Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಳೆಗಾಲದ ಚಳಿಗೆ ಬಿಸಿಬಿಸಿ ಆಲೂ ಪರಾಟ

* ಭಾರತಿ ಎಚ್.ಎಸ್., ಜಯನಗರ
ಬೇಕಾಗುವ ಸಾಮಾನುಗಳು
ಗೋದಿ ಹಿಟ್ಟು 4 ಚಪಾತಿಗೆ ಆಗುವಷ್ಟು
ಬೇಯಿಸಿದ ಆಲುಗೆಡ್ಡೆ
ಕೆಂಪು ಮೆಣಸಿನ ಪುಡಿ 1/2 ಚಮಚ
ಅರಿಸಿನ ಪುಡಿ 1/2 ಚಮಚ
ಹೆಚ್ಚಿದ ಹಸಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ತುರಿದ ಶುಂಟಿ 1/2 ಚಮಚ
ರುಚಿಗೆ ಉಪ್ಪು
ತಯಾರಿಸುವ ವಿಧಾನ
ಮೊದಲು ಒಂದು ಬಟ್ಟಲಿಗೆ ಬೇಯಿಸಿದ ಆಲೂಗಡ್ಡೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಆದಕ್ಕೆ ಮಿಕ್ಕ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬೆರೆಸಿರಿ. ನಂತರ ಮುಷ್ಠಿಯಲ್ಲಿ ನಿಂಬೆಹಣ್ಣು ಗಾತ್ರದ ಸಣ್ಣ ಸಣ್ಣ ಉಂಡೆ ಮಾಡಿ ತೆಗೆದಿಡಿ.
ಗೋದಿ ಹಿಟ್ಟನ್ನು ಚಪಾತಿಯ ಹದಕ್ಕೆ ನೀರು ಹಾಕಿ ಕಲಿಸಿಡಿ. ಹಿಟ್ಟನ್ನು ಪೂರಿ ಆಕಾರದಷ್ಟು ಕೈಯಲ್ಲಿ ತಟ್ಟಿಕೊಂಡು ಅದರ ಮಧ್ಯೆ ಆಲೂ ಉಂಡೆಗಳನ್ನು ಇಟ್ಟು ಹಿಟ್ಟಿನಿಂದ ಪೂರ್ತಿಯಾಗಿ ಮುಚ್ಚಿರಿ. ಒಬ್ಬಟ್ಟಿನ ಹೂರಣ ತುಂಬುವಂತೆ ಆಲೂ ಉಂಡೆಯನ್ನು ತುಂಬಬೇಕು.
ಗೋದಿ ಹಿಟ್ಟನ್ನು ಹಾಕಿಕೊಂಡು ಸ್ವಲ್ಪ ದಪ್ಪವಾಗಿ ಲಟ್ಟಿಸಿ ತವಾದ ಮೇಲೆ ಎಣ್ಣೆ ಅಥವಾ ಬೆಣ್ಣೆಯನ್ನು ಹಚ್ಚಿ ಎರಡು ಬದಿ ಹದವಾಗಿ ಬೇಯಿಸಿ. ಈಗ ರುಚಿಯಾದ ಆಲೂ ಪರಾಟ ಅಥವಾ ಆಲೂ ಪರೋಟ ರೆಡಿ. ಈ ಚಳಿಗೆ ಬಿಸಿ ಬಿಸಿ ಪರಾಟ ತಿನ್ನಲು ತುಂಬಾ ರುಚಿ.



Click it and Unblock the Notifications
