Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪಾಲಾಕ್ ಇಡ್ಲಿಗೆ ಆಗುವಿರಿ ಕ್ಲೀನ್ ಬೋಲ್ಡ್

ಬೇಕಾಗುವ ಸಾಮಾಗ್ರಿಗಳು:
* ಕತ್ತರಿಸಿದ ಪಾಲಾಕ್ ಸೊಪ್ಪು 2 ಕಪ್
* ಒಂದು ಪ್ಯಾಕೆಟ್ ರೆಡಿ ಮೇಡ್ ಇಡ್ಲಿ ಮಿಕ್ಸ್( ಮನೆಯಲ್ಲಿಯೆ ಬೇಕಾದರೂ ಇಡ್ಲಿ ಹಿಟ್ಟು ತಯಾರಿಸಬಹುದು).
* 1/ 2ಚಮಚ ಉಪ್ಪು
* 2-3 ಕತ್ತರಿಸಿದ ಹಸಿಮೆಣಸಿನ ಕಾಯಿ
* ಸ್ವಲ್ಪ ಗೋಡಂಬಿ ಮತ್ತು ಬಾದಾಮಿಯನ್ನು ಪುಡಿ ಮಾಡಿ
ಇಡ್ಲಿ ಹಿಟ್ಟಿಗೆ ಸೇರಿಸುವ ಮಿಶ್ರಣ:
* 2 ಕಪ್ ಮೊಸರು (ಮೃದುವಾಗುವವರೆಗೆ ಸ್ಪೂನ್ ನಿಂದ ಚೆನ್ನಾಗಿ ಕದಡಬೇಕು)
* 1/2 ಚಮಚ ಉಪ್ಪು
* ಎಣ್ಣೆ 2 ಚಮಚ
* 1/2 ಚಮಚ ಜೀರಿಗೆ
* 2 ಹಸಿ ಮೆಣಸಿನ ಕಾಯಿ
* ಸ್ವಲ್ಪ ಕರಿ ಬೇವಿನ ಎಲೆ
ತಯಾರಿಸುವ ವಿಧಾನ:
1. ಪ್ಯಾಕೆಟ್ ನಲ್ಲಿರುವ ವಿವರಗಳನ್ನು ಚೆನ್ನಾಗಿ ಓದಿ ಅದರ ಪ್ರಕಾರ ಮಿಶ್ರ ಮಾಡಿ.
2. ಪಾಲಾಕ್ ಸೊಪ್ಪು ಮತ್ತು ಹಸಿ ಮೆಣಸನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಅರೆಯಬೇಕು.
3. ಈ ಮಿಶ್ರಣವನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಅರ್ಧ ಚಮಚ ಉಪ್ಪು ಸೇರಿಸಿ ಮಿಶ್ರ ಮಾಡಬೇಕು.
4. ಈ ಹಿಟ್ಟನ್ನು ಇಡ್ಲಿ ಪಾತ್ರೆಗೆ ಹಾಕಿ ಅದರ ಮೇಲೆ ಅದರ ಮೇಲೆ ಒಂದೊಂದು ಗೋಡಂಬಿ ಮತ್ತು ಬಾದಾಮಿ ಪುಡಿಯನ್ನು ಹಾಕಿ ನಂತರ ಇಡ್ಲಿ ಬೇಯಿಸುವ ಸಮಯದವರೆಗೆ ಬೇಯಿಸಬೇಕು. ನಂತರ ಬೆಂದ ಇಡ್ಲಿಯನ್ನು ಬೇರೆ ಪಾತ್ರೆಯಲ್ಲಿ ತೆಗೆದಿಡಿ.
* ಈಗ ಬಟ್ಟಲಿನಲ್ಲಿರುವ ಇಡ್ಲಿಯ ಮೇಲೆ ಚೆನ್ನಾಗಿ ಕದಡಿದ ಮೊಸರನ್ನು ಸುರಿಯಬೇಕು.
* 2 ಚಮಚ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಮತ್ತು ಜೀರಿಗೆ ಸೇರಿಸಿ, ಸಾಸಿವೆ ಚಟಪಟ ಶಬ್ದ ಮಾಡುವಾಗ ಕಸಿಮೆಣಸಿನ ಕಾಯಿ, ಟೊಮೆಟೊ, ಉಪ್ಪು ಮತ್ತು ಕರಿ ಬೇವಿನ ಎಲೆಯನ್ನು ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಬಿಸಿ ಮಾಡಬೇಕು.
*ಈ ಮಿಶ್ರಣವನ್ನು ಸೌಟ್ ನಿಂದಲೇ ಪೇಸ್ಟ್ ರೀತಿ ಮಾಡಿ ಅದನ್ನು ಮೊಸರು ಸುರಿದಿರುವ ಇಡ್ಲಿ ಮೇಲೆ ಸುರಿಯ ಬೇಕು.
ಈಗ ತಯಾರಾದ ಪಾಲಾಕ್ ಇಡ್ಲಿಯ ರುಚಿಯನ್ನು ಸವೆದು ನೋಡಿ. ಪಾಲಕ್ ಇಡ್ಲಿಗೆ ಕ್ಲೀನ್ ಬೋಲ್ಡ್ ಆಗುವುದು ಗ್ಯಾರಂಟಿ.



Click it and Unblock the Notifications
