For Quick Alerts
ALLOW NOTIFICATIONS  
For Daily Alerts

ನಾಗರಪಂಚಮಿ ವಿಶೇಷ: ಘಮಘಮಿಸುವ ನುಚ್ಚಿನುಂಡೆ ರೆಸಿಪಿ

|

ಶ್ರಾವಣ ಮಾಸದ ಐದನೆಯ ದಿನ ಆಚರಿಸಲ್ಪಡುವ ನಾಗಪಂಚಮಿ ಅಥವಾ ನಾಗರಪಂಚಮಿ ಹಬ್ಬ ಈ ವರ್ಷ ಆಗಸ್ಟ್ 19ರ ಬುಧವಾರದಂದು ಬಂದಿದೆ. ಹಿಂದೂಗಳಿಗೆ ಪವಿತ್ರವಾದ ಈ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಇತರ ಹಬ್ಬಗಳಂತೆಯೇ ನಾಗರಪಂಚಮಿ ಹಬ್ಬವನ್ನು ಆಚರಿಸಲು ಕೆಲವು ಕಟ್ಟುನಿಟ್ಟಿನ ವಿಧಾನಗಳಿವೆ. ಪ್ರಾತಃಕಾಲ ಬೇಗನೇ ಎದ್ದು ತಲೆಸ್ನಾನ ತೆಗೆದುಕೊಳ್ಳುವುದು ಪ್ರಥಮ ಭಾಗ. ನಂತರ ಒದ್ದೆಬಟ್ಟೆಯನ್ನು ದೇಹಕ್ಕೆ ಸುತ್ತಿಕೊಂಡು ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಬೇಕು. ಬಳಿಕ ಅರಿಶಿನ ಮತ್ತು ಕುಂಕುಮದ ಅಭಿಷೇಕ ಮಾಡಬೇಕು.

ನಾಗರಪಂಚಮಿಯಂದು ಎಣ್ಣೆ ಬಳಸಿ ಮಾಡುವ ಯಾವುದೇ ಅಡುಗೆಗಳಿಗೆ ಅವಕಾಶವಿಲ್ಲ, ಎಣ್ಣೆ ಬಳಸದ ಕೆಲವು ನಿರ್ದಿಷ್ಟ ಅಡುಗೆಗಳನ್ನು ಮಾತ್ರ ಅಂದು ಮಾಡಬಹುದು. ಉದಾಹರಣೆಗೆ ಇಡ್ಲಿ, ಸಿಹಿಕಡುಬು, ಗಂಜಿ, ನುಚ್ಚಿನುಂಡೆ ಇತ್ಯಾದಿ. ಇಂದು ಸುಲಭವಾಗಿ ತಯಾರಿಸಬಹುದಾದ ನುಚ್ಚಿನುಂಡೆಯನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ; ನುಚ್ಚಿನುಂಡೆ - ಮಜ್ಜಿಗೆ ಹುಳಿ ಗಣನಾಯ್ಕ

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಹತ್ತು ನಿಮಿಷಗಳು

ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ತೊಗರಿ ಬೇಳೆ: ಎರಡು ಕಪ್ (ತಣ್ಣೀರಿನಲ್ಲಿ ಸುಮಾರು ನಾಲ್ಕರಿಂದ ಐದು ಗಂಟೆ ನೆನೆಸಿಟ್ಟಿದ್ದು)

*ಹೆಸರು ಬೇಳೆ: ಒಂದು ಕಪ್ (ತಣ್ಣೀರಿನಲ್ಲಿ ಸುಮಾರು ನಾಲ್ಕರಿಂದ ಐದು ಗಂಟೆ ನೆನೆಸಿಟ್ಟಿದ್ದು)

*ಕಡಲೆ ಬೇಳೆ : ಒಂದು ಕಪ್ (ತಣ್ಣೀರಿನಲ್ಲಿ ಸುಮಾರು ನಾಲ್ಕರಿಂದ ಐದು ಗಂಟೆ ನೆನೆಸಿಟ್ಟಿದ್ದು)

*ಪುದಿನಾ ಎಲೆಗಳು: ಒಂದು ಕಪ್

*ಕೊತ್ತಂಬರಿ ಎಲೆಗಳು: ಸುಮಾರು ಹತ್ತು ದಂಟು

*ಕಾಯಿತುರಿ: ಒಂದು ಕಪ್

*ಇಂಗು : ಚಿಟಿಕೆಯಷ್ಟು

*ಹಸಿಮೆಣಸು: ಐದರಿಂದ ಆರು

*ಬಾಳೆಯಲೆ : ಒಂದು (ಅಗಲವಾದದ್ದು)

