Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದಿಢೀರ್ ಅವಲಕ್ಕಿ ಒಗ್ಗರಣೆ
ದಿಢೀರ್ ತಿಂಡಿ ಬೇಕೆ? ಹಾಗಿದ್ದರೆ ಅವಲಕ್ಕಿ ಒಗ್ಗರಣೆ ಮಾಡಲು ಅಣಿಯಾಗಿ. ಅರ್ಧ ಗಂಟೆಯೊಳಗೆ ತಿಂಡಿ ತಯಾರಿಸಬಹುದು. ರುಚಿ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ನಾನು ದಪ್ಪ ಅವಲಕ್ಕಿ ಬಳಸಿದ್ದೇನೆ. ಹಲವಾರು ಮಂದಿ ನಾನಾ ತರವಾಗಿ ಅವಲಕ್ಕಿ ಒಗ್ಗರಣೆ ಮಾಡುತ್ತಾರೆ. ನನಗೆ ತಿಳಿದ ಒಂದು ವಿಧಾನವನ್ನು ಇಲ್ಲಿ ಹೇಳಿದ್ದೇನೆ. ಪ್ರಯತ್ನಿಸಿ ನೋಡಿ.
ಇವಿಷ್ಟನ್ನು ಹೊಂದಿಸಿಕೊಳ್ಳಿ:
ದಪ್ಪ ಅವಲಕ್ಕಿ: ¼ ಕೆಜಿ
ಈರುಳ್ಳಿ: 2, ಸಣ್ಣ್ಣಗೆ ಹೆಚ್ಚಿಕೊಳ್ಳಬೇಕು
ಹಸಿ ಮೆಣಸಿನಕಾಯಿ: 4-5(ಅಥವಾ ನಿಮ್ಮ ರುಚಿಗೆ ತಕ್ಕಂತೆ), ಉದ್ದುದ್ದ ಹೆಚ್ಚಿಕೊಳ್ಳ ಬೇಕು
ಮಿಶ್ರ ತರಕಾರಿಗಳು: ಹಸಿ ಬಟಾಣಿ, ಕ್ಯಾರೆಟ್(ಅಥವಾ ನಿಮಗಿಷ್ಟವಾದ ತರಕಾರಿಗಳು)
ಕೊತ್ತಂಬರಿ ಸೊಪ್ಪು: 1 ಹಿಡಿ, ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು
ಕೊಬ್ಬರಿ ತುರಿ: 2 ಟೇಬಲ್ ಚಮಚ (ಅಲಂಕರಿಸಲು)
ನಿಂಬೆ ರಸ: 1 ಟೇಬಲ್ ಚಮಚ
ಒಗ್ಗರಣೆಗೆ
ಎಣ್ಣೆ: 3 ಟೇಬಲ್ ಚಮಚ
ಸಾಸಿವೆ: ' ಟೀ ಚಮಚ
ಕಡಲೆ ಬೇಳೆ: ' ಟೇಬಲ್ ಚಮಚ
ಉದ್ದ್ದಿನ ಬೇಳೆ: ' ಟೇಬಲ್ ಚಮಚ
ಅರಿಶಿಣ: ' ಟೀ ಚಮಚ
ಕರಿಬೇವಿನ ಎಲೆಗಳು
ಎಣ್ಣೆಯನ್ನು ಅಳತೆ ಪ್ರಕಾರ ನಾನು ಒಗ್ಗರಣೆಗೆ ಬಳಸಿದ್ದಿಲ್ಲ.ನಿಮ್ಮ ರುಚಿಗೆ ತಕ್ಕಂತೆ ನೀವು ಎಣ್ಣೆಯನ್ನು ಬಳಸಬಹುದು. ಅಂತಿಮವಾಗಿ ಅವಲಕ್ಕಿ ಒಗ್ಗರಣೆ ಜಿಡ್ಡು ಜಿಡ್ಡಾಗಿರಬಾರದು ಅಷ್ಟೆ. ಮೊದಲು ಅವಲಕ್ಕಿಯನ್ನು ತೊಳೆದು ಹಾಗೇ 5 ರಿಂದ 10 ನಿಮಿಷಗಳ ಕಾಲ ಬಿಟ್ಟರೆ ಚೆನ್ನಾಗಿ ನೆನೆಯುತ್ತದೆ. ಅವಲಕ್ಕಿಯನ್ನು ಬೆರಳಿನಿಂದ ಒತ್ತಿದರೆ ಎರಡು ತುಂಡಾಗುತ್ತದೆ, ಆಗ ಅವಲಕ್ಕಿ ಚೆನ್ನಾಗಿ ನೆನೆಸಿದೆ ಎಂದರ್ಥ. ಸೋಸುವ ಪಾತ್ರೆಗೆ ಹಾಕಿ ನೀರನ್ನು ತೆಗೆಯಿರಿ.
ತಯಾರಿಸುವ ವಿಧಾನ:
1. ಬಾಣೆಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಕಿ ಸಿಡಿಸಿ.
2. ಸಾಸಿವೆ ಚಿಟುಗುಟ್ಟುವುದನ್ನು ನಿಲ್ಲಿಸಿದ ಕೂಡಲೆ ಕಡಲೆ ಬೇಳೆ,ಉದ್ದಿನ ಬೇಳೆ, ಅರಿಶಿಣ ಮತ್ತು ಕರಿಬೇವು ಹೀಗೆ ಒಂದಾದ ನಂತರ ಒಂದು ಬಾಣಲೆ ಸೇರಲಿ.
3. ಈರುಳ್ಳಿ ಹಾಕಿ ಚೆನ್ನಾಗಿ ತಿರುವಿ. ಮೆದುವಾಗುವವರೆಗೂ ಹುರಿಯಿರಿ.
4. ತರಕಾರಿಗಳನ್ನು ಹಾಕಿ ನಾಜೂಕಾಗಿ ತಿರುವಿ. ರುಚಿಗೆ ತಕ್ಕಷ್ಟು ಉಪ್ಪು/ಅವಲಕ್ಕಿಯನ್ನು ಹಾಕಿ ಅಂತಿಮವಾಗಿ ಎಲ್ಲವನ್ನೂ ಕಲೆಸಿ.
5. ಉರಿಯನ್ನು ಕಡಿಮೆ ಮಾಡಿ ಬಾಣಲೆ ಮೇಲೆ ಮುಚ್ಚಿಡಿ. 2-3 ನಿಮಿಷಗಳ ಬಳಿಕ ಒಲೆಯನ್ನು ನಂದಿಸಿ. ನಿಂಬೆ ರಸವನ್ನು ಹಾಕಿ ಚೆನ್ನಾಗಿ ಕಲೆಸಿ. ಬಡಿಸುವುದಕ್ಕೂ ಮುನ್ನ 5 ನಿಮಿಷ ಹಾಗೇ ಬಿಡಿ. ಕೊನೆಯದಾಗಿ ಕೊಬ್ಬರಿ ತುರಿ ಹಾಗೂ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.



Click it and Unblock the Notifications
