Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಚಳಿಗಾಲದ ಸೊಗಡು ಅವರೆಕಾಳಿನ ಜನ್ಮ ರಹಸ್ಯ
ಭಾರತದಲ್ಲಿ ಜನಿಸಿ ಏಷ್ಯಾ ಖಂಡದ ಇತರ ಭಾಗಗಳು, ಆಫ್ರಿಕಾ, ಅಮೇರಿಕಾಗಳಲ್ಲೂ ಅವರೇ ಕಾಯಿ ಬಳಕೆಯಲ್ಲಿದೆ. ಇದು ಪೊದೆಯಂತೆ ಚಿಕ್ಕ ಗಿಡವಾಗಿ ಬೆಳೆಯುವ ವಿಧಕ್ಕೆ ದಾಲಿಖಾಸ್ ಲ್ಯಾಬ್ ಲ್ಯಾಬ್ ತಳಿ ರಿಗ್ನೋಸಸ್ ಎಂದೂ, ಬಳ್ಳಿಯಂತೆ ಚಪ್ಪರದವರೆಗೆ ಹಬ್ಬುವ ತಳಿಗೆ ದಾಲಿಖಾಸ್ ಲ್ಯಾಬ್ ಲ್ಯಾಬ್ ಟಿಪಿಕಸ್ ಎಂದೂ ಶಾಸ್ತ್ರೀಯ ಹೆಸರಿದೆ.
ಭಾರತದಲ್ಲಿರುವ ಅವರೆ ವಿಧಗಳು ಅನೇಕ. ಒಂದಕ್ಕೊಂದು ಹೋಲಿಕೆ ಇರುವುದರಿಂದ ಗುರುತಿಸುವಲ್ಲಿ ಸಂಕೀರ್ಣತೆ ಬಹಳ. ಈ ಸಸ್ಯದ ಬೇರುಗಳು ಅತಿಸಾರ ಭೇದಿ, ಅಪ್ತಾಲ್ಮಿಯಾ ಮತ್ತು ಚರ್ಮ ರೋಗ ನಿವಾರಣೆಗೆ ಉಪಯೋಗಕಾರಿ. ಬೀಜಗಳ ಕಷಾಯವು ವಾಯುವಿಗೆ ಒಳ್ಳೆಯದು. ಅನೇಕ ಕಡೆ ಇದನ್ನು ಮಣ್ಣು ಸುರಕ್ಷಿತ ಬೆಳೆಯಾಗಿ ಮತ್ತು ಹಸಿರೆಲೆ ಗೊಬ್ಬರಕ್ಕಾಗಿಯೂ ಬೆಳೆಸುತ್ತಿದ್ದಾರೆ.
100 ಗ್ರಾಂ ಅವರೇ ಕಾಳಿನಲ್ಲಿರುವ ಪೋಷಕಾಂಶ ಹೀಗಿದೆ : ಪಿಷ್ಟ 60.1೧ ಗ್ರಾಂ, ಕಬ್ಬಿಣ 520 ಎಂ.ಸಿ.ಜಿ., ಸಸಾರಜನಕ 24.9 ಗ್ರಾಂ, ನಯಾಸಿಸ್ 1.8 ಮಿ. ಗ್ರಾಂ, ಕೊಬ್ಬು 0.8 ಗ್ರಾಂ ಪೊಟ್ಯಾಷಿಯಂ 402 ಮಿ. ಗ್ರಾಂ, ಸುಣ್ಣ 70 ಮಿ.ಗ್ರಾಂ, ಸೋಡಿಯಂ 89 ಮಿ. ಗ್ರಾಂ., ರಂಜಕ 455 ಮಿ. ಗ್ರಾಂ.
ಔಷಧೀಯ ಗುಣಗಳು: ಇದು ಉತ್ತಮ ಪ್ರಮಾಣದ ಅಮೈನೋ ಆಮ್ಲಗಳನ್ನು ಒಳಗೊಂಡಿದೆ. ಇದರಲ್ಲಿರುವ ಪಿಷ್ಟದ ಪ್ರಮಾಣ ಗಮನಿಸಿದರೆ ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುವುದಕ್ಕಾಗಿ ಸೃಷ್ಟಿಯಾದಂತಿದೆ. ಈ ಕಾಯಿ ಸಮೃದ್ಧಿಯಾಗಿ ದೊರೆತರೆ ಚಳಿಗಾಲದಲ್ಲಿ ಬೇರೆ ಯಾವ ತರಕಾರಿಯೂ ಇಚ್ಛೆಯಾಗದು. ಇದರಲ್ಲಿರುವ ಪೋಷಕಾಂಶಗಳಿಂದ ರಕ್ತ ಪುಷ್ಟಿಯಾಗಿ ದೇಹದ ತೂಕ ಹೆಚ್ಚುತ್ತದೆ. ಇದರ ಸಿಪ್ಪೆಯಲ್ಲಿರುವ ಸೆಲ್ಯುಲೋಸ್
ಕಾಳಿನಿಂದಾಗುವ ಮಲಬದ್ಧತೆ ಮತ್ತು ಅಜೀರ್ಣಗಳನ್ನು ನಿವಾರಣೆ ಮಾಡುತ್ತದೆ.
ನಾವು ನಾಲಿಗೆಗೆ ದಾಸರಾದಂತೆ ಹೊಸ ಹೊಸತನ್ನು ಕಂಡು ಕೊಂಡಿದ್ದೇವೆ. ಇದರಲ್ಲಿ ಒಂದು ಹಿಸುಕು ಬೇಳೆ. ಅವರೇಕಾಯಿ ಬಳಸಿ ಹಿಚುಕಿದ ಬೇಳೆ ಹುಳಿ ತಿನ್ನುವುದು ಚಳಿಗಾಲದಲ್ಲಿ ಮಾಮೂಲಿ. ಆದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಅಡುಗೆಯಲ್ಲ. ಕೆಲವರಿಗೆ ಅವರೇ ಕಾಯಿ ಸೊಗಡು ಸೋಕಿದರೆ ಚರ್ಮ ಕೆರಳುತ್ತದೆ. ಅಂತಹವರು ಇದನ್ನು ಬಿಡಿಸದಿರುವುದೇ ಲೇಸು.
ಉಸುಳಿ , ಸಾರು, ಹುಳಿ, ಕೂಟು, ಇಡ್ಲಿ, ಉಪ್ಪಿಟ್ಟು, ರೊಟ್ಟಿ, ಚಕ್ಕುಲಿ, ಸೊಪ್ಪು ಕಾಳು ಸೇರಿಸಿ ಬಸಿದ ಸಾರು, ಮಸೊಪ್ಪಿನಲ್ಲಿ ಸೊಪ್ಪು ಅರೆದ ಮೇಲೆ ಬೇಯಿಸಿದ ಕಾಳು, ಹಿಸುಕಿದ ಅವರೇ ಕಾಳು, ಮಸಾಲೆ ಹಾಕಿದ ಬೇಳೆ ಇವೆಲ್ಲಾ ಅವರೆಯ ಸ್ಪೆಷಲ್ ಐಟಂಗಳು. ಡಿಸೆಂಬರ್ ಕೊನೆಗೆ ಬೆಂಗಳೂರಿನ ಬನಶಂಕರಿ, ಗಾಂಧಿಬಜಾರ್, ವಿವಿಪುರಂ, ಮಲ್ಲೇಶ್ವರದಲ್ಲಿ "ಅವರೇಬೇಳೆ ಮೇಳ" ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ.



Click it and Unblock the Notifications
