Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಚ್ಚಾ ಟೊಮೆಟೊ ಚಟ್ನಿ ರುಚಿ ಒಮ್ಮೆ ನೋಡಿ!

ಕಚ್ಚಾ ಟೊಮೆಟೊ ಚಟ್ನಿಗೆ ಬೇಕಾಗುವ ಸಾಮಾಗ್ರಿಗಳು:
* 2-3 ಕಚ್ಚಾ ಟೊಮೆಟೊ (ಕಾಯಿ ಟೊಮೆಟೊ)
* 15 ಹಸಿ ಮೆಣಸಿನ ಕಾಯಿ
* 1/2 ನಿಂಬೆ ಹಣ್ಣು
* 1/2 ಚಮಚ ಹುರಿದ ಎಳ್ಳಿನ ಪುಡಿ
* ಚಿಟಿಕೆಯಷ್ಟು ಇಂಗು
* 1/4 ಚಮಚ ಅರಿಶಿಣ ಪುಡಿ
* ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ: ಕರಿಬೇವಿನ ಎಲೆ
ಸಾಸಿವೆ
ಎಣ್ಣೆ
ತಯಾರಿಸುವ ವಿಧಾನ:
1. ಟೊಮೆಟೊ ಮತ್ತು ಹಸಿಮೆಣಸಿನಕಾಯಿಯನ್ನು ತೊಳೆದು ಕತ್ತರಿಸಿಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಹಾಕಿ ಮೆತ್ತಗಾಗುವರೆಗೆ ಹುರಿಯಬೇಕು. ನಂತರ ಸ್ವಲ್ಪ ಇಂಗು 1 ನಿಮಿಷದ ಬಳಿಕ ಉರಿಯಿಂದ ತೆಗೆಯಬೇಕು.
2. ಈಗ ಎಳ್ಳಿನ ಪುಡಿಯನ್ನು ತವಾದಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿ ಟೊಮೆಟೊ ಜೊತೆ ಹಾಕಬೇಕು.
3. ಈಗ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನಿಂಬೆರಸ ಹಿಂಡಿ ಮಿಕ್ಸಿಯಲ್ಲಿ ಆಡಿಸಬೇಕು.
4. ನಂತರ ಬಾಣಲೆಗೆ ಎಣ್ಣೆ ಹಾಕಿ ಕರಿಬೇವಿನ ಎಲೆ ಮತ್ತು ಸಾಸಿವೆಯನ್ನು ಹಾಕಿ ಸಾಸಿವೆ ಚಟಾಪಟಾ ಶಬ್ದ ಬರುವಾಗ ಚಟ್ನಿಯನ್ನು ಸೇರಿಸಿ ಮಿಶ್ರ ಮಾಡಿ ಉರಿಯಿಂದ ಇಳಿಸಿದರೆ ರುಚಿಕರವಾದ ಕಚ್ಚಾ ಟೊಮೆಟೊ ಚಟ್ನಿ ರೆಡಿ.
ಈ ಚಟ್ನಿಯನ್ನು ಅನ್ನದ ಜೊತೆ, ಚಪಾತಿ ಜೊತೆ ಸವಿಯಲು ತುಂಬಾ ರುಚಿಕಕರವಾಗಿರುತ್ತದೆ. ಇದನ್ನು ತಯಾರಿಸಿದರೆ ಬೇಗನೆ ಹಾಳಾಗುವುದಿಲ್ಲ.



Click it and Unblock the Notifications
