For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ಸ್ನ್ಯಾಕ್ಸ್ ಕಾರ್ನ್-ಚೀಸ್‌ ಬಾಲ್ ರೆಸಿಪಿ

Posted By:
|

ಕಾರ್ನ್ ಚೀಸ್‌ ಬಾಲ್ ಸ್ನ್ಯಾಕ್ಸ್ ಎಂದಾದರೂ ಸವಿದಿದ್ದೀರಾ, ಇದ ಒಂದು ತುಂಡು ತೆಗೆದು ಬಾಯಿಗೆ ಹಾಕಿದರೆ ಕಾರ್ನ್, ಚೀಸ್‌ ಕಾಂಬಿನೇಷನ್‌ ಟೇಸ್ಟ್ ಆಹಾ... ಸೂಪರ್ ಆಗಿರುತ್ತೆ. ನೀವು ಇದುವರೆಗೆ ತಿಂದಿಲ್ಲ ಅಂದರೂ ಪರ್ವಾಗಿಲ್ಲ, ನೀವು ಈ ರೆಸಿಪಿ ಟ್ರೈ ಮಾಡಿ ನೋಡಿ. ಖಂಡಿತ ತುಂಬಾ ಇಷ್ಟಪಟ್ಟು ಸವಿಯುವಿರಿ. ಇನ್ನು ಮಕ್ಕಳಿಗಂತೂ ತುಂಬಾನೇ ಇಷ್ಟವಾಗುವುದು.

corn cheese ball recipe

ಬನ್ನಿ ಕಾರ್ನ್ ಚೀಸ್ ಬಾಲ್ ಮಾಡುವುದು ಹೇಗೆ ಎಂದು ನೋಡೋಣ:

Corn Cheese Ball Recipe , ಕಾರ್ನ್ ಚೀಸ್‌ ಬಾಲ್ ರೆಸಿಪಿ
Corn Cheese Ball Recipe , ಕಾರ್ನ್ ಚೀಸ್‌ ಬಾಲ್ ರೆಸಿಪಿ
Prep Time
20 Mins
Cook Time
10M
Total Time
30 Mins

Recipe By: Reena TK

Recipe Type: snacks

Serves: 2

Ingredients
  • ಬೇಕಾಗುವ ಸಾಮಗ್ರಿ

    ಜೋಳ 1

    ಆಲೂಗಡ್ಡೆ 1

    ಚೀಸ್ 50ಗ್ರಾಂ

    ಉಪ್ಪು (ರುಚಿಗೆ ತಕ್ಕಷ್ಟು)

    ಸ್ವಲ್ಪ ಕಾಳು ಮೆಣಸಿನ ಪುಡಿ

    ಒಣ ತೊಳಸಿ ಎಲೆ 1/2 ಚಮಚ

    ಒರೆಗ್ನೋ 1/2 ಚಮಚ

    1/2 ಚಮಚ ಬೆಳ್ಳುಳ್ಳಿ ಪೇಸ್ಟ್

Red Rice Kanda Poha
How to Prepare
  • ಮಾಡುವ ವಿಧಾನ:

    * ಮೊದಲಿಗೆ 1 ದೊಡ್ಡ ಜೋಳ, 1 ದೊಡ್ಡ ಆಲೂಗಡ್ಡೆ ಬೇಯಿಸಿ.

    * ನಂತರ ತಣ್ಣಗಾದ ಮೇಲೆ ಆಲೂಗಡ್ಡೆಯ ಸಿಪ್ಪೆ ಬಿಡಿಸಿ, ಜೋಳವನ್ನು ಬಿಡಿಸಿ ಒಂದು ಬೌಲ್‌ನಲ್ಲಿ ಹಾಕಿ ಎರಡನ್ನೂ ಮಿಕ್ಸ್ ಮಾಡಿ.

    * ಈಗ 50 ಗ್ರಾಂ ಚೀಸ್‌ ಅನ್ನು ತುರಿದು ತಟ್ಟೆಯಲ್ಲಿ ಹಾಕಿಡಿ.

    * ಈಗ 1/2 ಚಮಚ ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಕರಿಮೆಣಸಿನ ಪುಡಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಚೀಸ್‌ನಲ್ಲಿಯೂ ಉಪ್ಪು ಇರುವುದರಿಂದ ಉಪ್ಪು ಸ್ವಲ್ಪ ಇರಲಿ,

    * ನಂತರ ಚೆನ್ನಾಗಿ ಮಿಕ್ಸ್ ಮಾಡಿ, ನಂತರ 1/2 ಚಮಚ ಒಣ ತೊಳಸಿ, 1/2 ಚಮಚ ಒರೆಗ್ನೋ , 4 ಚಮಚ ಮೈದಾ ಹಿಟ್ಟು ಹಾಕಿ ಮಿಕ್ಸ್ ಮಾಡಿ.

    * ಉಪ್ಪು ಸರಿಯಾಗಿದೆಯೇ ನೋಡಿ.

    * ನಂತರ ಅವುಗಳನ್ನು ಉಂಡೆ ಕಟ್ಟಿ.

    * ಈಗ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ ಕಾರ್ನ್‌-ಚೀಸ್ ಬಾಲ್‌ ಹಾಕಿ ಕರಿಯಿರಿ.

    * ಉಂಡೆ ಕಂದು ಬಣ್ಣಕ್ಕೆ ಬಂದಾಗ ಎಣ್ಣೆಯಿಂದ ತೆಗೆಯಿರಿ. ಈ ರೀತಿ ಎಲ್ಲಾ ಉಂಡೆಗಳನ್ನು ಕರಿಯಿರಿ.

Instructions
  • * ಕರಿಯುವಾಗ ಎಣ್ಣೆ ಸಾಧಾರಣ ಉರಿಯಲ್ಲಿ ಇರಲಿ. * ನೀವು ಬೇಕಿದ್ದರೆ ಇದನ್ನು ಮೈಕ್ರೋವೇವ್‌ನಲ್ಲಿ ಬೇಯಿಸಬಹುದು. *ರೆಡಿಯಾದ ಕಾರ್ನ್‌ ಚೀಸ್‌ ಬಾಲ್‌ ಅನ್ನು ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಿ.
Nutritional Information
  • ಸರ್ವ್ - 1 ಉಂಡೆ
  • ಕೊಬ್ಬು - 2ಗ್ರಾಂ
  • ಪ್ರೊಟೀನ್ - 1 ಗ್ರಾಂ
  • ಕಾರ್ಬ್ಸ್ - 2ಗ್ರಾಂ
  • ನಾರಿನಂಶ - 1ಗ್ರಾಂ
[ 3.5 of 5 - 58 Users]
X
Desktop Bottom Promotion