Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರವೆ ದೋಸೆ ಮಾಡುವ ಶೈಲಿ ಗೊತ್ತಿದೆಯೇ?

ಬೇಕಾಗುವ ಸಾಮಾಗ್ರಿಗಳು:
* ಒಂದೂವರೆ ಕಪ್ ಸಣ್ಣ ರವೆ
* ಒಂದೂವರೆ ಕಪ್ ಅಕ್ಕಿ
* ಅರ್ಧ ಕಪ್ ಉದ್ದಿನ ಬೇಳೆ
* ಒಂದು ಕಪ್ ಹುಳಿ ಮೊಸರು
* ನಾಲ್ಕು ಆಲೂಗೆಡ್ಡೆ
* ಎರಡು ಈರುಳ್ಳಿ
* ಒಂದು ಚಮಚ ಸಾಸಿವೆ
* 1/4 ಚಮಚ ಅರಿಶಿಣ
* ಅರ್ಧ ಚಮಚ ಕೆಂಪು ಮೆಣಸಿನ ಪುಡಿ
* ಸ್ವಲ್ಪ ಕರಿಬೇವಿನ ಎಲೆ
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಎಣ್ಣೆ
ತಯಾರಿಸುವ ವಿಧಾನ:
1. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು.
2. ನಂತರ ಸ್ವಲ್ಪ ಉಪ್ಪು ಹಾಕಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನುಣ್ಣನೆ ಅರೆಯಬೇಕು.
3. ಸಣ್ಣ ರವೆಯನ್ನು ಮೊಸರಿನಲ್ಲಿ ಹಾಕಿ ಅರ್ಧ ಗಂಟೆ ಕಾಲ ಇಡಬೇಕು.
4. ನಂತರ ಮೊಸರಿನಲ್ಲಿ ಹಾಕಿದ್ದ ರವೆಗೆ ಅಕ್ಕಿ ಮತ್ತು ಉದ್ದಿನ ಬೇಳೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಿ 8 ಗಂಟೆಗಳ ಕಾಲ ಇಡಬೇಕು.
5. ನಂತರ ಆಲೂಗೆಡ್ಡೆಯನ್ನು ತುಂಬಾ ತೆಳ್ಳಗೆ, ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.
6. ಈರುಳ್ಳಿಯನ್ನು ಉದ್ದುದ್ದವಾಗಿ ಕತ್ತರಿಸಿ.
7. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಆಲೂಗೆಡ್ಡೆ ಹಾಕಿ 2 ನಿಮಿಷ ಹುರಿದು, ಅರಿಶಿಣ ಪುಡಿ, ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ನೀರು ಬೇಯಿಸಬೇಕು.
8. ನಂತರ ದೋಸೆ ತವಾವನ್ನು ಬಿಸಿ ಮಾಡಲು ಇಟ್ಟು ಒಂದು ಚಮಚ ಎಣ್ಣೆ ಹಾಕಿ ದೋಸೆಗೆ ಹುಯ್ಯಬೇಕು, ಹೊಟ್ಟು ಸ್ವಲ್ಪ ಬೆಂದಾಗ ಸ್ವಲ್ಪ ಆಲೂಗೆಡ್ಡೆ ಮಿಶ್ರಣ ಅದರ ಬೇಲೆ ಹಾಕಿ ಸೌಟ್ ನಿಂದ ಹರಡಿ, ದೋಸೆ ಬೆಂದಾಗ ತೆಗೆದರೆ ರುಚಿಯಾದ ರವೆ ದೋಸೆ ರೆಡಿ.
ಈ ರವೆ ದೋಸೆಗೆ ಸಾಂಬರ್ ಮತ್ತು ಚಟ್ನಿ ಬೆಸ್ಟ್ ಕಾಂಬಿನೇಷನ್.



Click it and Unblock the Notifications