*ತುಪ್ಪ: ಎರಡು ದೊಡ್ಡ ಚಮಚ

ಉಪ್ಪು: ರುಚಿಗನುಸಾರ

ಮಾಡುವ ವಿಧಾನ

1) ನೀರಿನಲ್ಲಿ ನೆನೆಸಿದ ಮೂರೂ ಬೇಳೆಗಳಿಂದ ನೀರು ಬಸಿದು ಮಿಕ್ಸಿಯಲ್ಲಿ ಹಾಕಿ. ಇದರೊಂದಿಗೆ ಪುದಿನಾ, ಕೊತ್ತಂಬರಿ, ಕಾಯಿತುರಿ, ಹಸಿಮೆಣಸು, ಉಪ್ಪು ಹಾಕಿ ಕಡೆಯಿರಿ.

2) ಇದು ತೀರಾ ನುಣ್ಣಗಾಗಬಾರದು, ರವೆಯ ಹದ ಬರುವಷ್ಟು ಮಾತ್ರ ಕಡೆಯಿರಿ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರು ಸೇರಿಸಿ. (ಹೆಚ್ಚು ನೀರು ಸೇರಿಸಿದರೆ ಉಂಡೆ ಕಟ್ಟಲು ಸಾಧ್ಯವಿಲ್ಲ)

3) ಬಳಿಕ ಇದನ್ನು ಕೈಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. (ದೊಡ್ಡ ಲಿಂಬೆ ಗಾತ್ರವಾದರೆ ಸಾಕು, ತೀರಾ ದೊಡ್ಡದಾದರೆ ಒಳಭಾಗ ಬೇಯುವುದಿಲ್ಲ)

4) ಕುಕ್ಕರ್ ನಲ್ಲಿ ನೀರು ಹಾಕಿ ಬಿಸಿ ಮಾಡಿ ಉಂಡೆ ಬೇಯಿಸಲು ಅಗತ್ಯವಿರುವ ಪಾತ್ರೆಯನ್ನು ಮಗುಚಿಡಿ.

5) ಬಾಳೆ ಎಲೆಯನ್ನು ಉಂಡೆ ಸುತ್ತುವಷ್ಟು ಅಗಲವಾಗಿ ಕತ್ತರಿಸಿ ಇದರ ಮೇಲೆ ತುಪ್ಪ ಸವರಿ.

6) ಎಲ್ಲಾ ಉಂಡೆಗಳನ್ನು ಹೀಗೇ ಬಾಳೆಯೆಲೆಯಲ್ಲಿ ಸುತ್ತಿ ಕುಕ್ಕರಿನೊಳಗಿನ ಪಾತ್ರೆಯ ಮೇಲೆ ಒಂದರ ಮೇಲೊಂದು ಬರವಂತೆ ಇರಿಸಿ. ಬಾಳೆಯ ಕಡೆಯ ಅಂಚು ಕೆಳಗಿರುವಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ಸುರುಳಿ ಬಿಚ್ಚಿಕೊಳ್ಳುತ್ತದೆ. (ಇದು ಕಿರಿಕಿರಿ ಎನ್ನಿಸಿದರೆ ಟೂಥ್ ಪಿಕ್ ಒಂದನ್ನು ಅರ್ಧ ಭಾಗ ಚುಚ್ಚುವಂತೆ ಚುಚ್ಚಬಹುದು, ಆದರೆ ಬೆಂದ ಮೇಲೆ ಮರೆಯದೇ ತೆಗೆಯಬೇಕು)

7) ಈಗ ಕುಕ್ಕರ್‌ನ ಮುಚ್ಚಳ ಮುಚ್ಚಿ, ಆದರೆ ಸೀಟಿ ಹಾಕಬೇಡಿ.

8) ಸುಮಾರು ಹತ್ತರಿಂದ ಹದಿನೈದು ನಿಮಿಷ ಕುಕ್ಕರ್‌ನಿಂದ ಹಬೆಹೊರಹೋಗಲಿ. ಬಳಿಕ ಕೆಳಗಿಳಿಸಿ.

9) ಬಿಸಿಬಿಸಿಯಿರುವಂತೆಯೇ ಮನೆಯವರಿಗೆ ಮತ್ತು ಅತಿಥಿಗಳಿಗೆ ಬಡಿಸಿ. ಇದು ತುಪ್ಪ ಮತ್ತು ಕಾಯಿಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

English summary

Nuchinunde Special For Nagarapanchami

Nagarapanchami is a festival, that falls on the fifth day of the shravana masa. This year it falls on 19th of August, wednesday. Nagarapanchami is a very scared festival for Hindu all over India. There are certain strict procedures that needs to be followed to perform the festival. So, today we shall learn how to prepare nuchinunde for nagarapanchami.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more