Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಇದು ಉಪ್ಪಿಟ್ಟನ್ನು ಗೇಲಿ ಮಾಡೋರಿಗೆ ಮಾತ್ರ!

ಸುನಂದಾ ಗೋಸಿ
ಬೇಕಾಗುವ ಸಾಮಗ್ರಿಗಳು :
1ಕಪ್ ರವೆ
1ಈರುಳ್ಳಿ
4ಹಸಿಮೆಣಸಿನಕಾಯಿ
1ಟೊಮ್ಯಾಟೋ
1/4ಕಪ್ ಹಸಿ ಬಟಾಣಿ(ಹೆಚ್ಚಿದ್ದು)
1/4ಕಪ್ ಬೀನ್ಸ್(ಹೆಚ್ಚಿದ್ದು)
1/4ಕಪ್ ಕ್ಯಾರಟ್(ಹೆಚ್ಚಿದ್ದು)
1/4ಕಪ್ ದಪ್ಪ ಮೆಣಸಿನಕಾಯಿ(ಹೆಚ್ಚಿದ್ದು)
1/4ಕಪ್ ಆಲೂಗಡ್ಡೆ(ಹೆಚ್ಚಿದ್ದು)
ರುಚಿಗೆ ತಕ್ಕ ಉಪ್ಪು
ನಿಂಬೆರಸ(ಸ್ವಲ್ಪ)
ಕೋತಂಬರಿ ಸೊಪ್ಪು(ಹೆಚ್ಚಿದ್ದು)
ಒಗ್ಗರಣೆಗೆ :
ಎಣ್ಣೆ(ಸ್ವಲ್ಪ)
ಸಾಸಿವೆ(ಸ್ವಲ್ಪ)
ಕರಿಬೇವು(ಸ್ವಲ್ಪ)
ಕಡಲೇಬೇಳೆ(ಸ್ವಲ್ಪ)
ಉದ್ದಿನಬೇಳೆ(ಸ್ವಲ್ಪ)
ಮಾಡುವ ವಿಧಾನ :
ಮೊದಲಿಗೆ ರವೆಯನ್ನು ಸ್ವಲ್ಪ ಎಣ್ಣೆ ಹಾಕಿ ಹದವಾಗಿ ಹುರಿದುಕೊಳ್ಳಿ. ಇನ್ನೊಂದು ಕಡೆ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೋ ಮೊದಲಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
ಆನಂತರ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಾದ ಬಳಿಕ ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ, ಕರಿಬೇವು, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ತಿರುವಾಡಿ. ಈಗ ಹೆಚ್ಚಿಕೊಂಡ ತರಕಾರಿ ಹಾಗೂ ಬಟಾಣಿಯನ್ನು ಇದಕ್ಕೆ ಹಾಕಿ. ತರಕಾರಿ ಬೆಂದ ನಂತರ ಟೊಮ್ಯಾಟೋ ಹಾಗೂ ಎರಡು ಲೋಟಾ ನೀರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
ಕುದಿ ಬಂದ ನಂತರ ಹುರಿದಿಟ್ಟುಕೊಂಡ ರವೆಯನ್ನು ನಿಧಾನವಾಗಿ ಅದಕ್ಕೆ ಸುರಿಯುತ್ತಾ, ತಿರುಗಿಸುತ್ತಿರಿ. ರವೆ ಬೆಂದ ನಂತರ ನಿಂಬೆಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ.
ಕೊನೆಯಲ್ಲಿ ಹೆಚ್ಚಿದ ಕೋತಂಬರಿ ಸೊಪ್ಪನ್ನು ಹಾಕಿ. ಈಗ ರುಚಿಯಾದ ಉಪ್ಪಿಟ್ಟು ರೆಡಿ. ಇಷ್ಟವಿದ್ದವರು ಕಾಯಿತುರಿ ಹಾಕಿಕೊಳ್ಳಬಹುದು. ಬೇಕಿದ್ದರೆ ಬಟಾಣಿ ಬದಲು ಅವರೇಕಾಳು ಹಾಕಿ ಮಾಡಬಹುದು.



Click it and Unblock the Notifications
