾನಕ ತಯಾರಿಸಬಹುದು.
ರಾಗಿ ಪಾನಕ
ಒಂದು ಕಪ್ ರಾಗಿಯನ್ನು 10 ನಿಮಿಷ ನೀರಲ್ಲಿ ನೆನಸಿ, ತೊಳೆದು ರುಬ್ಬಿ, ಸೋಸಿ, ಬೆಲ್ಲ ಏಲಕ್ಕಿ ಪುಡಿ ಸೇರಿಸಿ.ಕುಡಿಯಿರಿ.
(ದಟ್ಸ್ ಕನ್ನಡಪಾಕಶಾಲೆ)



Click it and Unblock the Notifications
